ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಕಾಡಾನೆಯೊಂದು ಏ.12ರಂದು ಬಾವಿಗೆ ಬಿದ್ದ ಘಟನೆ ವರದಿಯಾಗಿದೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದ್ದು ಆನೆಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ.
ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ Read More »
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಕಾಡಾನೆಯೊಂದು ಏ.12ರಂದು ಬಾವಿಗೆ ಬಿದ್ದ ಘಟನೆ ವರದಿಯಾಗಿದೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದ್ದು ಆನೆಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ.
ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ Read More »
ಸುಳ್ಯ ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ನಡೆದ ಚಿನ್ನರ ಕಲರವ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಅತ್ಯಂತ ಸಂತೋಷ ಮತ್ತು ಸಂಭ್ರಮದೊಂದಿಗೆ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಳ್ಯ ಬಿಇಒ ಶ್ರೀ ವೈ. ಎಸ್. ಹರಗಿ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಮುಖ್ಯೋಪಾಧ್ಯಾಯರು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶ್ರೀಧರ್ ಕೆರೆಮೂಲೆ ಅವರನ್ನು ಗೌರವಿಸಲಾಯಿತು. ಅವರ ಶಿಕ್ಷಣ ಕ್ಷೇತ್ರದ ಅಮೂಲ್ಯ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮವು ಪೂರ್ಣ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಚಿನ್ನರ ಕಲರವ – ಸಮಾರೋಪ ಸಮಾರಂಭ Read More »
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಘಟನೆ ವರದಿಯಾಗಿದೆ.ಜೀವಾವಧಿ ಶಿಕ್ಷೆಗೊಳಗಾಗಿರುವ ಅಶೋಕ್ ಕುಮಾರ್ ಎಂಬ ಶಿಕ್ಷಾ ಬಂಧಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 600 ಅಂಕಗಳಿಗೆ 481 ಅಂಕಗಳನ್ನು ಪಡೆದು ಶೇಕಡಾ 81% ರಷ್ಟು ಫಲಿತಾಂಶದೊಂದಿಗೆ ಪಾಸಾಗಿದ್ದಾನೆ.ಜೈಲಿನಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ ಬಂಧಿ ಅಶೋಕ್ ಕುಮಾರ್ ಕನ್ನಡದಲ್ಲಿ 82, ಇಂಗ್ಲಿಷ್ ನಲ್ಲಿ 69, ಇತಿಹಾಸದಲ್ಲಿ 94, ಅರ್ಥಶಾಸ್ತ್ರದಲ್ಲಿ 84, ಸಮಾಜಶಾಸ್ತ್ರದಲ್ಲಿ 77 ಮತ್ತು ರಾಜ್ಯಶಾಸ್ತ್ರದಲ್ಲಿ
ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪಿ.ಯು.ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ! Read More »
ಉಬರಡ್ಕ ಮಿತ್ತೂರು ಗ್ರಾಮದ ಪಟ್ರಕೋಡಿ ಪಿ. ಎಸ್. ಗಂಗಾಧರರವರ ಕೃಷಿ ತೋಟಕ್ಕೆ ಎಪ್ರಿಲ್ 9 ರ ರಾತ್ರಿ ಒಂಟಿ ಆನೆ ದಾಳಿ ನಡಿಸಿ ಕೃಷಿ ನಾಶ ಮಾಡಿದೆ.ಅಡಿಕೆ ಮರ ಬಾಳೆ ಇತರ ಬೆಳೆಗಳನ್ನು ನಾಶ ಮಾಡಿರುತ್ತದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮುಖಂಡ ಪಿ.ಎಸ್ ಗಂಗಾಧರ ಅವರ ತೋಟಕ್ಕೆ ಕಾಡಾನೆ ದಾಳಿ Read More »
ಏ.9ರಂದು ರಾತ್ರಿ ಅರಂತೋಡು ಗ್ರಾಮದ ಕಿರ್ಲಾಯ ಅನಂತ ಕೃಷ್ಣನವರ ತೋಟಕ್ಕೆ ಒಂಟಿ ಆನೆ ಬಂದು ಸುಮಾರು 50ರಿಂದ 60 ನೇಂದ್ರ ಬಾಳೆ ಗಿಡಗಳನ್ನು ನಾಶ ಮಾಡಿರುತ್ತದೆ .ಕಾಡಾನೆಗಳು ಮತ್ತೆ ಬಲ್ನಾಡು ಹೊಳೆ ದಾಟಿ ಪೂಮಲೆ ಪರಿಸರದ ಕಳುಬೈಲು ಕಾಡಿಗೆ ಬಂದಿರುತ್ತದೆ ಎಂದು ಅವರು ಮಾಹಿತಿ ಲಭ್ಯವಾಗಿದೆ. ಆದುದರಿಂದ ಈ ಭಾಗದ ಜನರು ಇದರ ಬಗ್ಗೆ ಜಾಗೃತರಾಗಿರಲು ತಿಳಿಸಲಾಗಿದೆ.
