ಪ್ರಚಲಿತ

ಸಂಸದ ಕ್ಯಾ. ಚೌಟ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ನವ ವರ್ಷದ ಕಂಬಳ

ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್‌ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ನಡೆದ ನವ ವರ್ಷದ-ನವ ವಿಧದ ಮಂಗಳೂರು ಕಂಬಳವು ನವರೂಪದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿದೆ. ತುಳುನಾಡು ಅಸ್ಮಿತೆಯ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ʼಬ್ಯಾಕ್‌ ಟು ಊರುʼ ಪರಿಕಲ್ಪನೆಗೆ ಪೂರಕವಾಗಿ ತಾಯ್ನಾಡಿಗೆ ವಾಪಾಸ್ಸಾಗಿ ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ 9 ಮಂದಿ ಉದ್ಯಮಿಗಳನ್ನು […]

ಸಂಸದ ಕ್ಯಾ. ಚೌಟ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ನವ ವರ್ಷದ ಕಂಬಳ Read More »

ಅರಂತೋಡು ಗ್ರಾಮ ಪಂಚಾಯತ್ ನಿರಂತರ 79ತಿಂಗಳ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್ ನ ಮಹತ್ವಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತೆಯ. ನಿರಂತರ 79ನೇ ಕಾರ್ಯಕ್ರಮವು ದಿನಾಂಕ 28.12.2025ನೇ ಆದಿತ್ಯವಾರದಂದು ಶ್ರೀಕೃಷ್ಣ ಗೆಳಯರ ಬಳಗ ಕೊಡಂಕಿರಿ ಆರಂತೋಡು ಇವರ ಸಹಯೋಗದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಪಂಚಾಯತ್, ಸ್ವಚ್ಛತಾ ಘಟಕದ ಸಿಬ್ಬಂದಿಗಳು ಆರಂತೋಡು ಪೇಟೆಯ ನಾಗರೀಕ ಬಂಧುಗಳು ಭಾಗವಹಿಸಿದ್ದರು.ಆರಂತೋಡು ಗ್ರಾಮ ಪಂಚಾಯತ್ ಡಿಸೆಂಬರ್ ತಿಂಗಳ 2018ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ, ಸಂಸ್ಥೆ ಗಳ ಸಹಕಾರ ದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಅರಂತೋಡು ಗ್ರಾಮ ಪಂಚಾಯತ್ ನಿರಂತರ 79ತಿಂಗಳ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ Read More »

ದೈವರಾಧನೆ ತುಳುನಾಡಿನ ಶಕ್ತಿ : ಭಾಗೀರಥಿ ಮುರುಳ್ಯ

ದೈವರಾಧನೆ ತುಳುನಾಡಿನ‌ ದೊಡ್ಡ ಶಕ್ತಿಯಾಗಿದ್ದು ಇದು ದೈವರಾಧಕರಾದ ನಮ್ಮಲ್ಲಿ ಒಗ್ಗಟನ್ನು ಹೆಚ್ಚಿಸುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಅಂಗವಾಗಿ ಇಲ್ಲಿ ದ. 28 ರಂದು ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಪೂವಪ್ಪ ಕಣಿಯೂರು ಧಾರ್ಮಿಕ ಉಪನ್ಯಾಸ

ದೈವರಾಧನೆ ತುಳುನಾಡಿನ ಶಕ್ತಿ : ಭಾಗೀರಥಿ ಮುರುಳ್ಯ Read More »

ಕೆ.ವಿ.ಜಿ. ಸುಳ್ಯ ಹಬ್ಬ: ಕೆ.ವಿ.ಜಿ. ಸಾಧಶ್ರೀ ಪ್ರಶಸ್ತಿ ಪ್ರದಾನ

ಸುಳ್ಯ : ವಿದ್ಯಾರ್ಥಿಗಳನ್ನು, ಯುವಕರನ್ನು ಸದಾ ಬೆಂಬಲಿಸುತ್ತಿದ್ದ ಡಾ.ಕುರುಂಜಿ ವೆಂಕಟ್ರಮಣ ಗೌಡರು ಯುವ ಜನಾಂಗಕ್ಕೆ ಸದಾ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಎರಡು ದಿನಗಳ ಕಾಲ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆದ ಕೆವಿಜಿ ಸುಳ್ಯ ಹಬ್ಬದಲ್ಲಿ ಕೆವಿಜಿ ಸಾಧನಾಶ್ರೀ ಪ್ರಶಸ್ತಿ

ಕೆ.ವಿ.ಜಿ. ಸುಳ್ಯ ಹಬ್ಬ: ಕೆ.ವಿ.ಜಿ. ಸಾಧಶ್ರೀ ಪ್ರಶಸ್ತಿ ಪ್ರದಾನ Read More »

