Author name: Tejas

ಅರಂತೋಡು ಎಸ್.ಕೆ.ಎಸ್.ಬಿ.ವಿ ಯ ನೂತನ ಸಮಿತಿ ರಚನೆಅಧ್ಯಕ್ಷರಾಗಿ ಫರಾಝ್ ಮೊಟ್ಟೆಂಗಾರ್, ಪ್ರ. ಕಾರ್ಯದರ್ಶಿಯಾಗಿ ಹಫೀಝ್ ಆಯ್ಕೆ

ಸಮಸ್ತ ಕೇರಳ ಸುನ್ನಿ ಬಾಲವೇದಿ ಅರಂತೋಡು ಶಾಖಾ ಮಟ್ಟದ ವಾರ್ಷಿಕ ಮಹಾ ಸಭೆಯು ಎ.28 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಖತೀಬರಾದ ಬಹು| ಆಸಿಫ್ ಅಝ್ಹರಿ ದುವಾ ನೆರವೇರಿಸಿದರು.ಸದರ್ ರಪೂಫ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಶುಭ ಹಾರೈಸಿದರು. ಕಾರ್ಯದರ್ಶಿ ಹಫೀಝ್ ಸ್ವಾಗತಿಸಿ ನವಾಝ್ ಲೆಕ್ಕ ಪತ್ರಗಳನ್ನು ಮಂಡಿಸಿದರು.ಸಭೆಯಲ್ಲಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಫರಾಝ್ ಮೊಟ್ಟೆಂಗಾರ್, ಪ್ರ.ಕಾರ್ಯದರ್ಶಿಯಾಗಿ ಹಫೀಝ್ ಕೊಡಂಕೇರಿ, ಕೋಶಾಧಿಕಾರಿಯಾಗಿ ರುಫೈಝ್, ಉಪಾಧ್ಯಕ್ಷರುಗಳಾಗಿ

ಅರಂತೋಡು ಎಸ್.ಕೆ.ಎಸ್.ಬಿ.ವಿ ಯ ನೂತನ ಸಮಿತಿ ರಚನೆಅಧ್ಯಕ್ಷರಾಗಿ ಫರಾಝ್ ಮೊಟ್ಟೆಂಗಾರ್, ಪ್ರ. ಕಾರ್ಯದರ್ಶಿಯಾಗಿ ಹಫೀಝ್ ಆಯ್ಕೆ Read More »

ಕಾಂಗ್ರೆಸ್‌ಗೆ ಐತಿಹಾಸಿಕ ಜಯ: 40 ವರ್ಷಗಳ ಬಿಜೆಪಿ ಆಡಳಿತ ಅಂತ್ಯ

ಗುಜರಾತ್‌ನ ಅಂಬಾಜಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಬಿಜೆಪಿಯ 40 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯಹಾಡಿದೆ. ಒಟ್ಟು 24 ಸ್ಥಾನಗಳಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ ಕೇವಲ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆಡಳಿತ ವಿರೋಧಿ ಅಲೆ, ಅಭಿವೃದ್ಧಿ ಕೆಲಸಗಳ ಕೊರತೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು ಬಿಜೆಪಿಯ ಪತನಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಈ ಭರ್ಜರಿ ಗೆಲುವು ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ಕಾಂಗ್ರೆಸ್‌ಗೆ ಐತಿಹಾಸಿಕ ಜಯ: 40 ವರ್ಷಗಳ ಬಿಜೆಪಿ ಆಡಳಿತ ಅಂತ್ಯ Read More »

ಕೋಡಿಮಠದ ಶ್ರೀಗಳಿಂದ ಮತ್ತೊಂದು ಭವಿಷ್ಯ ನುಡಿ

ಕೋಡಿಮಠದ ಶ್ರೀಗಳು ಇತ್ತೀಚೆಗೆ ಮತ್ತೊಂದು ಭವಿಷ್ಯ ನುಡಿದಿದ್ದು, ಮುಂದಿನ ದಿನಗಳಲ್ಲಿ ಅನ್ನ ಮತ್ತು ನೀರಿಗೂ ಹಾಹಾಕಾರ ಶುರುವಾಗಲಿದೆ. ಹವಾಮಾನ ವೈಪರೀತ್ಯದಿಂದ ಪ್ರಕೃತಿಯಲ್ಲಿ ಭಾರೀ ಏರುಪೇರಾಗಿ, ದೇಶದ ಹಲವು ಭಾಗಗಳಲ್ಲಿ ತೀವ್ರ ಸಮಸ್ಯೆ ಎದುರಾಗಲಿದೆ. ಅಪಮೃತ್ಯುಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ, ಕರ್ನಾಟಕಕ್ಕೆ ಯಾವುದೇ ತೊಂದರೆ ಆಗುವುದಿಲ್ಲ

ಕೋಡಿಮಠದ ಶ್ರೀಗಳಿಂದ ಮತ್ತೊಂದು ಭವಿಷ್ಯ ನುಡಿ Read More »

