ಕ್ರೈಂ

ಉಪ್ಪಿನಂಗಡಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯ ಖಾಸಗಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಯುವಕನ ವಿರುದ್ಧ ಪ್ರಕರಣ ದಾಖಲು

ಪ್ರೀತಿಸುವುದಾಗಿ ನಂಬಿಸಿ ಯುವತಿಯೋರ್ವಳ ಖಾಸಗಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.ಈ ಕ್ರತ್ಯ ಎಸಗಿದ ಆರೋಪಿ ಸುಶಾಂತ್ ಪೂಜಾರಿ ಹಾಗೂ ಆತನ ಸಹೋದರಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವತಿಗೆ ಸುಮಾರು ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್ (Instagram) ಮೂಲಕ ಸುಶಾಂತ್ ಪೂಜಾರಿಯ ಪರಿಚಯವಾಗಿತ್ತು. ತಾನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ರಜೆಯಲ್ಲಿದ್ದೇನೆ ಎಂದು ನಂಬಿಸಿದ್ದ ಸುಶಾಂತ್, ಯುವತಿಯನ್ನು‌ ಪುಸುಲಾಯಿಸಿ ಸ್ನೇಹ ಬೆಳೆಸಿದ್ದ. ಈ ಸ್ನೇಹ ಕಾಲಕ್ರಮೇಣ […]

ಉಪ್ಪಿನಂಗಡಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯ ಖಾಸಗಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಯುವಕನ ವಿರುದ್ಧ ಪ್ರಕರಣ ದಾಖಲು Read More »

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಮೂವರ ಬಂಧನ

ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ,ಪಿಕಪ್ ವಾಹನ ಸಮೇತ ಜಾನುವಾರುಗಳನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡ ಘಟನೆ ವರದಿಯಾಗಿದೆ. ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಸುಳ್ಯ ಪೊಲೀಸರು ಪಿಕಪ್ ವಾಹನವನ್ನು ಹಿಂಬಾಲಿಸಿ ಈ ವೇಳೆ ನಾರ್ಕೊಡು ಮಿತ್ತಡ್ಕ ಎಂಬಲ್ಲಿ ವಾಹನವನ್ನು ತಡೆದು ಪೊಲೀಸರು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಮೂರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭದಲ್ಲಿ

ಅಕ್ರಮ ಗೋಸಾಗಾಟ ಮಾಡುತ್ತಿದ್ದ ಮೂವರ ಬಂಧನ Read More »

ಮೊಗರ್ಪಣೆ : ಬೈಕ್ ಅಪಘಾತವಾಗಿ ಸವಾರ ಗಂಭೀರ

ಸುಳ್ಯ: ಮೊಗರ್ಪಣೆ ಸಮೀಪ ಮಾ.25ರಂದು ರಾತ್ರಿ ಕಂಟೈನರ್ ಲಾರಿ ಪಲ್ಟಿಯಾಗಿ ಬಿದ್ದ ಸ್ಥಳದಲ್ಲಿ ರಸ್ತೆಗೆ ಡೀಸೆಲ್ ಚೆಲ್ಲಿರುವ ಪರಿಣಾಮ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಘಟನೆ ವರದಿಯಾಗಿದೆ.ಕಳೆದ ರಾತ್ರಿ ಸುಮಾರು 12.45ರ ವೇಳೆಗೆ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾದ ಬಳಿಕ ರಸ್ತೆಯ ಮೇಲೆ ಹರಡಿದ್ದ ಡೀಸೆಲ್ ಗಮನಿಸದೇ ಬಂದ ದ್ವಿಚಕ್ರ ವಾಹನ ಸವಾರನು ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾನೆ.ಅಪಘಾತದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿದ್ದು,

ಮೊಗರ್ಪಣೆ : ಬೈಕ್ ಅಪಘಾತವಾಗಿ ಸವಾರ ಗಂಭೀರ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು!

ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಯೊಬ್ಬನಿಗೆ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ.ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ 26ನೇ ಆರೋಪಿ ಕೊಡಗು ಜಿಲ್ಲೆಯ ಶನಿವಾರಸಂತೆ ನಿವಾಸಿ ರಿಯಾಜ್ ಎಚ್. ವೈ ಎಂಬಾತನಿಗೆ ಜಾಮೀನು ಮಂಜೂರಾಗಿದ್ದು ಉಚ್ಚ ನ್ಯಾಯಾಲಯ ಜಾಮೀನು ಅರ್ಜಿ ಪುರಸ್ಕರಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು! Read More »

ಕಾರು ಮತ್ತು ಕಂಟೇನರ್ ಲಾರಿ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕ ಸಾವು

ಜಾಲ್ಸೂರು ಗ್ರಾಮದ ಮಾಣಿ ಮೈಸೂರು ರಸ್ತೆಯ ಬೊಳುಬೈಲು ಬಳಿ ಕಾರು ಮತ್ತು ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ , ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಸಾವನ್ನಪ್ಪಿದ ವ್ಯಕ್ತಿಯನ್ನು ಕಿನ್ನಿಂಗಾರ್ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾರು ಮತ್ತು ಕಂಟೇನರ್ ಲಾರಿ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕ ಸಾವು Read More »