ಕಿರ್ಲಾಯದಲ್ಲಿ ಒಂಟಿ ಸಲಗದಿಂದ ಅಪಾರ ಬೆಳೆ ನಾಶ Read More »
ಅರಂತೋಡು ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ಕೆ ಎಂ ಉಸ್ಮಾನ್ ಮತ್ತು ಅನೀಸ ದಂಪತಿಗಳ ಪುತ್ರಿ ಹನಾ ಫಾತಿಮಾ ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದಲ್ಲಿ 555 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೆರ್ಗಡೆ ಹೊಂದಿದ್ದಾರೆ
ದ್ವಿತೀಯ ಪಿ ಯು ಸಿ ಫಲಿತಾಂಶ : ಹನಾ ಫಾತಿಮಾ ಅರಂತೋಡು ಡಿಸ್ಟಿಂಕ್ಷನ್ Read More »
ಪೆರಾಜೆ ಗ್ರಾಮದ ಕೆ. ಎಲ್. ಯಶ್ ಅವರು ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 96.67 ಶೇಕಡ ಅಂಕಗಳಿಸಿ ಉತ್ತಿರ್ಣರಾಗಿದ್ದಾರೆ. ಇವರು ರೇವಾ ಇಂಡಿ ಪೆಂಡೆಂಟ್ ಪಿಯು ಕಾಲೇಜು ಬೆಂಗಳೂರು ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪೆರಾಜೆ ಗ್ರಾಮದ ಮಾಜಿ ಸೈನಿಕ ಕೊಳಂಗಾಯ ಲೋಲಜಾಕ್ಷ ಅವರ ಪುತ್ರ.
ಕೆ.ಎಲ್ ಯಶ್ ಅವರಿಗೆ ದ್ವಿತೀಯ ಪಿ.ಯು.ಸಿಯಲ್ಲಿ ಶೇ. 96.67 ಅಂಕ Read More »
ಸುಳ್ಯ ಪದವು ಈಶ್ವರ ಮಂಗಳ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಎ.೯ ರಿಂದ ಎ.೧೨ ವರೆಗೆ ನಡೆಯಲಿದ್ದು ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆಯು ಏ.8ರಂದು ಜಾಲ್ಸೂರಿಗೆ ಆಗಮಿಸಿತು.ಗೋಳಿಕಟ್ಟೆಯಿಂದ ಜಾಲ್ಸೂರು ಪೇಟೆಯವರೆಗೆ ಶ್ರೀ ವರಮಹಾಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ವತಿಯಿಂದ ಪೂರ್ಣಕುಂಭ ಸ್ವಾಗತಿಲಾಯಿತು.ಪೇಟೆಯಲ್ಲಿ ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಶ್ರೀರಾಮ ಹನುಮ ಜ್ಯೋತಿ ಹಸ್ತಾಂತರಿಸಲಾಯಿತು.ಭಜನಾ ಮಂದಿರದ ಗೌರವಾಧ್ಯಕ್ಷ ಮೋಹನ್ ನಂಗಾರು, ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಕನಕಮಜಲು ಸಹಕಾರಿ ಸಂಘದ
ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಜಾಲ್ಸೂರಿಗೆ ಆಗಮನ Read More »
ಶಿವಮೊಗ್ಗ ದ ಖಾಸಗಿ ಆಸ್ಪತ್ರೆಯ ನರ್ಸ್ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ನಿವಾಸಿ ರನ್ಯಾ ಬೇಸಿಲ್ (30) ಮೃತರು.ಸೋಮವಾರ ಸಂಜೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ರನ್ಯಾ, ಕೆಲವೇ ಕ್ಷಣಗಳಲ್ಲಿ ಮತ್ತೆ ಹೊರಗೆ ತೆರಳಿದ್ದು, ಮುಡುಬ ಸಮೀಪದ ಸೇತುವೆ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿ ಅಚಾನಕ್ ನದಿಗೆ ಜಿಗಿದಿದ್ದಾರೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನರ್ಸ್ ನದಿಗೆ ಹಾರಿ ಆತ್ಮಹತ್ಯೆ Read More »
ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಎ.8 ರಂದು ರಾತ್ರಿ ಗಂಟೆ 8 ರಿಂದ “ತೊಡಓಲ್” ನಂತರ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 8.30 ರಿಂದ ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಮಂಡಳಿ ಸುಳ್ಯ ಇದರ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಕದಂಬ ಕೌಶಿಕೆ ನಡೆಯಲಿದೆ.ನಾಳೆ ದಿನ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ.
ಅಜ್ಜಾವರ : ಇಂದು ಜಾತ್ರೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ Read More »