ಕ್ರೈಂ

ಕನಕಮಜಲು : ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ವರು ಪ್ರಯಾಣಿಕರಿಗೆ ಗಾಯ

ಸುಳ್ಯ ತಾಲೂಕಿನ ಕನಕಮಜಲು ಸಮೀಪ ಕಾರೊಂದು ಒಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮೇ 8 ರಂದು ವರದಿಯಾಗಿದೆ.ಸುಳ್ಯ ಕಡೆಯಿಂದ ಪುತ್ತೂರು ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದು,ಘಟನೆಯಿಂದ ಕಾರಿನಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಸೇರಿ ನಾಲ್ವರಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರಿನಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆಯುವಲ್ಲಿ ಸ್ಥಳೀಯರಾದ […]

ಕನಕಮಜಲು : ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ವರು ಪ್ರಯಾಣಿಕರಿಗೆ ಗಾಯ Read More »

ಕಡಬ : ನೀರಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಯುವತಿಯರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,ಓದಿ

ಕಡಬ : ಸ್ನಾನಕ್ಕೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನ‌ ಸೆಳತಕ್ಕೆ ಸಿಲುಕಿ ಮೃತಪಟ್ಟ ಘಟನೆ ಕಡಬದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಅರ್ಪಿತಾ (15) ಮತ್ತು ಸುನೀತಾ (21) ಎಂದು ಗುರುತಿಸಲಾಗಿದೆ. ಈ ಕುರಿತು ಮೃತ ಅರ್ಪಿತಾ ಅವರ ತಂದೆ ಹರೀಶ್ ಪಿ.ಕೆ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇ 8ರಂದು ಮಧ್ಯಾಹ್ನ ಅರ್ಪಿತಾ, ಸುನೀತಾ, ಅಕ್ಷತಾ ಹಾಗೂ ನೆಟ್ಟಣದ ಶ್ರೇಯಾ ಸೇರಿದಂತೆ ಗೆಳೆಯರ ಬಳಗವು

ಕಡಬ : ನೀರಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಯುವತಿಯರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,ಓದಿ Read More »

ಪಿ.ಬಿ ದಿವಾಕರ ರೈಯವರ ಪತ್ನಿ ವಿದ್ಯಾ ಡಿ.ರೈ ನಿಧನ

ದ.ಕ ಜಿಲ್ಲೆಯ ಹಿರಿಯ ಸಹಕಾರಿ ದುರೀಣ ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ.ಬಿ.ದಿವಾಕರ ರೈಯವರ ಧರ್ಮಪತ್ನಿ ವಿದ್ಯಾ ಡಿ.ರೈ (55 ವರ್ಷ ) ಅವರು ಮೇ 5ರಂದು ಮಂಗಳೂರಿನ ಖಾಸಗಿ ಆಸ್ಪತ್ರಯಲ್ಲಿ ನಿಧನರಾದರು. ಮ್ರತರು ಪತಿ,ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಿ.ಬಿ ದಿವಾಕರ ರೈಯವರ ಪತ್ನಿ ವಿದ್ಯಾ ಡಿ.ರೈ ನಿಧನ Read More »

ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ

ಚೆಸ್ಕಾಂ ನ ಮಡಿಕೇರಿ ಶಾಖೆಯಲ್ಲಿ ಪ್ರಭಾರ ಸಹಾಯಕ ಎಂಜಿನಿಯರ್ ಆಗಿದ್ದ ಅರಂತೋಡು ಗ್ರಾಮದ ಬೆದ್ರುಪಣೆ ಪ್ರವೀಣ್ ಕುಮಾ‌ರ್ ಪಾನತ್ತಿಲ ಇಂದು ಮುಂಜಾನೆ (ಮೇ.5)ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಾಯಿ ಪೂವಮ್ಮ,, ಪತ್ನಿ ರೇಖಾ, ಪುತ್ರ ಮೌರ್ಯ, ಸಹೋದರಿ ಪ್ರಮೀಳ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತರು ಸ್ಪಂದನ ಗೆಳೆಯರ ಬಳಗ ರಿ ಅಡ್ತಲೆ ಇದರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದರು

ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ Read More »

ಭೀಕರ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸಾವು,ಸಹಸವಾರೆ ವಿದ್ಯಾರ್ಥಿನಿ ಗಂಭೀರ

ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿ ಬೈಕ್‌ ಸವಾರ ಮೃತಪಟ್ಟು ಸಹಸವಾರೆ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆ ಸಮೀಪ ಏಪ್ರಿಲ್ 29ರಂದು ಸಂಜೆ ನಡೆದಿದೆ.ಮೃತರನ್ನು ನೆಡ್ಡಿಲ್ ನಿವಾಸಿ ಶಿವಕುಮಾ‌ರ್ ಅವರ ಪುತ್ರ ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ (24) ಎಂದು ಗುರುತಿಸಲಾಗಿದೆ. ಸಹಸವಾರೆಯಾಗಿದ್ದ ಹಿರೇಬಂಡಾಡಿ ಗ್ರಾಮದ ಎಲಿಯ ನಿವಾಸಿ, ಅದೇ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿನಿ ನೇಹಾ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ

ಭೀಕರ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸಾವು,ಸಹಸವಾರೆ ವಿದ್ಯಾರ್ಥಿನಿ ಗಂಭೀರ Read More »

ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ಕು ಮಂದಿ ಸಾವು!

ಗಂಡ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳು ಕಲ್ಲಂಗಡಿ ಹಣ್ಣು ತಿಂದು ಅಸ್ವಸ್ಥರಾಗಿ ಮ್ರತಪಟ್ಟ ಘಟನೆ ಮುಂಬಯಿಂದ ವರದಿಯಾಗಿದೆ. ಶನಿವಾರ ರಾತ್ರಿ ವೀಕೆಂಡ್ ಹಿನ್ನಲೆಯಲ್ಲಿ ಅವರು ತಮ್ಮ ಸ್ನೇಹಿತರಿಗೆ ಮನೆಯಲ್ಲೇ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ರಾತ್ರಿ ಬಂದ ಅತಿಥಿಗಳು ಊಟ ಮಾಡಿ ಮನೆಗೆ ತೆರಳಿದ್ದರು. ಅಪ್ಪ-ಅಮ್ಮ-ಮಕ್ಕಳು ರಾತ್ರಿ ಕಲ್ಲಂಗಡಿ ಹಣ್ಣು (Watermelon) ಕಟ್ ಮಾಡಿ ತಿಂದು ಮಲಗಿದ್ದರು. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ನಾಲ್ವರಿಗೂ ವಾಂತಿ, ಭೇದಿ ಶುರುವಾಗಿತ್ತು. ಬೆಳಗಿನ ಜಾವವಾಗುವಷ್ಟರಲ್ಲಿ ಎದ್ದು ನಿಲ್ಲಲೂ ಆಗದಂತಹ ಸುಸ್ತು ಅವರನ್ನು ಆವರಿಸಿತ್ತು.ಹೀಗಾಗಿ,

ಕಲ್ಲಂಗಡಿ ಸೇವಿಸಿದ ಒಂದೇ ಕುಟುಂಬದ ನಾಲ್ಕು ಮಂದಿ ಸಾವು! Read More »

ಅರಂತೋಡು : ಕಾರು ಬಸ್ಸು ಅಪಘಾತ,ಮಹಿಳೆಗೆ ಗಾಯ

ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸುಳ್ಯ ಕೊಯನಾಡು ಸರ್ವಿಸ್ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಏ.28ರಂದು ವರದಿಯಾಗಿದೆ.ಕಾರು ಜಖಂಗೊಂಡಿದ್ದು ಮಹಿಳೆಯನ್ನು‌ ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ನಿಂತಿದ್ದ ಬಸ್ಸಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.ಬಸ್ಸು ಮತ್ತು ಕಾರು ಕೊಯನಾಡು ಕಡೆಯಿಂದ ಸುಳ್ಯ ಕಡೆ ಬರುತ್ತಿತ್ತು.

