ಕ್ರೈಂ

ಬೈಕ್ ಸವಾರನ ಮೇಲೆ ಮರ ಬಿದ್ದು ಗಾಯ

ಕಡಬ ತಾಲೂಕಿನ ಕೋಡಿಂಬಳ ಗ್ರಾಮದ ಪುಳಿಕುಕ್ಕು ಎಂಬಲ್ಲಿ ಭಾರೀ ಗಾತ್ರದ ಮರದ ರೆಂಬೆ ಮರಿದು ಬಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ ಸವಾರ ಗಾಯ ಗೊಂಡ ಘಟನೆ ಫೆ.4 ರಂದು ಸಂಜೆ ನಡೆದಿದೆ.ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೋಲೀಸರು ಆಗಮಿಸಿದ್ದಾರೆ. ಗಾಯ ಗೊಂಡ ಬೈಕ್ ಸವಾರ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ತೆರಳಿದ್ದಾರೆ.ಕೆಲವು ಸಮಯಗಳ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಸ್ವಲ್ಪ ಮುಂದೆ ಮರವೊಂದು ಉರುಳಿ ಬಿದ್ದು ಬೈಕ್ ಸವಾರ ಒಬ್ಬರು ಮೃತ ಪಟ್ಟಿದ್ದರು.

ಬೈಕ್ ಸವಾರನ ಮೇಲೆ ಮರ ಬಿದ್ದು ಗಾಯ Read More »

ಅರಂತೋಡು : ಯುವಕ ಅಸೌಖ್ಯದಿಂದ ಸಾವು

ಸುಳ್ಯ ತಾಲೂಕಿ ಅರಂತೋಡು ಗ್ರಾಮದ ಕಲ್ಲಗದ್ದೆ ದಿ.ಸಂಕಪ್ಪ ಗೌಡ ರವರ ಪುತ್ರ ಮಿಥುನ್ ಕೆ.ಎಸ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಜ.31ರಂದು ನಿಧನರಾದರು. ಅವರಿಗೆ 27 ವರ್ಷ ಪ್ರಾಯವಾಗಿತ್ತು.ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರು ತಾಯಿ ವಾರಿಜಾ, ಸಹೋದರಿ ಭವ್ಯಶ್ರೀ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತ ಯುವಕ ಸುಳ್ಯದ ಆಯಶಿಲ್ಪ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಉದ್ಯೋಗಿಯಾಗಿದ್ದರು.

ಅರಂತೋಡು : ಯುವಕ ಅಸೌಖ್ಯದಿಂದ ಸಾವು Read More »

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ

ಮೈಕ್ರೋ ಪೈನಾನ್ಸ್ ಅವರ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜ್ಯ ಮಟ್ಟದಲ್ಲಿ ಇದು ಭಾರೀ ಸುದ್ದಿಯಾಗುತ್ರಿದೆ.ಮೈಕ್ರೋ ಫೈನಾನ್ಸ್‌ನವರ ಕಿರುಕುಳತಾಳಲಾರದೆ ದಾವಣಗೆರೆಯ ಶಿಕ್ಷಕಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ದಿನಗಳ ಬಳಿಕ ಅವರ ಶವ ಇಂದು ಪತ್ತೆಯಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಎರಡು ದಿನಗ ಹಿಂದೆ ತುಂಗಭದ್ರಾ ನದಿಗೆ ಹಾರಿದ್ದರು. ಮೃತದೇಹ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ.ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್‌ ಮನೆ

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ Read More »

ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಉಬರಡ್ಕ ಮೂಲದ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಲೋಕಾಯುಕ್ತ ಬಲೆಗೆ !

ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದ ಸ್ಕೂಟರ್ ಅನ್ನು ಬಿಡುಗಡೆ ಮಾಡಲು 3ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಲಿ ಬಿದ್ದಿರುವ ಘಟನೆ ನಡೆದಿದೆ.ಮಂಗಳೂರು ಉತ್ತರ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್‌ ಲೋಕಾಯುಕ್ತ ಬಲೆಗೆ ಬಿದ್ದವರು.ವ್ಯಕ್ತಿಯೊಬ್ಬರು ಸ್ಕೂಟರ್ ಅನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯದಿಂದ ಆದೇಶವಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ

ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಉಬರಡ್ಕ ಮೂಲದ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಲೋಕಾಯುಕ್ತ ಬಲೆಗೆ ! Read More »

ಮಂಡೆಕೋಲು : ಕಾಡಾನೆ ಸಾವು

ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಂಡೆಕೋಲು ಕನ್ಯಾನ ಕಾಡಿನಲ್ಲಿ ಆನೆಯೊಂದು ಸಾವನ್ನಪಿದ ಘಟನೆ ವರದಿಯಾಗಿದೆ.ಸಂಜೆ ಕಾಡಿಗೆ ಕಟ್ಟಿಗೆಗೆ ಹೋದವರಿಗೆ ಸತ್ತ ಆನೆ ಕಂಡು ಬಂದಿದ್ದು, ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಲಾಗಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆಯವರು ಹಾಗೂ ಜನರು ಸೇರಿದ್ದಾರೆಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ತೆರಳಿ ಪರಿಶೀಲಿಸಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಮಂಡೆಕೋಲು : ಕಾಡಾನೆ ಸಾವು Read More »

ರಿಕ್ಷಾ ಚಾಲಕನ ಕೊಲೆಗೈದು ಬೆತ್ತಲೆ ಮಾಡಿ ಎಸೆದ ಒರ್ವ ಆರೋಪಿಯ ಬಂಧನ

ಆಟೋ ಚಾಲಕನನ್ನು ಮೂವರು ಸ್ನೇಹಿತರು ಸೇರಿ ಹಲ್ಲೆ ನಡೆಸಿ ಕೊಲೆ ಮಾಡಿ ಬಳಿಕ ಶವವನ್ನು ಶಿರಾಡಿ ಘಾಟ್ ನಲ್ಲಿ ಬೆತ್ತಲೆ ಮಾಡಿ ಶವ ಎಸೆದು ಸಾಕ್ಷ್ಯನಾಶ ಮಾಡಲು ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಮೂವರು ಹಂತಕರು ಕೊಲೆಗೆ ಬಳಸಿದ ಬಟ್ಟೆಗಳನ್ನು ಎಸೆದು ಸ್ನಾನ ಮಾಡಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಹಾಸನ ಜಿಲ್ಲೆಯ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮದ ಆಟೋಚಾಲಕ ಶಿವಕುಮಾರ್ (36) ಎಂಬಾತನು ಸ್ನೇಹಿತರಾದ

ರಿಕ್ಷಾ ಚಾಲಕನ ಕೊಲೆಗೈದು ಬೆತ್ತಲೆ ಮಾಡಿ ಎಸೆದ ಒರ್ವ ಆರೋಪಿಯ ಬಂಧನ Read More »

ಅಡ್ಯಡ್ಕ : ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

.ಅರಂತೋಡಿನ ಆಟೋ ಚಾಲಕ, ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕಂದಸ್ವಾಮಿ ಎಂಬವರು ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಂದಸ್ವಾಮಿಯವರು ನೇಣುಬಿಗಿದುಕೊಂಡ ವಿಷಯ ಗೊತ್ತಾಗಿ ಮನೆಯವರು ಅವರನ್ನು ಹಗ್ಗದಿಂದ ಇಳಿಸಿ, ಸಮೃದ್ಧಿ ಮಾರ್ಟಿನ ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ತಂದರೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ. ಕಂದಸ್ವಾಮಿಯವರಿಗೆ 55 ವರ್ಷ ಪ್ರಾಯವಾಗಿತ್ತು. ಪತ್ನಿ ಜ್ಞಾನ ಸುಂದರಿ, ಪುತ್ರರಾದ ರಮೇಶ, ಮನು ಹಾಗೂ ಮಹೇಶರನ್ನು ಅವರು ಅಗಲಿದ್ದಾರೆ