ಪೆರಾಜೆಯಲ್ಲಿ ಅಯ್ಯಪ್ಪ ದೀಪೋತ್ಸವ-ಸಾಧಕರಿಗೆ ಸನ್ಮಾನ

ಪೆರಾಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘದ ವತಿಯಿಂದ ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದ ಮುಂಭಾಗ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ನಡೆಯಿತು.ಅಧ್ಯಕ್ಷತೆಯನ್ನು ಪೆರಾಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘದ ಅಧ್ಯಕ್ಷ ಸುರೇಶ್ ಪೆರುಮುಂಡ ವಹಿಸಿದರು.ಮುಖ್ಯಅತಿಥಿಗಳಾಗಿ ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಗ್ರಾ.ಪಂ.ಸದಸ್ಯೆ ಭೂದೇವಿ ಪೆರಾಜೆ, ಅರಂತೋಡು ಶ್ರೀಮಲ್ಲಿಕಾರ್ಜುನ ಭಜನಾ ಮಂಡಳಿ ಕಾರ್ಯದರ್ಶಿ ಸುರೇಶ್ ಉಳುವಾರು ಭಾಗವಹಿಸಿದರು.ಈ ಸಂದರ್ಭದಲ್ಲಿ

ಪೆರಾಜೆಯಲ್ಲಿ ಅಯ್ಯಪ್ಪ ದೀಪೋತ್ಸವ-ಸಾಧಕರಿಗೆ ಸನ್ಮಾನ Read More »

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ಯಾವುದೇ ಖಾಸಗಿ ವಿದ್ಯಾಸಂಸ್ಥೆಗೆ ಕಡಿಮೆ ಇಲ್ಲದ ರೀತಿಯಲ್ಲಿ ಬೆಳೆದಿದೆ : ಶಾಸಕಿ ಭಾಗೀರಥಿ ಮುರುಳ್ಯ

“ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ಯಾವುದೇ ಖಾಸಗಿ ವಿದ್ಯಾಸಂಸ್ಥೆಗೆ ಕಡಿಮೆ ಇಲ್ಲದ ರೀತಿಯಲ್ಲಿ ಉತ್ತಮವಾಗಿ ಬೆಳೆದಿದೆ. ಫಲಿತಾಂಶ ಫಲಿತಾಂಶ ಸಂಸ್ಥೆಗೆ ದೊರೆಯುತ್ತಿದೆ. ಇಂತಹ ಸಂಸ್ಥೆಯ ಅಮೃತಮಹೋತ್ಸವ ಆಚರಣೆ ನಮ್ಮೆಲ್ಲರ ಪಾಲಿಗೆ ಬಂದಿರುವುದು ನಮ್ಮ ಸುಯೋಗ ಎಂದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಅವರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಅಮೃತಮಹೋತ್ಸವ ಕಾರ್ಯಕ್ರಮವನ್ನು ಡಿ.27 ರಂದು ಉದ್ಘಾಟಿಸಿ,ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಂದರು.ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಳ್ಯದ ಸರಕಾರಿ

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ಯಾವುದೇ ಖಾಸಗಿ ವಿದ್ಯಾಸಂಸ್ಥೆಗೆ ಕಡಿಮೆ ಇಲ್ಲದ ರೀತಿಯಲ್ಲಿ ಬೆಳೆದಿದೆ : ಶಾಸಕಿ ಭಾಗೀರಥಿ ಮುರುಳ್ಯ Read More »

ನವ ವಿಧ- ನವ ವರ್ಷದ ವಿಶಿಷ್ಟತೆ ಸಾರಿದ ಮಂಗಳೂರು ಕಂಬಳ

ಮಂಗಳೂರು: ಮಂಗಳೂರು ಕೇವಲ ನಮ್ಮ ನೆಲವಲ್ಲ, ಇದು ಸನಾತನ ಸಂಸ್ಕೃತಿಯ ನೆಲೆಬೀಡು ಮತ್ತು ನಮ್ಮ ತುಳುನಾಡಿನ ಅಸ್ಮಿತೆ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯ ತಪ್ಪು ಅಭಿಪ್ರಾಯ-ಅಪಪ್ರಚಾರ ಹುಟ್ಟು ಹಾಕುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಜೊತೆಗೆ, ಸ್ಥಳೀಯರ ಪಾಲ್ಗೊಳ್ಳುವಿಕೆಯೊಂದಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ನಮ್ಮ  ‘ಮಂಗಳೂರು ೨.೦ ಹಾಗೂ ‘ವಿಕಸಿತ ಮಂಗಳೂರು’ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ.

