ಕ್ರೈಂ

ಪೆರಾಜೆ ಬಿಳಿಯಾರಿನಲ್ಲಿ ಸರಣಿ ಅಪಘಾತ

ಸ್ಕೂಟಿ ಸ್ಕಿಡಾಗಿ ಯುವಕನೋರ್ವ ಬಿದ್ದು ಗಾಯಗೊಂಡಿದ್ದು , ಯುವಕ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಲೆಂದು ಕಾರು ಚಾಲಕ ಬ್ರೇಕ್ ಹಾಕಿದ ವೇಳೆ ಹಿಂಬದಿಯಿಂದ ಕಾರಿಗೆ ಬೈಕ್ ಢಿಕ್ಕಿ ಹೊಡೆದ ಘಟನೆ ಶನಿವಾರ ಪೆರಾಜೆ ಬಿಳಿಯಾರಿನಿಂದ ವರದಿಯಾಗಿದೆ. ಅರಂತೋಡಿನ ಯುವಕನೋರ್ವ ಸುಳ್ಯದಿಂದ ಅರಂತೋಡಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಬಿಳಿಯಾರು ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಸ್ಕಿಡ್ ಆಗಿ ಪಲ್ಟಿಯಾಯಿತೆನ್ನಲಾಗಿದೆ. ಪರಿಣಾಮವಾಗಿ ಯುವಕ ರಸ್ತೆಗೆ ಎಸೆಯಲ್ಪಟ್ಟು ಕೈಗೆ ಗಾಯವಾಗಿತ್ತು.ಈ ಅಪಘಾತ ನಡೆದ ಸಂದರ್ಭದಲ್ಲಿ ಅರಂತೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಅರಂತೋಡಿನ ಸತ್ಯ ಎಂಬವರು […]

ಪೆರಾಜೆ ಬಿಳಿಯಾರಿನಲ್ಲಿ ಸರಣಿ ಅಪಘಾತ Read More »

ಹಿಂದು ಯುವಕನಿಗೆ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ

ಪುತ್ತೂರು: ಹಿಂದು ಯುವಕನಿಗೆ ನಾಲ್ವರಿದ್ದ ಯುವಕರ ತಂಡ ರೈಲಿನಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದು ಬೆಳಿಗ್ಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.ಹಲ್ಲೆಗೊಳಗಾದ ಯುವಕ ಹಿಂದೂ ಧರ್ಮೀಯ, ಹಲ್ಲೆ ನಡೆಸಿದ ಯುವಕರು ಅನ್ಯಧರ್ಮಿಯರು ಎಂದು ಹೇಳಲಾಗುತ್ತಿದೆ.ಹಲ್ಲೆ ನಡೆಸಿದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ನಾಲ್ವರನ್ನು ಸಾಲ್ಮರ ಮಸೀದಿ ಬಳಿಯಿಂದ ವಶಕ್ಕೆ ಪಡೆದು ಕೊಂಡಿದ್ದಾರೆ. ಪ್ರಕರಣವು ರೈಲ್ವೇ ಪೊಲೀಸರ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ವಶಕ್ಕೆ ಪಡೆದ ಆರೋಪಿಗಳನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್‌

ಹಿಂದು ಯುವಕನಿಗೆ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ Read More »

ಗುಂಡ್ಯ : ಕಂದಕಕ್ಕೆ ಉರುಳಿದ ಬಿದ್ದ ಖಾಸಗಿ ಬಸ್ಸು, ಚಾಲಕ ಸಾವು

ಖಾಸಗಿ ಬಸ್ಸೊಂದು ಚಾಲಕನತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತ ಪಟ್ಘಟನೆ ಶುಕ್ರವಾರ ತಡ ರಾತ್ರಿ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಅಪಘಾತದ ಸಂದರ್ಭ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮಾತ್ರವಿದ್ದರು. ಹೀಗಾಗಿ ಭಾರೀ ದುರಂತವೊಂದು ಸಂಭವಿಸುವುದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಶುಕ್ರವಾರ ತಡರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದ್ದು, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಬ್ರಹಣ್ಯ ನಾಮಫಲಕ ಹೊಂದಿದ ಈ ಖಾಸಗಿ ಸ್ವೀಪರ್ ಬಸ್ಸು ಲಾವತ್ತಡ್ಕ ಬಳಿ ಕಂದಕಕಕ್ಕೆ ಉರುಳಿ ಗುಂಡ್ಯ ಹೊಳೆಗೆ

