ಪ್ರಚಲಿತ

ಸುಳ್ಯ – ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ, ಐಕ್ಯೂಎಸಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಮಟ್ಟದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ -2024 ದಿನಾಂಕ 05.12.2024 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಇವರು ಅಧ್ಯಕ್ಷತೆ ವಹಿಸಿದ್ದಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ […]

ಸುಳ್ಯ – ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ Read More »

ನಾಳೆ ಸುಳ್ಯದಲ್ಲಿ ದೀನದಯಾಳ್‌ ಸಹಕಾರ ಸಂಘ ನಿಯಮಿತ ಉದ್ಘಾಟನೆ

ಸುಳ್ಯ: ದೀನದಯಾಳ್‌ ಸಹಕಾರ ಸಂಘ ನಿಯಮಿತ ಡಿ.7ರಂದು (ನಾಳೆ) ಸುಳ್ಯದಲ್ಲಿ ಉದ್ಘಾಟನೆಯಾಗಲಿದೆ. ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್‌ನ 2 ನೇ ಮಹಡಿಯಲ್ಲಿ ನೂತನ ಸಹಕಾರ ಸಂಘ ಆರಂಭವಾಗಲಿದೆ. ದೀನದಯಾಳ್ ರೂರಲ್ & ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್‌ನ ನೇತೃತ್ವದಲ್ಲಿ ನೂತನ ಸಹಕಾರ ಸಂಘ ಕಾರ್ಯನಿರ್ವಹಿಸಲಿದೆ. ಡಿ.7ರಂದು ಪೂ.11.22ರ ಶುಭ ಮುಹೂರ್ತದಲ್ಲಿನೂತನ ಸಹಕಾರ ಸಂಘವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ವಿಧಾನ ಪರಿಷತ್ ಸದಸ್ಯರಾದ ಕಿಶೋ‌ರ್

ನಾಳೆ ಸುಳ್ಯದಲ್ಲಿ ದೀನದಯಾಳ್‌ ಸಹಕಾರ ಸಂಘ ನಿಯಮಿತ ಉದ್ಘಾಟನೆ Read More »

ನಾಳೆ ಕುಕ್ಕೆ ದೇವಳದಲ್ಲಿ ಬ್ರಹ್ಮ ರಥೋತ್ಸವ

ದ.ಕ ಜಿಲ್ಲೆಯ ಪ್ರಸಿದ್ದ ತೀರ್ಥ ಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯದ ಷಷ್ಠಿ ಮಹೋತ್ಸವ ಪ್ರಯುಕ್ತ ಬ್ರಹ್ಮರಥೋತ್ಸವ ನಾಳೆ (ಡಿ.7) ದಿನ ಪ್ರಾತಃಕಾಲ 6:57 ರ ವೃಶ್ಚಿಕಲಗ್ನದ ಸುಮುಹೂರ್ತದಲ್ಲಿ ನಡೆಯಲಿದೆ.ಪ್ರಾತಃಕಾಲ 6.57 ಕ್ಕೆ ದೇವರು ರಥಾರೂಡರಾಗಿ ವೈಭವದ ಬ್ರಹ್ಮರಥೋತ್ಸವ ಜರಗಲಿದೆ, ಬ್ರಹ್ಮರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಮತ್ತು ಪಂಚಮಿ ರಥದಲ್ಲಿ ಶ್ರೀ ಉಮಾಮಹೇಶ್ವರ ದೇವರು ಆರೂಡರಾಗಿ ರಥೋತ್ಸವ ನಡೆಯಲಿದೆ.

ನಾಳೆ ಕುಕ್ಕೆ ದೇವಳದಲ್ಲಿ ಬ್ರಹ್ಮ ರಥೋತ್ಸವ Read More »

ಡಿ. 6 ಮತ್ತು 7 ರಂದು ಮದ್ಯ ಮಾರಾಟ ನಿಷೇಧ..!

ಕುಕ್ಕೆ ಚಂಪಾ ಷಷ್ಠಿ ಹಿನ್ನೆಲೆಯಲ್ಲಿ ಡಿ. 6 ಮತ್ತು 7 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ದ. ಕ. ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವವು ನಡೆಯುತ್ತಿದ್ದು, ಡಿಸೆಂಬರ್ 6ರಂದು ಪಂಚಮಿ ರಥೋತ್ಸವ ಹಾಗೂ ಡಿಸೆಂಬರ್ 7ರಂದು ಚಂಪಾಷಷ್ಠಿ ಮಹಾರತೋತ್ಸವವು ನಡೆಯಲಿದೆ.ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಸೆಂಬರ್ 6 ರ ಬೆಳಿಗ್ಗೆ 6

ಡಿ. 6 ಮತ್ತು 7 ರಂದು ಮದ್ಯ ಮಾರಾಟ ನಿಷೇಧ..! Read More »

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು

ಡಿ 5 ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರಿದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರು ಸಂಕಷ್ಟಕ್ಕೆ ಬಿದ್ದಿದ್ದಾರೆ.ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಂಗಡಿಯವರು ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದಿದ್ದಾರೆ. ಇಂದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಕೆಲ ಅಂಗಡಿಗಳಲ್ಲಿ ನೀರು ನಿಂತಿದೆ. ಸೆಟ್ ಮಾಡಿದ ಆಟಿಕೆಗಳನ್ನು ಮತ್ತೆ ಮುಚ್ಚಿ ಇಡಬೇಕಾದ ಪರಿಸ್ಥಿತಿ ಬಂದಿದೆ. ಕೆಲ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ

ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು Read More »

ಚೆಂಬು : ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ

