ಪ್ರಚಲಿತ

ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ

ಸುಳ್ಯ : ಈ ವರ್ಷ ರಾಜ್ಯ ಮಟ್ಟದಲ್ಲಿ ನಡೆದಿರುವ ಪಿಜಿಸಿಇಟಿ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ಅಜ್ಜಾವರ ಗ್ರಾಮದ ಮೇನಾಲ ಸುಭೋದ್ ಶೆಟ್ಟಿ – ಶ್ರೀಮತಿ ಶಿಲ್ಪಾ ದಂಪತಿಗಳ ಪುತ್ರ ಪ್ರಣಾಮ್ ಶೆಟ್ಟಿ ಮೇನಾಲ ರಾಜ್ಯದಲ್ಲಿ 8 ನೇ ರ್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ. ರಾಜ್ಯದಲ್ಲಿ ಒಟ್ಟು 47436 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು, ಅವರಲ್ಲಿ ಪ್ರಣಾಮ್ ಶೆಟ್ಟಿಯವರು 8 ಸ್ಥಾನ ಪಡೆದಿದ್ದಾರೆ. ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಳ್ಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿ, ಪುತ್ತೂರು […]

ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ Read More »

ಮುಡಾದ ಸೈಟ್‌ಗಳನ್ನು ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದ 14 ಸೈಟ್ಗಳನ್ನು ವಾಪಸ್ ನೀಡುವುದಾಗಿ ಪತ್ರ ಬರೆದಿದ್ದಾರೆ. ಮುಡಾದ ಆಯುಕ್ತರಿಗೆ ಸುದೀರ್ಘ ಪತ್ರ ಬರೆದ ಅವರು ಎಲ್ಲ ಸೈಟ್‌ಗಳನ್ನು ಹಿಂದಿರುಗಿಸುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ

ಮುಡಾದ ಸೈಟ್‌ಗಳನ್ನು ವಾಪಸ್ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ Read More »

ಚೈತ್ರ ಯುವತಿ ಮಂಡಲದ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಆಯ್ಕೆ

ಅಜ್ಜಾವರ : ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಮಾಲತಿ ಸೂರ್ಯ, ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,ಗೌರವ ಸಲಹೆಗಾರರಾಗಿ ಜಯಲಕ್ಷ್ಮೀ ಸಂಜೀವ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಸಂತೋಷ್,ಪತ್ರಿಕಾ ವರದಿಗಾರರಾಗಿ ಕು.ಪವಿತ್ರ ಮಾವಿನಪಳ್ಳ,ಕ್ರೀಡಾ ಕಾರ್ಯದರ್ಶಿಯಾಗಿ ಭವ್ಯ ಭುವನ್ ಅತ್ಯಾಡಿ,ನಿರ್ದೇಶಕರಾಗಿ ಕು. ಹರಿಣಿ ಶಾಂತಿಮಜಲು, ಕು.ಪ್ರೀತಿ

ಚೈತ್ರ ಯುವತಿ ಮಂಡಲದ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಆಯ್ಕೆ Read More »

ಶತಮಾನೋತ್ಸವ ಸಂಭ್ರಮದಲ್ಲಿ ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ

ಸುಳ್ಯ: ಎಲಿಮಲೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಶತಮಾನದ ಸಂಭ್ರಮದಲ್ಲಿದ್ದು ಡಿಸೆಂಬರ್ ತಿಂಗಳಲ್ಲಿ 3 ದಿನದ ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು 18-12-1920 ರಂದುಆಗಿನ ಡಿಸ್ಟಿಕ್ಟ್ ಬೋರ್ಡ್ ಎಲಿಮೆಂಟರಿ ಶಾಲೆಯಾಗಿ ಪ್ರಾರಂಭಗೊಂಡ ಈ ಶಾಲೆಯು 1960ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು.ಈ ಶಾಲೆಯಲ್ಲಿ ಸುಮಾರು 4.500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು

ಶತಮಾನೋತ್ಸವ ಸಂಭ್ರಮದಲ್ಲಿ ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ Read More »

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ

ಸುಳ್ಯ, AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ಯವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ AIKMCC ಪ್ರದಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲೀ ತಂಙಳ್ ಹಾಗೂ ಸುಳ್ಯ AIKMCC ಅಧ್ಯಕ್ಷರಾದ ಖಲಂದರ್ ಎಲಿಮಲೆ ಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ,

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ Read More »

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ಳಾರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ )ಸುಳ್ಯ ತಾಲೂಕು ಬೆಳ್ಳಾರೆ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ( ರಿ )ಬೆಳ್ಳಾರೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಶಿವರಾಮ ಕಾರಂತ ಕಾಲೇಜು ಬೆಳ್ಳಾರೆ ಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬಳಿಕ ಅವರು ಸ್ವಾಸ್ಥ್ಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಹದಿ ಹರೆಯದಲ್ಲಿ ದಾರಿ ತಪ್ಪುವ ದುಶ್ಚಟ ದುರಭ್ಯಾಸ