ಕೇಂದ್ರ ಸರ್ಕಾರದಿಂದ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ

ಸುಳ್ಯ: ಕೇಂದ್ರ ಸರ್ಕಾರದ ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ ಯೋಜನೆಯಡಿ  ​ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ನೇತೃತ್ವದಲ್ಲಿ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸುಳ್ಯದ ಗುತ್ತಿಗಾರಿನಲ್ಲಿ ಅಳವಡಿಸಿರುವ ವಿಶೇಷ ಪ್ರಾತಕ್ಷಿಕೆ ಕುರಿತಂತೆ ಇಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಅಡಿಕೆ ಬೆಳೆಗಾರರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆ ಚುಕ್ಕೆ ರೋಗವನ್ನು

ಕೇಂದ್ರ ಸರ್ಕಾರದಿಂದ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ Read More »

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕ ಹೃದಯ ಘಾತದಿಂದ ನಿಧನ

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯೂಲೆನ್ಸ್ ಚಾಲಕ ಮೃತಪಟ್ಟಿರುವುದಾಗಿ ವರದಿಯಾಗಿದೆ.ಅಂಬ್ಯುಲೆನ್ಸ್ ಚಾಲಕ ಮಾದವ (50 ವರ್ಷ ) ಎಂಬವರು ಮ್ರತಪಟ್ಟ ವ್ಯಕ್ತಿಯಾಗಿದ್ದಾರೆ.ಹೃದಯಾಘಾತದಿಂದ ಮೃತಪಟಿರುವುದಾಗಿ ಹೇಳಗಾಗುತ್ತಿದೆ. ಮೃತ ದೇಹವನ್ನು ಸುಳ್ಯ ತಾಲೂಕು ಆಸ್ಪತ್ರೆಯ ಮೋರ್ಚರಿಯಲ್ಲಿ ಇಡಲಾಗಿರುವುದಾಗಿ ತಿಳಿದು ಬಂದಿದೆ. ಮೃತರು ಕಾಣಿಯೂರಿನವರ ರಾಗಿದ್ದು ಕಳೆದ ಒಂದು ವರ್ಷಗಳ ಹಿಂದೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡು ಬಂದಿದ್ದರು. ಮೃತರು ಪತ್ನಿ, ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕ ಹೃದಯ ಘಾತದಿಂದ ನಿಧನ Read More »

ರಾಜ್ಯದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ’ ಸಾಧ್ಯತೆಹವಾಮಾನ ಇಲಾಖೆ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ಏಪ್ರಿಲ್ 30 ಮತ್ತು ಮೇ 1 ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ, ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಏಪ್ರಿಲ್ 29 ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ’ ಸಾಧ್ಯತೆಹವಾಮಾನ ಇಲಾಖೆ ಎಚ್ಚರಿಕೆ Read More »

ಗುಜರಾತ್ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು!

ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 15 ಪುರಸಭೆ ನಿಗಮಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಏಪ್ರಿಲ್ 26 ರಂದು ನಡೆದ ಈ ಚುನಾವಣೆಯಲ್ಲಿ 15 ಪಾಲಿಕೆಗಳು, 84 ಪುರಸಭೆಗಳು, 34 ಜಿಲ್ಲಾ ಪಂಚಾಯತ್‌ಗಳು ಮತ್ತು 260 ತಾಲೂಕು ಪಂಚಾಯತ್‌ಗಳು ಸೇರಿದ್ದವು. ಅಹಮದಾಬಾದ್‌, ಸೂರತ್, ವಡೋದರಾ, ರಾಜ್‌ಕೋಟ್, ಭಾವನಗರ, ಜಾಮ್‌ನಗರ ಮುಂತಾದ ಪ್ರಮುಖ ನಗರಗಳು ಈ ಚುನಾವಣೆಯ ವ್ಯಾಪ್ತಿಗೆ ಒಳಪಟ್ಟಿದ್ದವು. ತಾಲೂಕು ಪಂಚಾಯಿತಿ ಫಲಿತಾಂಶಗಳಲ್ಲಿ ಬಿಜೆಪಿ 215, ಕಾಂಗ್ರೆಸ್ 15-20 ಮತ್ತು ಎಎಪಿ

ಗುಜರಾತ್ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು! Read More »

ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ಕು ಮಂದಿ ಸಾವು!

