ಕ್ರೈಂ

ಮಾವಜಿ ಮೋನಪ್ಪ ಗೌಡ ನಿಧನ

ಆಲೆಟ್ಟಿ ಗ್ರಾಮದ ಆರಂಬೂರು ಮಾಂಬುಳಿ ನಿವಾಸಿ ಮಾವಜಿ ಮೋನಪ್ಪ ರವರು ಅಲ್ಪಕಾಲದ ಅಸೌಖ್ಯದಿಂದ ನ. 21 ರಂದು ನಿಧನರಾದರು.ಮೃತರು ಪತ್ನಿ ಶ್ರೀಮತಿ, ಪುತ್ರರಾದ ಸನತ್, ಗಗನ್, ಜೀವನ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಮಾವಜಿ ಮೋನಪ್ಪ ಗೌಡ ನಿಧನ Read More »

ಚಿರತೆ ದಾಳಿಗೆ ಐದು ವರ್ಷದ ಮಗು ಬಲಿ

ಚಿಕ್ಕಮಗಳೂರಿನ ಕಡೂರು ತಾಲೂಕಿನ ನವಿಲೇಕಲ್ಲುಗುಡ್ಡ ಗ್ರಾಮದಲ್ಲಿ, ತಂದೆಯ ಮುಂದೆಯೇ ಚಿರತೆ ದಾಳಿ ಮಾಡಿ ಸಾನ್ವಿ ಎಂಬ ಮಗುವನ್ನು ಕೊಂದಿದೆ. ಕೂಲಿ ಕಾರ್ಮಿಕ ಬಸವರಾಜ್‌ ಅವರ ಪುತ್ರಿ ಸಾನ್ವಿ, ಮನೆಯ ಹಿಂದೆ ನಿಂತಿದ್ದಾಗ ಚಿರತೆ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ದಿದೆ. ಘಟನೆ ಬೀರೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯುವಂತೆ ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿತ್ತು

ಚಿರತೆ ದಾಳಿಗೆ ಐದು ವರ್ಷದ ಮಗು ಬಲಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, 19 ವರ್ಷಗಳ ಬಳಿಕ ಬಂಧನ

ಮಂಗಳೂರು ನಗರ ಪೊಲೀಸರು 2006ರ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಬೀರ್‌ಗೆ ಆಶ್ರಯ ನೀಡಿ, ತಲೆಮರೆಸಿಕೊಳ್ಳಲು ಸಹಕರಿಸಿದ್ದ ಆರೋಪಿ ಅಬ್ದುಲ್ ಸಲಾಂ ಅಡ್ಡರು ಎಂಬಾತನನ್ನು 19 ವರ್ಷಗಳ ಬಳಿಕ ಬಂಧಿಸಿದ್ದಾರೆ. ಕೃತ್ಯ ನಡೆದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಅಬ್ದುಲ್ ಸಲಾಂ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣದ ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ, 19 ವರ್ಷಗಳ ಬಳಿಕ ಬಂಧನ Read More »

ಕನಕಮಜಲು : ಕಾರು ಅಪಘಾತ

ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ನ.20ರಂದು ಸಂಜೆ ಕನಕಮಜಲಿನಿಂದ ವರದಿಯಾಗಿದೆ. ಮೈಸೂರಿನಿಂದ ಕುಂದಾಪುರಕ್ಕೆ ಹೋಗುತಿದ್ದ ಕಾರು ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪಕ್ಕದ ಜಾಗದಲ್ಲಿ ಹೊಂಡವೊಂದಕ್ಕೆ ಬಿತ್ತು.‌ ಚಾಲಕ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಕನಕಮಜಲು : ಕಾರು ಅಪಘಾತ Read More »

ಮಹಿಷಾಸುರ ಪಾತ್ರ ನಿರ್ವಹಿಸಿದ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು

ಉಡುಪಿ: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದು ನಿಧನ ಹೊಂದಿದ ಘಟನೆ ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ.ಈಶ್ವರ ಗೌಡ 2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು.ಈಶ್ವರ ಗೌಡ

