ಗೌಡರ ಯುವ ಸೇವಾ ಸಂಘ (ರಿ.) ಸುಳ್ಯ ಇದರ ವಾರ್ಷಿಕ ಕಾರ್ಯಕ್ರಮ ಹಾಗೂ ವಧು-ವರರ ಗೃಹ ಪ್ರವೇಶದ ಶುಭಸಮಾರಂಭವು 2026ರ ಮೇ ತಿಂಗಳ 23 ರಂದು ಹಮ್ಮಿಕೊಂಡಿದ್ದು, ಸುಳ್ಯ ತಾಲೂಕು ಮತ್ತು ಕೊಡಗು ಜಿಲ್ಲೆಯ ಚೆಂಬು, ಪೆರಾಜೆ, ಕೊಡಗು ಸಂಪಾಜೆ, ಕೇರಳ ರಾಜ್ಯದ ದೇಲಂಪಾಡಿ, ಬಂದಡ್ಕ, ಕಲ್ಲಪಳ್ಳಿ ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಗೌಡ ಸಮಾಜದ ವಿದ್ಯಾರ್ಥಿಗಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ತಾವುಗಳಿಸಿದ ಅಂಕ ಪಟ್ಟಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ದಿನಾಂಕ 20-05-2026 ಬುಧವಾರದೊಳಗೆ ಪಿ.ಎಸ್. ಗಂಗಾಧರ ಅಧ್ಯಕ್ಷರು, ಅಥವಾ ದಿನೇಶ್ ಮಡ್ತಿಲ ಸಂಚಾಲಕರು, ಪ್ರತಿಭಾ ಪುರಸ್ಕಾರ ಸಮಿತಿ, ಮೊ : 7760240537,, ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇಲ್ಲಿಗೆ ಕಳುಹಿಸಿ ಕೊಡಬೇಕಾಗಿ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.ಮೇ.23ರ ಕಾರ್ಯಕ್ರಮದಲ್ಲಿ ವಿಶೇಷವಾಗಿ 50 ವರ್ಷ ದಾಂಪತ್ಯ ಜೀವನ ನಡೆಸುತ್ತಿರುವ ಸಮಾಜದ ದಂಪತಿಗಳನ್ನು ಗುರುತಿಸಿ, ಸಮಾರಂಭಕ್ಕೆ ಆಹ್ವಾನಿಸಿ, ಅಭಿನಂದಿಸಲಾಗುವುದು. ದಂಪತಿಗಳ ಆಧಾರ್ ಕಾರ್ಡ್ ಪ್ರತಿ ಮತ್ತು ವಿವಾಹವಾದ ದಿನಾಂಕದೊಂದಿಗೆ ದಿನಾಂಕ 20-05-2026 ಬುಧವಾರದೊಳಗೆ ಪಿ.ಎಸ್. ಗಂಗಾಧರ ಅಧ್ಯಕ್ಷರು, ಅಥವಾ ಸ್ಥಳೀಯ ಸಂಘದ ನಿರ್ದೇಶಕರು ಅಥವಾ ಸುಳ್ಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಅವರನ್ನು ಸಂಪರ್ಕಿಸಬೇಕೆಂದು (ಮೊ : 8496866368) ಪ್ರಕಟಣೆಯಲ್ಲಿ ತಿಳಿಸಲಾಗಿದೆ.




















