ಗಂಡ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳು ಕಲ್ಲಂಗಡಿ ಹಣ್ಣು ತಿಂದು ಅಸ್ವಸ್ಥರಾಗಿ ಮ್ರತಪಟ್ಟ ಘಟನೆ ಮುಂಬಯಿಂದ ವರದಿಯಾಗಿದೆ. ಶನಿವಾರ ರಾತ್ರಿ ವೀಕೆಂಡ್ ಹಿನ್ನಲೆಯಲ್ಲಿ ಅವರು ತಮ್ಮ ಸ್ನೇಹಿತರಿಗೆ ಮನೆಯಲ್ಲೇ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ರಾತ್ರಿ ಬಂದ ಅತಿಥಿಗಳು ಊಟ ಮಾಡಿ ಮನೆಗೆ ತೆರಳಿದ್ದರು. ಅಪ್ಪ-ಅಮ್ಮ-ಮಕ್ಕಳು ರಾತ್ರಿ ಕಲ್ಲಂಗಡಿ ಹಣ್ಣು (Watermelon) ಕಟ್ ಮಾಡಿ ತಿಂದು ಮಲಗಿದ್ದರು. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ನಾಲ್ವರಿಗೂ ವಾಂತಿ, ಭೇದಿ ಶುರುವಾಗಿತ್ತು. ಬೆಳಗಿನ ಜಾವವಾಗುವಷ್ಟರಲ್ಲಿ ಎದ್ದು ನಿಲ್ಲಲೂ ಆಗದಂತಹ ಸುಸ್ತು ಅವರನ್ನು ಆವರಿಸಿತ್ತು.ಹೀಗಾಗಿ,

ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ಕು ಮಂದಿ ಸಾವು! Read More »

ಪಿಯುಸಿಯಲ್ಲಿ ಕಲಾ ವಿಭಾಗ ಯಾಕೆ ಆಯ್ಕೆ ಮಾಡಿಕೊಳ್ಳಬೇಕು?

ಎಸ್‌ಎಸ್‌ಎಲ್‌ಸಿ ನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಮುಂದಿರುವ ಪ್ರಮುಖ ಪ್ರಶ್ನೆ – ಮುಂದಿನ ವಿದ್ಯಾಭ್ಯಾಸಕ್ಕಾಗಿ ಯಾವ ವಿಭಾಗವನ್ನು ಆಯ್ಕೆ ಮಾಡಬೇಕು ಎಂಬುದು. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ. ಸಾಮಾನ್ಯವಾಗಿ ಹೆಚ್ಚಿನವರು ವಿಜ್ಞಾನ (Science) ಅಥವಾ ವಾಣಿಜ್ಯ (Commerce) ವಿಭಾಗವನ್ನು ಆಯ್ಕೆ ಮಾಡುತ್ತಾರೆ. ಆದರೆ ಸಮಾಜದ ನಿರ್ಮಾಣಕ್ಕೆ, ಉತ್ತಮ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ನೂರಾರು ಉದ್ಯೋಗಾವಕಾಶಗಳಿಗೆ ದಾರಿ ತೋರುವ ಪ್ರಮುಖ ವಿಭಾಗವೆಂದರೆ ಕಲಾ ವಿಭಾಗ

ಪಿಯುಸಿಯಲ್ಲಿ ಕಲಾ ವಿಭಾಗ ಯಾಕೆ ಆಯ್ಕೆ ಮಾಡಿಕೊಳ್ಳಬೇಕು? Read More »

ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ, ಬಂಧನ ಜೇಸಿಐ ಕುಟುಂಬ ಸಮ್ಮಿಲನದೊಂದಿಗೆ ಪೂರ್ವ ವಲಯಾಧ್ಯಕ್ಷರ ಸಮ್ಮೀಲನ, ಜೇಎಸಿ ಚೇರ್ಮನ್  ಭೇಟಿ

ಜೇಸಿಐ ಸುಳ್ಯ ಪಯಸ್ವಿನಿಘಟಕದಲ್ಲಿ ಬಂಧನ  ಅಧೀಕೃತ ಭೇಟಿ ಕಾರ್ಯಕ್ರಮವನ್ನು  ಎ.25ರಂದು ಸಂಚಯ ನಿವಾಸ ಚೂಂತಾರು ಇಲ್ಲಿ ಹಮ್ಮಿಕೊಳ್ಳಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ  ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜೇಎಸಿ ಚೇರ್ಮನ್ ಜೇಸಿಐ ಸೆನೆಟರ್ ಅಬ್ದುಲ್ ಜಬ್ಬಾರವರು ಜೇಸಿಐ ಸುಳ್ಯ ಪಯಸ್ವಿನಿಯ ಘಟಕದ ಕಾರ್ಯ ಚಟುವಟಿಕೆಗಳು ಮೂಲಕ ವಲಯ, ರಾಷ್ಟ್ರ ಮಟ್ಟದಲ್ಲಿ  ಗುರುತಿಸಿ ಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳುತ್ತಾ, ಶುಭ ಹಾರೈಸಿದರು.ಜೇಸಿಐ ವಲಯ 15ರ ವಲಯಾಧ್ಯಕ್ಷರಾದ ಜೆ.ಎಪ್.ಎಪ್

ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ, ಬಂಧನ ಜೇಸಿಐ ಕುಟುಂಬ ಸಮ್ಮಿಲನದೊಂದಿಗೆ ಪೂರ್ವ ವಲಯಾಧ್ಯಕ್ಷರ ಸಮ್ಮೀಲನ, ಜೇಎಸಿ ಚೇರ್ಮನ್  ಭೇಟಿ Read More »

error: Content is protected !!
Scroll to Top