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಣೆ

ಮಂಗಳೂರು: ಬಜಪೆ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಿಸಲಾಗಿದೆ.ದೀರ್ಘ‌ ಸೇವೆ ಬಳಿಕ ಶ್ವಾನದಳ ಕೆಲಸದ ಒತ್ತಡದಿಂದ ತಮ್ಮ ಸೂಕ್ಷ್ಮತೆಯನ್ನು ನಿಧಾನವಾಗಿ ಕಳೆದುಕೊಳ್ಳುವು ದರಿಂದ ಹಾಗೂ ಅವುಗಳ ಮೇಲೆ ಅಧಿಕ ಒತ್ತಡ ಹೇರದಿರುವ ಉದ್ದೇಶದಿಂದ ಅವುಗಳನ್ನು ನಿವೃತ್ತಿಗೊಳಿಸಲಾಗುತ್ತದೆ.ಜೂಲಿ 2013ರ ಮಾರ್ಚ್‌ 26ಕ್ಕೆ ಸೇವೆಗೆ ಸೇರಿದ್ದಳು. ಆಕೆಯ ಜಾಗಕ್ಕೆ ರಿಯೋನನ್ನು ತರಲಾಗಿದೆ. ನಿವೃತ್ತಳಾದ ಜೂಲಿಗೆ ಹೂಮಾಲೆ ಹಾಕಿ, ಕೇಕ್‌ ಕತ್ತರಿಸಿ ಪ್ರೀತಿ ತೋರಿದ

ಭದ್ರತಾ ದಳದ ಶ್ವಾನ, ಜ್ಯೂಲಿಗೆ ನಿವೃತ್ತಿ ಘೋಷಣೆ Read More »

ಭಾರತೀಯ ಸೇನೆಯ ಯೋಧ ಶರತ್ ಕುಮಾರ್ ನಾರ್ಕೋಡು 30ಕ್ಕೆ ಸೇವಾ ನಿವೃತ್ತಿ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಶರತ್ ಕುಮಾರ್ ನಾರ್ಕೋಡು ಭಾರತೀಯ ಸೇನೆಯ ಯೋಧನಾಗಿದ್ದು ಸೆ. 30ರಂದು ನಿವೃತ್ತಿಯಾಗುತ್ತಿದ್ದಾರೆ.2007ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಬಳಿಕ ಮದ್ರಾಸ್‌ ಇಂಜಿನಿಯರಿಂಗ್ ಗ್ರೂಪಿನಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಜಮ್ಮು ಕಾಶ್ಮೀರ, ಕಲ್ಕತ್ತಾ ಸಿಕ್ಕಿಂ, ಶ್ರೀ ನಗರ, ಅರುಣಾಚಲ ಪ್ರದೇಶ, ದೆಹಲಿ, ಉತ್ತರಪ್ರದೇಶ, ಪಂಜಾಬ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಇದೀಗ ಕಳೆದ ಮೂರು ತಿಂಗಳಿನಿಂದ ಅಸ್ಸಾಂನಲ್ಲಿ ಸೇವೆಯಲ್ಲಿದ್ದಾರೆ.

ಭಾರತೀಯ ಸೇನೆಯ ಯೋಧ ಶರತ್ ಕುಮಾರ್ ನಾರ್ಕೋಡು 30ಕ್ಕೆ ಸೇವಾ ನಿವೃತ್ತಿ Read More »

ಎಂ.ಬಿ.ಫೌಂಡೇಶನ್ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್‌ ಅವಾರ್ಡ್’ ಪ್ರಕಟ

ಸುಳ್ಯ : ಸುಳ್ಯದ ಎಂ.ಬಿ.ಫೌಂಡೇಶನ್ ಸುಳ್ಯ ಇದರ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್‌ ಅವಾರ್ಡ್’ಗೆ ಇಬ್ಬರು ಶಿಕ್ಷಿಕಿಯರು ಆಯ್ಕೆಯಾಗಿದ್ದಾರೆ.ಸುಳ್ಯ ಕೋಲ್ಟಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಲಜಾಕ್ಷಿ ಕುಕ್ಕುಜೆ ಹಾಗೂ ಸೈಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕಿ ವಲ್ಸ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಎಂ.ಬಿ.ಫೌಂಡೇಶನ್‌ ಅಧ್ಯಕ್ಷ ಎಂ.ಬಿ.ಸದಾಶಿವ ತಿಳಿಸಿದ್ದಾರೆ.ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ತಂದೆ ಎಂ.ಬಾಲಕೃಷ್ಣ ಗೌಡ ಹಾಗೂ ತಾಯಿ ದೇವಕಿ ಅವರ

ಎಂ.ಬಿ.ಫೌಂಡೇಶನ್ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್‌ ಅವಾರ್ಡ್’ ಪ್ರಕಟ Read More »

ಸುಳ್ಯಕ್ಕೆ ನೂತನ ತಹಶೀಲ್ದಾರ್ ಅರವಿಂದ್ ಕೆ .ಎಂ

ಸುಳ್ಯ : ಸುಳ್ಯ ತಾಲೂಕು ನೂತನ ತಹಶೀಲ್ದಾರ್ ಆಗಿ ಕೆ ಎ ಎಸ್ ಅಧಿಕಾರಿ ಅರವಿಂದ್ ಕೆ ಎಂ ಆಗಮಿಸಿದ್ದಾರೆ . ಇವರು ಸುಳ್ಯ ತಹಶೀಲ್ದಾ‌ರ್ ಆಗಿ ಪ್ರಭಾರ ಕರ್ತವ್ಯ ನಿರ್ವಹಿಸಲಿದ್ದು, ಈ ಹಿಂದೆ ಮಂಗಳೂರು ಎ ಸಿ ಕಛೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು ಮೂಲತಃ ಚಿತ್ರದುರ್ಗದವರಾಗಿದ್ದಾರೆ.

ಸುಳ್ಯಕ್ಕೆ ನೂತನ ತಹಶೀಲ್ದಾರ್ ಅರವಿಂದ್ ಕೆ .ಎಂ Read More »

error: Content is protected !!
Scroll to Top