ನವ ವಿಧ- ನವ ವರ್ಷದ ವಿಶಿಷ್ಟತೆ ಸಾರಿದ ಮಂಗಳೂರು ಕಂಬಳ Read More »

ತೊಡಿಕಾನ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಕುತ್ತಿ ಪೂಜೆ, ಗಣಪತಿ ಹವನ – ವೈಭವದ ಹಸಿರು ವಾಣಿ ಮೆರವಣಿಗೆ

ಸುಳ್ಯ ತಾಲೂಕಿನ‌ ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ದ. 26ರಂದು ಕುತ್ತಿ ಪೂಜೆ ಮತ್ತು ದ. 27ರಂದು ಬೆಳಿಗ್ಗೆ ವೈಭವದ ಹಸಿರುವಾಣಿ ಮೆರವಣಿಗೆ ನಡೆಯಿತು. ದ. 26ರಂದು ರಾತ್ರಿ ಉಪೇಂದ್ರ ಆಚಾರ್ಯ ಮಂಡೆಕೋಲು ಇವರ ನೇತೃತ್ವದಲ್ಲಿ ಕುತ್ತಿ ಪೂಜೆ ನಡೆಯಿತು. ದ. 27ರಂದು ಬೆಳಿಗ್ಗೆ ಗಣಪತಿ ಹವನ ನಡೆದು ಬಳಿಕ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಿಂದ ಪಡ್ಪು ದೈವಸ್ಥಾನದ ತನಕ ವೈಭವದ ಹಸಿರುವಾಣಿ ಮೆರವಣಿಗೆ ನಡೆ ಯಿತು.

ತೊಡಿಕಾನ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಕುತ್ತಿ ಪೂಜೆ, ಗಣಪತಿ ಹವನ – ವೈಭವದ ಹಸಿರು ವಾಣಿ ಮೆರವಣಿಗೆ Read More »

ಸುಳ್ಯದಲ್ಲಿ ನಡೆದ ಮ್ಯಾರಥಾನ್ ಯಶಸ್ವಿ, ಕೆವಿಜಿಯರಿಗೆ ಸಂದ ಗೌರವ : ಡಾ.ರೇಣುಕಾ ಪ್ರಸಾದ್

ಸುಳ್ಯ: ಎಜೆ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿದೆ. ಇದರಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ‌.ಈ ಯಶಸ್ಸು ಡಾ.ಕುರುಂಜಿಯವರಿಗೆ ಸಂದ ದೊಡ್ಡ ಗೌರವ ಎಂದು ಅಲಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಅಧ್ಯಕ್ಷರಾದ ಡಾ.ಕೆ.ವಿ.ರೇಣುಕಾ ಪ್ರಸಾದ್‌ ಹೇಳಿದ್ದಾರೆ.ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಡಿ.26ರಂದು ನಡೆದ ಮ್ಯಾರಥಾನ್‌ ಸಮರೋಪ ಸಮಾರಂಭದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಕೆವಿಜಿ ಶಿಕ್ಷಣ ಸಂಸ್ಥೆಗಳು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದಿದೆ.ನಗರಗಳಿಗೆ ಹೋಲಿಸಿದರೆ ಗ್ರಾಮೀಣ

ಸುಳ್ಯದಲ್ಲಿ ನಡೆದ ಮ್ಯಾರಥಾನ್ ಯಶಸ್ವಿ, ಕೆವಿಜಿಯರಿಗೆ ಸಂದ ಗೌರವ : ಡಾ.ರೇಣುಕಾ ಪ್ರಸಾದ್ Read More »

ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್ ಅವರಿಗೆ ಸಚಿವ ದರ್ಜೆ ಸ್ಥಾನಮಾನ

ಬೆಂಗಳೂರು: ರಾಜ್ಯದಲ್ಲಿ ಸುಮಾರು ಮೂರು ಕೋಟಿಯಷ್ಟು ವಿವಿಧ ರೀತಿಯ ಕಾರ್ಮಿಕರಿರುವ “ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ” ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡಿ ಸರಕಾರ ಆದೇಶಿಸಿದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಬಗ್ಗೆ ಇರುವ ವಿಶೇಷ ಕಾಳಜಿ ಮತ್ತು ಕಾರ್ಮಿಕರ ಕನಿಷ್ಠ ವೇತನದ ಸಮಸ್ಯೆ ಬಗ್ಗೆ ಚರ್ಚಿಸಲು, ಬಗೆಹರಿಸಲು ಇತರ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಕಾರ್ಮಿಕ ಕನಿಷ್ಠ ವೇತನದ ಬಗ್ಗೆ ಅಧ್ಯಯನ ಮಾಡಲು ಹಾಗಗೂ ಕೇಂದ್ರ ಸರಕಾರದ

ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್ ಅವರಿಗೆ ಸಚಿವ ದರ್ಜೆ ಸ್ಥಾನಮಾನ Read More »

error: Content is protected !!
Scroll to Top