ಅಡ್ಯಡ್ಕ : ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಹೊಸದಿಗಂತ ಪತ್ರಿಕೆಯ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ (62) ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ (ಜ.26) ನಿಧನರಾದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಅವರು ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆ‌ರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗೆ ಗುರುವಪ್ಪ ಬಾಳೆಪುಣಿ ಪುರಸ್ಕೃತರಾಗಿದ್ದಾರೆ.ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ Read More »

ಕಾನಜೆ ಕಾಯಿ ಕೊಯ್ಯಲು ಹೋದ ವ್ಯಕ್ತಿ ಹೃದಯಾಘಾತವಾಗಿ ಸಾವು

ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದ ಕೃಷಿಕ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಕಡಬ ಗ್ರಾಮದ ಅಲುಂಗೂರು ತಿಮರಡ್ಡಿ ಎಂಬಲ್ಲಿ ಜ.22 ಬುಧವಾರ ನಡೆದಿದೆ. ಬಜನಿಗುತ್ತು ಗಣೇಶ್‌ ರೈ (55) ಮೃತ ಕೃಷಿಕ.ಗಣೇಶ್ ರೈ ಅವರು ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದರು. ಬೆಳಿಗ್ಗೆ ಹೋದವರು ಮಧ್ಯಾಹ್ನವಾದರೂ ಬಾರದೆ ಇದ್ದುದ್ದನ್ನು ಕಂಡು ಮನೆ ಮಂದಿ ಹುಡುಕಾಡಿದಾಗ ತೋಟದಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಮನೆಮಂದಿ ಕಡಬ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಹೃದಯಾಘಾತದಿಂದ ಮೃತ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾನಜೆ ಕಾಯಿ ಕೊಯ್ಯಲು ಹೋದ ವ್ಯಕ್ತಿ ಹೃದಯಾಘಾತವಾಗಿ ಸಾವು Read More »

ಮಹಿಳೆಯಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ,ಮಹಿಳೆ ವಿರುದ್ದ ಪೋಕ್ಸೋ ಪ್ರಕರಣ ದಾಖಲು!

ಅಪ್ರಾಪ್ತ ವಯಸ್ಸಿನ ಬಾಲಕನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿಯಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ವಿಶೇಷ ಘಟನೆ ವರದಿಯಾಗಿದೆ.ಬಂಧಿತ ಮಹಿಳೆಯನ್ನು 28ರ ಹರೆಯದ ವಿನೋಧಿನಿ ಎಂದು ತಿಳಿದು ಬಂದಿದೆ.ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ. ನಾಪತ್ತೆಯಾಗಿದ್ದ 10ನೇ ತರಗತಿ ಹುಡುಗನ್ನು ಆತನ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಮಹಿಳೆ ಜತೆ ಪತ್ತೆ ಹಚ್ಚಿದ ಪೊಲೀಸರು 17 ವರ್ಷದ ಹುಡುಗನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಹಾಗೂ10ನೇ ತರಗತಿ ಹುಡುಗ ಕುಟುಂಬ ಒಂದೇ ಗ್ರಾಮದಲ್ಲಿ ವಾಸಿಸುತ್ತಿತ್ತು. ಗಂಡ ಹಾಗೂ ಇಬ್ಬರು ಮಕ್ಕಳು ಜತೆಗಿದ್ದ ವಿನೋಧಿನಿ

ಮಹಿಳೆಯಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ,ಮಹಿಳೆ ವಿರುದ್ದ ಪೋಕ್ಸೋ ಪ್ರಕರಣ ದಾಖಲು! Read More »

error: Content is protected !!
Scroll to Top