ಗುಂಡ್ಯ : ಕಂದಕಕ್ಕೆ ಉರುಳಿದ ಬಿದ್ದ ಖಾಸಗಿ ಬಸ್ಸು, ಚಾಲಕ ಸಾವು Read More »

ಮುಲ್ತಾಝ್ ಅಲಿ ಸಾವು : ಪೊಲೀಸ್ ತನಿಖೆ ಚುರುಕು

ಉದ್ಯಮಿ ಮುಲ್ತಾಝ್ ಅಲಿ ಸಾವು ಕೇಸ್ ಗೆ ಸಂಬಂಧಿಸಿದಂತೆ ಇಂದು ಪೊಲೀಸರ ತನಿಖೆ ಚುರುಕುಗೊಂಡಿದೆ. ಪ್ರಕರಣದ ಸೂತ್ರದಾರ ಹಾಗೂ ಎ2 ಆರೋಪಿ ಕೃಷ್ಣಾಪುರ ನಿವಾಸಿ ಅಬ್ದುಲ್ ಸತ್ತಾರ್, ಎ3 ಆರೋಪಿ ಮುಹಮ್ಮದ್ ಮುಸ್ತಫಾ, 4ನೇ ಆರೋಪಿ ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಶಾಫಿಯನ್ನು ನಿನ್ನೆ ಕೋರ್ಟ್ ಗೆ ಹಾಜರುಪಡಿಸಿದ್ದ ಕಾವೂರು ಪೊಲೀಸರು, ಏಳು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಮೂವರು ಆರೋಪಿಗಳನ್ನು ಅ. 9ರಂದು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಮುಲ್ತಾಝ್ ಅಲಿ ಸಾವು : ಪೊಲೀಸ್ ತನಿಖೆ ಚುರುಕು Read More »

ರೈಲುಗಳ ನಡುವೆ ಭೀಕರ ಅಪಘಾತ

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪ್ಪೆಟ್ಟೆ ರೈಲು ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಪ್ಯಾಸೆಂಜ‌ರ್ ಎಕ್ಸ್‌ಪ್ರೆಸ್ ರೈಲು, ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ರೈಲಿನ 2 ಬೋಗಿಗಳಿಗೆ ಬೆಂಕಿ ತಗುಲಿದೆ. ಪ್ಯಾಸೆಂಜ‌ರ್ ರೈಲಿನ ಕೆಲವು ಬೋಗಿಗಳು ಹಳಿತಪ್ಪಿದ್ದು ಯಾವುದೇ ಪ್ರಾಣಹಾನಿಯ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ರೈಲುಗಳ ನಡುವೆ ಭೀಕರ ಅಪಘಾತ Read More »

ಪಾರ್ಸಿ ಸಮುದಾಯದ ಸಂಪ್ರದಾಯದ ಮೂಲಕ ಖ್ಯಾತ ಉದ್ಯಮಿ ರತನ್ ಟಾಟಾ ಅಂತ್ಯಕ್ರಿಯೆ

ಮುಂಬಯಿ: ಅ.9ರಂದು ನಿಧನರಾದ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಅ.10ರಂದು ಸಕಲ ಸರಕಾರಿ ಗೌರವದೊಂದಿಗೆ ಪಾರ್ಸಿ ಸಮುದಾಯದ ವಿಧಿವಿಧಾನಗಳ ಪ್ರಕಾರ ನಡೆಸಲಾಯಿತುಬಳಿಕ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಗುರುವಾರ ಬೆಳಗ್ಗೆ 10.30 ರಿಂದ ಸಂಜೆ 4 ರವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಇಡಲಾಗಿತ್ತ.ಗಣ್ಯರು ಸೇರಿ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು.