ಮೀನು ಹಿಡಿಯಲು ಹೊಳೆಗೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ

ಮಡಿಕೇರಿ ತಾಲೂಕು ಚೆಂಬು ಗ್ರಾಮದಲ್ಲಿ ಹೊಳೆಗೆ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಮಾ.23ರಂದು ವರದಿಯಾಗಿದೆ.ಚೆಂಬು ಗ್ರಾಮದ ಪರ್ದಾಯ ಗದ್ದೆ ಭಾಸ್ಕರ ಬೆಳ್ಚಪಾಡ ಎಂಬವರು ಮೀನು ಹಿಡಿಯಲು ಹೊಳೆಗೆ ಹೋದವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಹೊಳೆಗೆ ಹೋದವರು ಬಾರದೆ ಇದ್ದಾಗ ಅವರನ್ನು ಹುಡುಕಿಕೊಂಡು ಮನೆಯವರು ಹೋಗಿದ್ದು, ಹೊಳೆ ಬದಿಯಲ್ಲಿ ಮೃತಪಟ್ಟು ಬಿದ್ದಿದ್ದರು.ಮಡಿಕೇರಿ ಗ್ರಾಮಾಂತರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.ಶವವನ್ನು ಮುಂದಿನ ಕಾನೂನು ಕ್ರಮಕ್ಕೆ ಮಡಿಕೇರಿಯ ಶವಗಾರಕ್ಕೆ ಕೊಂಡೊಯ್ದಿದ್ದಾರೆ.

ಮೀನು ಹಿಡಿಯಲು ಹೊಳೆಗೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ Read More »

ಮೊಬೈಲ್ ಸ್ಪೋಟಗೊಂಡು ವ್ಯಕ್ತಿಗೆ ಗಾಯ

ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಮೊಬೈಲ್ ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ. ಗುರುಪ್ರಸಾದ್ ನಿಡುಬೆಎಂಬವರೇ ತನ್ನ ಮೊಬೈಲ್ ಸಿಡಿದು ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಅವರು ವಿವೋ ವೈ 100 ಎ ಮೊಬೈಲ್ ಉಪಯೋಗಿಸುತ್ತಿದ್ದು, ಮಾ.22ರಂದು ಮೊಬೈಲನ್ನು ತನ್ನ ಪ್ಯಾಂಟ್‌ನ ಕಿಸೆಯೊಳಗೆ ಹಾಕಿಕೊಂಡಿದ್ದರು. ಜೇಬಿನೊಳಗಿದ್ದ ಮೊಬೈಲ್ ಒಮ್ಮಿದೊಮ್ಮೆ ಸ್ಪೋಟಗೊಂಡು ತೊಡೆಯ ಭಾಗಕ್ಕೆ ಗಾಯವಾಗಿದೆ.ಕಾಲಿಗೂ ಗಾಯವಾವಾಗಿದ್ದು, ಕಾಲಿನ ತೊಡೆಯ ಭಾಗದಲ್ಲಿ ಮೊಬೈಲ್ ಇದ್ದ ಜಾಗದ ಚರ್ಮ ಬೆಂದು ಹೋಗಿದೆ.ಆಸ್ಪತ್ರೆಗೆ ತೆರಳಿ ಗುರುಪ್ರಸಾದ್ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮೊಬೈಲ್ ಸ್ಪೋಟಗೊಂಡು ವ್ಯಕ್ತಿಗೆ ಗಾಯ Read More »

ರಿಕ್ಷಾ ಚಾಲಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಿಕ್ಷಾ ಚಾಲಕನನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ನಿವಾಸಿ ವಸಂತ ಪೂಜಾರಿ( 52) ಎಂಬಾತ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.ವಸಂತ ಪೂಜಾರಿ ರಿಕ್ಷಾ ಚಾಲಕನಾಗಿದ್ದು ರಿಕ್ಷಾದಲ್ಲಿ ತನ್ನ ಮನೆಗೆ ಹೋಗುವ ಸಂದರ್ಭದಲ್ಲಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಮನೆಗೆ ಬಿಡುವುದಾಗಿ ಹೇಳಿ ಪುಸಲಾಯಿಸಿ ರಿಕ್ಷಾ ಹತ್ತಿಸಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ‌.ಈ ಕುರಿತು

ರಿಕ್ಷಾ ಚಾಲಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ Read More »

ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು

ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕಾರಿನ ನಡುವೆ ಮಾ.13ರಂದು ಕಡಬ ತಾಲೂಕಿನ ಗುಂಡ್ಯ ಸಮೀಪ ಅಪಘಾತ ಸಂಭವಿಸಿ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಗುಂಡ್ಯ ಗಡಿ ದೇವಸ್ಥಾನದ ಸಮೀಪ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.ಕಾರಿನಲ್ಲಿದ್ದವರು ಬೆಳ್ತಂಗಡಿ ಕೊಕ್ಕಡ ನಿವಾಸಿಗಳು ಎಂದು ತಿಳಿದು ಬಂದಿದೆ.

ಗುಂಡ್ಯ : ಕಾರು ಕೆಎಸ್ಸಾರ್ಟಿಸಿ ಬಸ್ಸು ಅಪಘಾತ,ಮೂವರು ಸಾವು Read More »

ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯ ಕಡಿದು ಭೀಕರ ಕೊಲೆ!

ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯ ಕಡಿದು ಕೊಲೆ ಮಾಡಿರುವ ಘಟನೆ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಮಾ.11ರಂದು ನಡೆದಿದೆ. ಅಡಿಯರ ಯಶೋಧ (45), ಕುಂಜಿರಾಮ (47) ಮೃತರು ಚಂದು (65) ಎಂಬಾತನಿಂದ ಕೊಲೆಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯನ್ನು ಚಂದು ಕಡಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಕೊಡಗು ಎಸ್ಪಿ ಬಿಂದುಮಣಿ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯ ಕಡಿದು ಭೀಕರ ಕೊಲೆ! Read More »

error: Content is protected !!
Scroll to Top