ಅರಂತೋಡು : ಕಾರು ಬಸ್ಸು ಅಪಘಾತ,ಮಹಿಳೆಗೆ ಗಾಯ Read More »

9 ಮಂದಿ ಪೊಲೀಸರಿಗೆ ಗಲ್ಲು ಶಿಕ್ಷೆ ಐತಿಹಾಸಿಕ ತೀರ್ಪು ನೀಡಿದ ಮಧುರೈ ಕೋರ್ಟ್!

ಇಡೀ ದೇಶವನ್ನೇ ತಲ್ಲಣಗೊಳಿಸಿದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳಂನ ತಂದೆ-ಮಗನ ‘ಕಸ್ಟೋಡಿಯಲ್ ಡೆತ್’ ಪ್ರಕರಣಕ್ಕೆ ಸಂಬಂಧಿಸಿದಂತೆ 9ಮಂದಿ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿಮಧುರೈ ಜಿಲ್ಲಾ ನ್ಯಾಯಾಲಯ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ವಿಚಾರಣೆಯ ಹೆಸರಿನಲ್ಲಿ ಅಮಾನವೀಯ ಚಿತ್ರಹಿಂಸೆ ನೀಡಿ ಇಬ್ಬರ ಪ್ರಾಣ ತೆಗೆದ ಇನ್‌ಸ್ಪೆಕ್ಟರ್ ಸೇರಿದಂತೆ ಒಂಬತ್ತು ಪೊಲೀಸರಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.2020ರ ಜೂನ್ 19ರಂದು ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸುಳ್ಳು ಆರೋಪದ

9 ಮಂದಿ ಪೊಲೀಸರಿಗೆ ಗಲ್ಲು ಶಿಕ್ಷೆ ಐತಿಹಾಸಿಕ ತೀರ್ಪು ನೀಡಿದ ಮಧುರೈ ಕೋರ್ಟ್! Read More »

ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣರ ಪತ್ನಿ ರೂಪ ನಿಧನ

ಕಲ್ಮಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಸಾಯಿನಾರಣರ ಪತ್ನಿ ರೂಪ ಅನಾರೋಗ್ಯದಿಂದ ಏ.7ರಂದು ನಿಧನರಾದರು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳದರು. ಅವರಿಗೆ ಸುಮಾರು 41 ವರ್ಷವಾಗಿತ್ತು.ವೈದೇಹಿ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಸಕ್ರಿಯರಾಗಿದ್ದ ರೂಪಾರವರು ಮಹಿಳಾ ಮಂಡಲದ ಮೂಲಕ ಶಾರದೋತ್ಸವ ಆಚರಿಸುತ್ತಾ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೆಂಡೆ ವಾದನ ಕಲಿತು ಇತರರಿಗೆ ತರಬೇತಿ ನೀಡಿ ತಾನೇ ಒಂದು ತಂಡ ಕಟ್ಟಿದ್ದರು.

ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣರ ಪತ್ನಿ ರೂಪ ನಿಧನ Read More »

ಕಲ್ಯಾಣ ಮಂಟಪದಲ್ಲಿ ವಧು-ವರರ ಸಂಬಂಧಿಕರ ನಡುವೆ ಹೊಡೆದಾಟ

ಹಾಸನದ ಅರಳೆಪೇಟೆಯ ಎಂಹೆಚ್ ಕನ್ವೆನ್ನನ್‌ಹಾಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲಿ ಮಾರಾಮಾರಿ ನಡೆದಿದೆ. ಮಾರ್ಚ್ 29 ರಂದು ನಡೆದ ಈ ಘಟನೆಯಲ್ಲಿ ರಸ್ತೆ ಮಧ್ಯದಲ್ಲೇ ವಧು ಮತ್ತು ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಿರಿಯರ ಮಧ್ಯಪ್ರವೇಶದಿಂದ ಗಲಾಟೆ ತಣ್ಣಗಾಗಿದ್ದು, ಮಾರಾಮಾರಿಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಯಾಣ ಮಂಟಪದಲ್ಲಿ ವಧು-ವರರ ಸಂಬಂಧಿಕರ ನಡುವೆ ಹೊಡೆದಾಟ Read More »

error: Content is protected !!
Scroll to Top