Author name: Tejas

ಬಡತನದ ನೋವಿನಲ್ಲಿ ಸುಶ್ಮಿತಾ ಮನೆಯಲ್ಲಿ ಅರಳಿದೆ ದೇಶದ ಗಡಿಕಾಯುವ ನಗು

ಬಡನದಲ್ಲಿ ಬೆಳೆದು ತನ್ನ ತಂದೆಯನ್ನು ಎಳವೆಯಲ್ಲಿ ಕಳೆದುಕೊಂಡು ಕುಟುಂಬದ ಜವಾಬ್ದಾರಿ ಹೆಗಲಮೇಲೆರಿಸಿಕೊಂಡ ಹಳ್ಳಿ ಯುವತಿಯೊಬ್ಬರು ದೇಶ ಕಾಯುವ ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಗೊಂಡು ಸುಳ್ಯ ತಾಲೂಕು ಸಂಭ್ರಮ ಪಡುತ್ತಿದೆ.ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಮೇಲಡ್ತಲೆ ಬೆದ್ರಪಣೆ ದಿ. ನಾಗಪ್ಪ ಗೌಡ ಎಂ.ಎ., ಜಾನಕಿ ದಂಪತಿಯ ಹಿರಿಯ ಪುತ್ರಿ ಸುಶ್ಮಿತ ಎಸ್.ಎಸ್‌.ಸಿ.ಜಿಡಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿ ಬಿ.ಎಸ್.ಎಫ್ ಗೆ ಆಯ್ಕೆಯಾದ ತಾಲೂಕಿನ ಹೆಮ್ಮೆಯ ಪ್ರತಿಭೆ. ತಂದೆ ತಾಯಿ ಕೂಲಿ ಕಾರ್ಮಿಕರಾಗಿ ದುಡಿದು ಸುಶ್ಮಿತಾ,ತಂಗಿ ನಿಶ್ಮಿತಾರನ್ನು ಸಾಕುತ್ತಿದ್ದರು.ತಂದೆಯ ಅಕಾಲಿಕ ನಿಧನದಿಂದ ಸುಶ್ಮಿತಾ […]

ಬಡತನದ ನೋವಿನಲ್ಲಿ ಸುಶ್ಮಿತಾ ಮನೆಯಲ್ಲಿ ಅರಳಿದೆ ದೇಶದ ಗಡಿಕಾಯುವ ನಗು Read More »

ವಿದ್ಯಾರ್ಥಿನಿಗೆ ಬೈಕಲ್ಲಿ ಬಂದು ಮೈಗೆ ಕೈ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ

ಪುನ್ಚತಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕನೋರ್ವನಿಗೆ ಮಂಗಳವಾರ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ ಘಟನೆ ವರದಿಯಾಗಿದೆ.ಕಾಲೇಜು ವಿದ್ಯಾರ್ಥಿನಿ ಸಂಜೆ ರಸ್ತೆ ಬದಿ ನಡೆದುಕೊಂಡು ಮನೆಗೆ ಹೋಗುವಾಗ ಪೆರ್ಲಂಪಾಡಿಯ ಉದಯ ಎಂಬವನು ಬೈಕಿನಲ್ಲಿ ಬಂದು ವಿದ್ಯಾರ್ಥಿನಿಯ ಮೈಗೆ ಕೈ ಹಾಕಿರುವುದಾಗಿ ವಿದ್ಯಾರ್ಥಿನಿ ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಸಿ.ಸಿ. ಕ್ಯಾಮರಾ ತಪಾಸಣೆ ನಡೆಸಿ ಕೃತ್ಯ ನಡೆಸಿರುವ ಪೆರ್ಲಂಪಾಡಿಯ ಉದಯ ಎಂಬ ಆರೋಪಿಯನ್ನು‌ ಇಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ

ವಿದ್ಯಾರ್ಥಿನಿಗೆ ಬೈಕಲ್ಲಿ ಬಂದು ಮೈಗೆ ಕೈ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ Read More »

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್‌ ಆಯ್ಕೆ

ಸಿ.ಪಿ ರಾಧಾಕೃಷ್ಣನ್‌ ಅವರು ಭಾರತದ ನೂತನ ಉಪರಾಷ್ಟ್ರಪತಿ ಆಗಿ ಆಯ್ಕೆಯಾಗಿದ್ದಾರೆ.ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಎನ್‌ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್‌ ಗೆಲುವು ಸಾಧಿಸಿದರು.452 ಮಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ.ಪ್ರತಿಸ್ಪರ್ಧಿಯಾಗಿದ್ದ ಅಭ್ಯರ್ಥಿ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಬಿ.ಸುದರ್ಶನ್ ರೆಡ್ಡಿ ಪರಾಭವಗೊಂಡರು. ಇವರಿಗೆ ಕೇವಲ 300 ಮತಗಳು ದೊರಕಿದವುಸಂಸತ್ತಿನಲ್ಲಿ ಸೆಪ್ಟೆಂಬರ್ 9ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಚುನಾವಣೆ

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್‌ ಆಯ್ಕೆ Read More »

ಧರ್ಮಸ್ಥಳ ಪ್ರಕರಣದ ಕುರಿತಾಗಿ ಅಮಿತ್ ಷಾ ಭೇಟಿ ಮಾಡಿದ ರಾಜ್ಯ ಬಿಜೆಪಿ‌ ನಿಯೋಗ

ಧರ್ಮಸ್ಥಳ ಪ್ರಕರಣದ ಕುರಿತಾಗಿ ರಾಜ್ಯ ಬಿಜೆಪಿ ನಿಯೋಗ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವಪ್ರಲ್ಲಾದ್ ಜೋಶಿ, ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ಎಸ್.ಆರ್. ವಿಶ್ವನಾಥ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನಿಯೋಗದಲ್ಲಿ ಭಾಗವಹಿಸಿದ್ದರು.ಅಮಿತ್ ಷಾ ಭೇಟಿ ಬಳಿಕ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಧರ್ಮಸ್ಥಳ ಪ್ರಕರಣದ ಕುರಿತಾಗಿ ಅಮಿತ್ ಷಾ ಭೇಟಿ ಮಾಡಿದ ರಾಜ್ಯ ಬಿಜೆಪಿ‌ ನಿಯೋಗ Read More »

ಅರ್ ಅಬ್ದುಲ್ ರಹಿಮಾನ್ (ಅಂದಾಯಿ)ಸಂಪಾಜೆ ನಿಧನ

ಸಂಪಾಜೆ ಗ್ರಾಮದ ಇ ಆರ್ ಅಬ್ದುಲ್ ರಹಿಮಾನ್ ಅಲ್ಪ ಕಾಲದ ಅಸೌಖ್ಯ ದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮನೆಗೆ ಕರೆದು ಕೊಂಡು ಬರುವ ಸಂದರ್ಭದಲ್ಲಿ ದಾರಿ ಮಧ್ಯೆ ನಿಧನರಾದರು.ಮೃತರ ಪತ್ನಿ ಮಕ್ಕಳನ್ನು ಅಗಲಿದ್ದಾರೆ.

ಅರ್ ಅಬ್ದುಲ್ ರಹಿಮಾನ್ (ಅಂದಾಯಿ)ಸಂಪಾಜೆ ನಿಧನ Read More »

ಅನ್ನ ದಾನ ವಸ್ತ್ರ ದಾನ ಮಾಡುವ ಧರ್ಮಸ್ಥಳ ಶ್ರೀ ಕ್ಷೇತ್ರದ ಅವಹೇಳನ ಸಹಿಸಲು ಅಸಾಧ್ಯ : ಶಾಸಕಿ ಭಾಗೀರಥಿ ಮುರುಳ್ಯ

ಅನ್ನ ದಾನ ವಸ್ತ್ರ ಮಾಡುವ ಧರ್ಮಸ್ಥಳ ಶ್ರೀ ಕ್ಷೇತ್ರದ ಅವಹೇಳನ ಸಹಿಸಲು ಅಸಾಧ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಧಿಗಳ ಬಳಗ ಸುಳ್ಯ,ಧರ್ಮ ಜಾಗೃತಿ ಸಮಾವೇಶ ಸಮಿತಿ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಸುಳ್ಯದ ಜಾನಕಿ ವೆಂಕಟರಮಣ ಸಭಾಭವನದಲ್ಲಿ ಸೆ.8ರಂದು ನಡೆದ ಧರ್ಮ ಜಾಗೃತಿಗಾಗಿ ಹಕ್ಕೋತ್ತಾಯ ಸಭೆಯಲ್ಲಿ ಅವರು ಮಾತನಾಡಿದರು. ಅನ್ನದಾನ ಮೊದಲು ಪ್ರಾರಂಭವಾದುದು ಶ್ರೀ ಕ್ಷೇತ್ರದಲ್ಲಿ ಇಂತಹ ಕ್ಷೇತ್ರದ ಬಗ್ಗೆ ಅವಹೇಳವಾದಗ ನಾವು

ಅನ್ನ ದಾನ ವಸ್ತ್ರ ದಾನ ಮಾಡುವ ಧರ್ಮಸ್ಥಳ ಶ್ರೀ ಕ್ಷೇತ್ರದ ಅವಹೇಳನ ಸಹಿಸಲು ಅಸಾಧ್ಯ : ಶಾಸಕಿ ಭಾಗೀರಥಿ ಮುರುಳ್ಯ Read More »