ಪಾರ್ಸಿ ಸಮುದಾಯದ ಸಂಪ್ರದಾಯದ ಮೂಲಕ ಖ್ಯಾತ ಉದ್ಯಮಿ ರತನ್ ಟಾಟಾ ಅಂತ್ಯಕ್ರಿಯೆ Read More »

ರಸ್ತೆ ಬದಿಯ ತಡೆಬೇಲಿಗೆ ಕಾರು ಡಿಕ್ಕಿ ಹೊಡೆದು ಜಖಂಗೊಂಡ ಕಾರು

ಸುಳ್ಯದ ಶ್ರೀರಾಮಪೇಟೆಯಲ್ಲಿ ಕಾರೊಂದು ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ್ದು ಕಾರಿನ ಎದುರು ಭಾಗ ಸಂಪೂರ್ಣ ಹಾನಿಗೊಂಡ ಘಟನೆ ವರದಿಯಾಗಿದೆ.ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನಿಂದ ಬಿಸಿ ರೋಡಿಗೆ ಹೋಗುವ ಸ್ಕೊಡ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಗುದ್ದಿ ತಡೆಬೇಲಿ ಮುರಿದು ಕಾರು ಸಂಪೂರ್ಣ ಜಖಂಗೊಂಡಿದೆ.

ರಸ್ತೆ ಬದಿಯ ತಡೆಬೇಲಿಗೆ ಕಾರು ಡಿಕ್ಕಿ ಹೊಡೆದು ಜಖಂಗೊಂಡ ಕಾರು Read More »

ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ

ಅಜ್ಜಾವರ : ಅಜ್ಜಾರ ಗ್ರಾಮದ ಮೇನಾಲ ರಿಕ್ಷಾ ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.10ರಂದು ವರದಿಯಾಗಿದೆ. ಆತ್ಮ ಹತ್ಯೆಮಾಡಿಕೊಂಡ ವ್ಯಕ್ತಿಯನ್ನು ಭಾಸ್ಕರ ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ಬಳಿಕ ಬಾಸ್ಕರ ರೈ ಯವರು ಕಾಣದೇ ಇದ್ದಾಗ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ಪ್ರಾರಂಭಿಸಿದ್ದು ಸಂಜೆ ತೋಟದಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿರುವುದು ಕಂಡುಬಂದಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .

ವಿಷ ಸೇವಿಸಿ ವ್ಯಕ್ತಿ ಆತ್ಮ ಹತ್ಯೆ Read More »

ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ನಿಧನ

ಭಾರತದ ಅತೀ ದೊಡ್ಡ ಸಮೂಹ ಸಂಸ್ಥೆ ಟಾಟಾ ಸನ್ ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ನಿಧನರಾಗಿದ್ದಾರೆ. 86 ವರ್ಷದ ರತನ್ ಟಾಟಾ ಅವರು ತಮ್ಮ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗೆ ಸೋಮವಾರ ಚಿಕಿತ್ಸೆಗೊಳಗಾಗಿದ್ದರು. 1991ರಲ್ಲಿ ಟಾಟಾ ಸನ್ಸ್‌ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ಡಿಸೆಂಬರ್ 2012ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದ ರತನ್ ಟಾಟಾ, ನಂತರ

ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ನಿಧನ Read More »

ದೇವಳದಿಂದ ಚಿನ್ನಾಭರಣ ಕಳವು ಮಾಡಿದ ಅರ್ಚಕನ ಬಂಧನ

ಉಡುಪಿ : ದೇವಳದಿಂದ ಚಿನ್ನಾಭರಣ ಕಳವು ಮಾಡಿದ ಪುರೋಹಿತನ್ನು ಪೊಲೀಸರು ಬಂಧಿಸಿರುವಘಟನೆ ಉಡುಪಿಯಿಂದ ವರದಿಯಾಗಿದೆ.ದೇವಸ್ಥಾನದ ಅರ್ಚಕ ನರಸಿಂಹ ಭಟ್ (43) ಬಂಧಿತ ಆರೋಪಿ.ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಅರ್ಚಕನನ್ನು ಪೊಲೀಸರು ಬಂಧಿಸಿ ಚಿನ್ನಾಭರವನ್ನು ವಶಪಡಿಸಿಕೊಂಡಿದ್ದಾರೆ.ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಅಸಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿ, ನಕಲಿ ಚಿನ್ನಾಭರಣಗಳನ್ನು ದೇವಸ್ಥಾನದಲ್ಲಿ ಇರಿಸಿದ್ದ.

ದೇವಳದಿಂದ ಚಿನ್ನಾಭರಣ ಕಳವು ಮಾಡಿದ ಅರ್ಚಕನ ಬಂಧನ Read More »

error: Content is protected !!
Scroll to Top