ಮಹಿಷಾಸುರ ಪಾತ್ರ ನಿರ್ವಹಿಸಿದ ಯಕ್ಷಗಾನ ಕಲಾವಿದ ಕುಸಿದು ಬಿದ್ದು ಸಾವು Read More »

ಸ್ಕೂಟಿ ಅಪಘಾತದಲ್ಲಿ ಯುವತಿ ಸಾವು

ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಯುವತಿ ಮೃತಪಟ್ಟ ಘಟನೆ ಬಂಟ್ವಾಳದಿಂದ ವರದಿಯಾಗಿದೆ.ಬಂಟ್ವಾಳದ ಕಾವಳಕಟ್ಟೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಕಡಬದ ಯುವತಿ ಮೃತಪಟ್ಟಿದ್ದಾರೆ.ಸ್ಕೂಟರ್ ಸವಾರೆ, ಕಡಬದ ಶ್ರೀ ದುರ್ಗಾ ಎಲೆಕ್ಟ್ರಿಕಲ್ ಮಾಲಕ ಕುಂತೂರು ನಿವಾಸಿ ಸುನಿಲ್ ಕೊಲತ್ತಾಯ ಎಂಬವರ ಪುತ್ರಿ ಅನನ್ಯಾ (21ವ) ಮೃತಪಟ್ಟವರು. ಸಹ ಸವಾರೆ, ಗುರುವಾಯನಕೆರೆ ನಿವಾಸಿ ಪೃಥ್ವಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಇಬ್ಬರೂ ಮಂಗಳೂರು ಕಾಲೇಜೊಂದರ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯರೆಂದು ತಿಳಿದು ಬಂದಿದೆ. ಪುಂಜಾಲಕಟ್ಟೆ

ಸ್ಕೂಟಿ ಅಪಘಾತದಲ್ಲಿ ಯುವತಿ ಸಾವು Read More »

ಸುಳ್ಯ : ಕುಕ್ಕರ್ ಬ್ಲಾಸ್ಟ್ ಮನೆಗೆ ಹಾನಿ,ಅಪಾಯದಿಂದ ಪಾರಾದ ಮನೆಯವರು!

ಸುಳ್ಯ : ಬೋರುಗುಡ್ಡೆ ಅಬ್ಬುಲ ಅಡ್ಕತ್ಬೈಲ್ ಅವರ ಮನೆಯಲ್ಲಿ ನ.19ರಂದು ಮುಂಜಾನೆ ಉಪಹಾರ ತಯಾರಿ ಸಂದರ್ಭದಲ್ಲಿ ಗ್ಯಾಸ್ ಸ್ಟೌವ್ ನಲ್ಲಿ ಇದ್ದ ಕುಕ್ಕರ್ ಸಿಡಿದು ಅಡುಗೆಮನೆಗೆ ಹಾನಿಯಾಗಿ ಮನೆಯವರು ಅಪಾಯದಿಂದ ಘಟನೆ ವರದಿಯಾಗಿದೆ.ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದ ಪರಿಣಾಮ ಅಡುಗೆಮನೆಯ ಗೋಡೆ, ಟೈಲ್ಸ್‌, ಮೇಲ್ಚಾವಣಿ ಹಾಗೂ ಅಡುಗೆ ಸಾಮಾನುಗಳು ಹಾನಿಗೊಳಗೊಂಡಿವೆ. ಘಟನೆ ಸಂಭವಿಸಿದ ವೇಳೆ ಮನೆಮಂದಿ ಅಡುಗೆಮನೆ ಸಮೀಪದಲ್ಲೇ ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ

ಸುಳ್ಯ : ಕುಕ್ಕರ್ ಬ್ಲಾಸ್ಟ್ ಮನೆಗೆ ಹಾನಿ,ಅಪಾಯದಿಂದ ಪಾರಾದ ಮನೆಯವರು! Read More »

ಹೋರಿಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ

ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಪೋಲೀಸರು ಐವತ್ತೊಕ್ಕು ಗ್ರಾಮದ ಕರಿಕ್ಕಳ ಶಾಲಾ ಬಳಿಯ ಗುಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾಗ ಆರೋಪಿಗಳು ಪರಾರಿಯಾದ ಘಟನೆ ವರದಿಯಾಗಿದೆ.ನಾಲ್ವರು ಸ್ಥಳದಲ್ಲಿದ್ದ ದುಷ್ಕರ್ಮಿಗಳು ಮಾಂಸ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಲು‌ ಯತ್ನಿಸಿದ್ದಾಗ ಬೆನ್ನಟ್ಟಿದ್ದ ಪೊಲೀಸರಿಗೆ ಒಬ್ಬ ಸಿಕ್ಕಿಬಿದ್ದಿರುವುದಾಗಿ ತಿಳಿದು ಬಂದಿದೆ.ಐವತ್ತೊಕ್ಲು ಗ್ರಾಮದ ನಿಡ್ವಾಳ ಮತ್ತು ಕರಿಕ್ಕಳ ಶಾಲಾ ಸಮೀಪದ ಗುಡ್ಡೆಯೊಂದರಲ್ಲಿ ನಾಲ್ವರು ದುಷ್ಕರ್ಮಿಗಳು ಹೋರಿಗಳನ್ನು ತಂದು ಕಟ್ಟಿ ಹಾಕಿ ಕಡಿದು ಮಾಂಸ ಮಾಡುತ್ತಿದ್ದರೆನ್ನಲಾಗಿದೆ. ಈ ಮಾಹಿತಿ ತಿಳಿದ

ಹೋರಿಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ Read More »

ಪುತ್ತೂರು : ನೆಹರು ನಗರ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ನಿಧನ

ಪುತ್ತೂರು ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀಧರ್ ನಾಯ್ಕ್ (57 ವ.) ಶನಿವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಮ್ರತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

ಪುತ್ತೂರು : ನೆಹರು ನಗರ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ನಿಧನ Read More »

ರೇಬಿಸ್ ಕಾಯಿಲೆಗೊಳಗಾದ ಮಹಿಳೆ ಸಾವು

ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ನಿವಾಸಿಯ ಮಹಿಳೆಯೊಬ್ಬರು ರೇಬಿಸ್ ಕಾಯಿಲೆಗೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನ.14 ರಂದು ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.ಕಲ್ಲುಗುಂಡಿಯ ನೆಲ್ಲಿಕುಮೇರಿಯ ಕುಂಬೆ (57 ವರ್ಷ ) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.ಕುಂಬೆಯವರು ಕೆಲಸಕ್ಕೆ ಹೋಗುವ ವೇಳೆ ಇತ್ತೀಚೆಗೆ ನಾಯಿಯೊಂದು ಕಚ್ಚಿತ್ತು. ನಾಯಿ ಕಚ್ಚಿದ್ದನ್ನು ಮನೆಯಲ್ಲಿ ಯಾರಿಗೂ ತಿಳಿಸದೆ ಮಹಿಳೆ ಟಿಟಿ ಇಂಜೆಕ್ಷನ್ ಚುಚ್ಚಿಸಿಕೊಂಡು ಸುಮ್ಮನಾಗಿದ್ದರು. ಆದರೆ 40 ದಿನದ ಬಳಿಕ ಅವರಲ್ಲಿ ರೇಬಿಸ್ ಲಕ್ಷಣ ಕಾಣಿಸಿಕೊಂಡಿತು.

ರೇಬಿಸ್ ಕಾಯಿಲೆಗೊಳಗಾದ ಮಹಿಳೆ ಸಾವು Read More »

error: Content is protected !!
Scroll to Top