ಸುಳ್ಯ : ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶ

ಸುಳ್ಯ ಪೊಲೀಸ್ ಠಾಣಾ ಅ.ಕ್ರ.115/2018 ಕಲಂ 504, 354(A) ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ರವೀಂದ್ರ ಬಿ.ಎನ್ (40) ಎಂಬಾತನು ಸುಮಾರು ಏಳು ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರ ಹಿನ್ನೆಲೆಯಲ್ಲಿ LPC No.04/2023ರಂತೆ ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಪೊಲೀಸರು ಹಚ್ಚಹಾಸಿನ ಕಾರ್ಯಾಚರಣೆ ನಡೆಸಿ, 07-09-2025 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವೇದಾವತಿ ನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸುಳ್ಯ : ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶ Read More »

ಮಂಗಳೂರು ಅಂತರಾಷ್ಟ್ರೀಯ ಮಿಮಾನ ನಿಲ್ದಾಣಕ್ಕೆ ಬೆದರಿ ಕರೆ ಮಾಡಿದ ಆರೋಪಿಯ ಬಂಧನ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಬಜಪೆ ಪೋಲೀಸರು ತಮಿಳುನಾಡಿನ ವೆಲ್ಲೂರಿನಿಂದ ಬಂಧಿಸಿದ್ದಾರೆ.ವೆಲ್ಲೂರು ಜಿಲ್ಲೆಯ ಸಸಿಕುಮಾರ್ (38) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.ಆ. 29 ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದ ಈತ ” ಟರ್ಮಿನಲ್‌ ಬಿಲ್ಡಿಂಗ್‌ ಖಾಲಿ ಮಾಡಬೇಕು, ಇಲ್ಲವಾದರೆ ಧ್ವಂಸ ಮಾಡುವೆ ” ಎಂದು ಬೆದರಿಕೆ ಹಾಕಿದ್ದನು. ಈ ಸಂಬಂಧ ಟರ್ಮಿನಲ್‌ ವ್ಯವಸ್ಥಾಪಕರು ಬಜಪೆ ಪೋಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಪತ್ತೆ

ಮಂಗಳೂರು ಅಂತರಾಷ್ಟ್ರೀಯ ಮಿಮಾನ ನಿಲ್ದಾಣಕ್ಕೆ ಬೆದರಿ ಕರೆ ಮಾಡಿದ ಆರೋಪಿಯ ಬಂಧನ Read More »

ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ‌ ಬಹುಮಾನ

ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಪ್ರವೀಣ್ ಕುಮಾ‌ರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದಾರೆ.ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6 ನೇ ತರಗತಿ ವಿದ್ಯಾರ್ಥಿ ಶರೀಫ್ ಹಾಗೂ ಅಸೀನಾ ದಂಪತಿಗಳ ಪುತ್ರ ಮಹಮ್ಮದ್ ಶಾಝಿಲ್ ಕಟಾ ಹಾಗೂ ಕುಮಟೆ ವಿಭಾಗಳೆರಡರಲ್ಲೂ ದ್ವಿತೀಯ ಪಡೆದಿದ್ದಾರೆ. ಕಿಶೋರ್ ಬಿ. ಎಸ್ ಹಾಗೂ ಸವಿತಾ ದಂಪತಿಗಳ

ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಗೆ‌ ಬಹುಮಾನ Read More »

ಇಂದು ಸಂಪೂರ್ಣ ಚಂದ್ರಗ್ರಹಣ,ಇಲ್ಲಿದೆ ಗ್ರಹಣ ಸಮಯದ ಸಂಪೂರ್ಣ ಮಾಹಿತಿ

ಇಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣ ರಾತ್ರಿ 8:58ಕ್ಕೆ ಆರಂಭವಾಗಲಿದೆ. ರಾತ್ರಿ 9:57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗುತ್ತದೆ. ರಾತ್ರಿ 11:01 ರಿಂದ 12:23 ರವರೆಗೆ ಸಂಪೂರ್ಣ ಗ್ರಹಣ ಇರಲಿದೆ. ಈ ವೇಳೆ ಕೆಂಪು ಚಂದಿರನನ್ನು ನೋಡಬಹುದಾಗಿದೆ. ಗ್ರಹಣ ತಡರಾತ್ರಿ 1:27ಕ್ಕೆ ಕೊನೆಗೊಳ್ಳಲಿದೆ. ಭಾರತದ ಜೊತೆಗೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಯುರೋಪ್‌ನಲ್ಲಿಯೂ ಚಂದ್ರಗ್ರಹಣ ಗೋಚರಿಸುತ್ತದೆ. ಗ್ರಹಣದ ವೇಳೆ ರಾಜ್ಯದ ದೇವಾಲಯಗಳನ್ನು ಕೆಲ ಸಮಯ ಮುಚ್ಚಲಾಗುವುದು.

ಇಂದು ಸಂಪೂರ್ಣ ಚಂದ್ರಗ್ರಹಣ,ಇಲ್ಲಿದೆ ಗ್ರಹಣ ಸಮಯದ ಸಂಪೂರ್ಣ ಮಾಹಿತಿ Read More »

error: Content is protected !!
Scroll to Top