ಕ್ರೈಂ

ಬೊಳಿಯಮ್ಮ ಸಣ್ಣಮನೆ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಮುಪ್ಪಸೇರು ಸಣ್ಣಮನೆ ಜತ್ತಪ್ಪ ಗೌಡರ ಧರ್ಮಪತ್ನಿ ಬೊಳಿಯಮ್ಮ ಅಸೌಖ್ಯದಿಂದ ಡಿ.22ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.ಅವರಿಗೆ ಸುಮಾರು‌ 65ವರ್ಷ ಪ್ರಾಯವಾಗಿತ್ತು.ಮೃತರು ಪತಿ ಜತ್ತಪ್ಪ ಗೌಡ,ಮಕ್ಕಳಾದ ಹರೀಶ,ಶ್ರೀಧರ ಇಬ್ಬರು ಸೊಸೆಯಂದಿರನ್ನು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

ಬೊಳಿಯಮ್ಮ ಸಣ್ಣಮನೆ ನಿಧನ Read More »

ಬಸ್ ಬೈಕ್ ಅಪಘಾತವಾಗಿ ಬೈಕ್ ಸವಾರ ಗಂಭೀರ

ಅರಂತೋಡು : ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ಸಂಪಾಜೆ ಗ್ರಾಮದ ಕಡೆಪಾಲ ಬಳಿ ಡಿ.21ರಂದು ಸಂಭವಿಸಿದೆ.ಗಾಯಗೊಂಡ ಬೈಕ್ ಸವಾರನ್ನು ಕೇರಳ ಮೂಲದ ಜಿನೇಶ್(36) ಎಂದು ಗುರುತಿಸಲಾಗಿದೆ.ಕಡೆಪಾಲ ರಾಷ್ಟ್ರೀಯ ಹೆದ್ದಾರಿ 275ರ ತಿರುವಿನಲ್ಲಿ ಮಿನಿ ಬಸ್ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಬೈಕ್ ಅಪಘಾತವಾಗಿ ಬೈಕ್ ಸವಾರ ಗಂಭೀರ Read More »

ಅಕ್ಷತಾ ಪೂಜಾರಿಗೆ ಕೂಡಲೇ ನ್ಯಾಯ ಒದಗಿಸಲಿ,ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಒತ್ತಾಯ

ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂಬೆಳಗ್ಗೆ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವುದನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಖಂಡಿಸುತ್ತದೆ. ತಪ್ಪಿಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಲ್ಲವರ ಮಹಾಮಂಡಲ (ರಿ) ಮೂಲ್ಕಿ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಒತ್ತಾಯಿಸಿದ್ದಾರೆ.ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೋಲಿಸರು ಇಲ್ಲದೇ, ಕೇವಲ ಪುರುಷ ಪೊಲೀಸರು ನುಗ್ಗಿ, ಯುವತಿ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಯುವತಿ

ಅಕ್ಷತಾ ಪೂಜಾರಿಗೆ ಕೂಡಲೇ ನ್ಯಾಯ ಒದಗಿಸಲಿ,ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಒತ್ತಾಯ Read More »

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಲ್ಲಿದ್ದ ಮಗು ಬಾವಿಗೆ ಬಿದ್ದು ಸಾವು

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಿಂದ ಮಗು ಆಯತಪ್ಪಿ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ನಡೆದಿದೆ.ಮೃತ ಮಗುವನ್ನು ಕೀರ್ತನಾ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ನಯನಾ ಕರ್ಕಡ ಅವರು ಮನೆ ಸಮೀಪದ ಬಾವಿಯಿಂದ ನೀರು ಎಳೆಯುತ್ತಿದ್ದಾಗ ಈ ರ್ಘಟನೆ ನಡೆದಿದೆ.ಕೂಡಲೇ ತಾಯಿ ನಯನಾ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ಹೊರತೆಗೆದರಾದರೂ, ಅದಾಗಲೇ ಮಗು ಮೃತಪಟ್ಟಿತ್ತು.ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣಾ ಪಿಎಸ್‌ ಐ ಭರತೇಶ್ ಕಂಕಣವಾಡಿ ಭೇಟಿ ನೀಡಿ

ಬಾವಿಯಿಂದ ನೀರು ಎಳೆಯುತ್ತಿದ್ದಾಗ ತಾಯಿಯ ಕೈಯಲ್ಲಿದ್ದ ಮಗು ಬಾವಿಗೆ ಬಿದ್ದು ಸಾವು Read More »

ಮೈಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸುಳ್ಯದ ಯುವಕ ಸಾವು

ಬೆಂಗಳೂರಿನಿಂದ ಸುಳ್ಯದ ತನ್ನ ಹುಟ್ಟೂರಿಗೆ ಹಿಂದಿರುಗುತ್ತಿದ್ದಾಗ ಮೈಸೂರು ಸಮೀಪದ ಮಳವಳ್ಳಿ ಯಲ್ಲಿ ಸಂಭವಿಸಿದ ಅಪಘಾತದಲ್ಲಿ ಉಬರಡ್ಕ ಸಮೀದ ಕಂದಡ್ಕದ ಯುವಕನೋರ್ವ ಮೃತಪಟ್ಟ ಘಟನೆ ಡಿ.12ರಂದು ಮುಂಜಾನೆ ವರದಿಯಾಗಿದೆ.ಉಬರಡ್ಕ ಮಿತ್ತೂರು ಗ್ರಾಮದ ಕಲ್ಟಾರ್ ನಿವಾಸಿ ಶೇಷಪ್ಪ ನಾಯ್ಕರವರ ಪುತ್ರ ದೀಕ್ಷಿತ್ (25) ರವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿದ್ದು, ಬೆಂಗಳೂರಿನಿಂದ ಹೊರಟು ಕಲ್ಟಾರ್ ನ ತನ್ನ ಮನೆಗೆ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಸಮೀಪದ ಮಳವಳ್ಳಿ ಯಲ್ಲಿ ಅಪಘಾತ ಸಂಭವಿಸಿದೆ. ತೀವ್ರ ಅಪಘಾತಕ್ಕೆ ಗಂಭೀರಗಾಯಗೊಂಡ ದೀಕ್ಷಿತ್ ರವರು

ಮೈಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸುಳ್ಯದ ಯುವಕ ಸಾವು Read More »

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ಸುಳ್ಯ ಪೋಲಿಸ್ ಠಾಣೆ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ 2025 ನಡೆಯಿತು.ಸುಳ್ಯ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸರಸ್ವತಿ ‘ಪೋಸ್ಕೊ ಕಾಯ್ದೆ’ಯ ಕುರಿತು ಮತ್ತು ಸಬ್ ಇನ್ಸ್ಪೆಕ್ಟರ್ ಸಂತೋಷ ‘ಸೈಬರ್ ಅಪರಾಧಗಳ’ , ‘ಮಾದಕ ವಸ್ತುಗಳ ಬಳಕೆಯ ಅಪರಾಧ’ ಮತ್ತು ‘ಟ್ರಾಫಿಕ್ ನಿಯಮಗಳ’ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು.ರಾಣೆಯ ಸಿಬ್ಬಂದಿಗಳಾದ ಸಂತೋಷ, ಪ್ರಕಾಶ್

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ Read More »

ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ತಾತನಿಗೆ 20 ವರ್ಷ ಜೈಲು ಶಿಕ್ಷೆ

ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಗಜುಲರೇಗದಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ, ಸ್ವಂತ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 59 ವರ್ಷದ ಆರೋಪಿ ಬೊಂಡಪಲ್ಲಿ ಸತ್ಯರಾವ್ ಅವರಿಗೆ ಪೋಕ್ಸ್ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ, ಬಾಲಕಿಯ ಪುನರ್ವಸತಿಗಾಗಿ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಆಗಸ್ಟ್ 18, 2025ರಂದು ಬೆಳಕಿಗೆ ಬಂದ ಈ ಪ್ರಕರಣದಲ್ಲಿ, ಮನೆಯಲ್ಲಿ ತಾತ-ಮೊಮ್ಮಗಳು ಮಾತ್ರ ಇದ್ದಾಗ ಈ ಘಟನೆ

ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ತಾತನಿಗೆ 20 ವರ್ಷ ಜೈಲು ಶಿಕ್ಷೆ Read More »

ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ಕೋಡಿನಲ್ಲಿರುವ ಕಟ್ಟಡವೊಂದರಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ವರದಿಯಾಗಿದೆ.ಶವವನ್ನು‌ ಶೇಖಪಟ್ಟಿ ನಿವಾಸಿ ದಿ. ಕೃಷ್ಣ ಬೆಳ್ಳಪ್ಪಾಡ ರವರ ಪುತ್ರ ರಾಜೇಶ್ ಶೇಖಪಟ್ಟಿಯವರದು ಎಂದು ಗುರುತಿಸಲಾಗಿದೆ.ಕೆಲ ವರ್ಷದ ಹಿಂದೆ ಮಂಗಳ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಾರ್ ಬಂದ್ ಆದ ನಂತರ ಅದೇ ಕಟ್ಟಡದಲ್ಲಿ ವಾಸವಾಗಿದ್ದು ಕಳೆದ ತಡ ರಾತ್ರಿ ರೂಮಿನಲ್ಲಿ ಬಟ್ಟೆಯನ್ನು ಕುತ್ತಿಗೆಗೆ ಬಿಗಿದು ಪಕ್ಕಾಸಿಗೆ ಹಾಕಿಕೊಂಡು ಆತ್ಮ ಹತ್ಯೆ

ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ Read More »

ಹಾಸ್ಟೆಲ್‌ನಲ್ಲಿ ಗುಂಡಿನ ದಾಳಿ 11 ಸಾವು, 14 ಗಾಯ

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಅಟ್ಟೆರಿವಿಲ್ಲೆಯ ಸೌಲ್‌ವಿಲ್ಲೆ ಹಾಸ್ಟೆಲ್‌ನಲ್ಲಿ ಇಂದು ಭೀಕರ ಗುಂಡಿನ ದಾಳಿ ನಡೆದಿದ್ದು, ಮೂವರು ಮಕ್ಕಳು ಸೇರಿ 11 ಜನರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪೊಲೀಸ್‌ ಸೇವೆ (SAPS) ಪ್ರಕಾರ, ಅಕ್ರಮ ಶೆಬೀನ್ ಒಳಗೆ ನಡೆದ ಈ ದುರಂತದಲ್ಲಿ 3, 12 ಮತ್ತು 16 ವರ್ಷದ ಮೂವರು ಮಕ್ಕಳೂ ಸೇರಿ ಹಲವರು ಬಲಿಯಾಗಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಜೀವನ್‌ರಕ್ಷಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ದೇಶದಲ್ಲಿ ಆತಂಕ ಮೂಡಿಸಿದೆ.

ಹಾಸ್ಟೆಲ್‌ನಲ್ಲಿ ಗುಂಡಿನ ದಾಳಿ 11 ಸಾವು, 14 ಗಾಯ Read More »

error: Content is protected !!
Scroll to Top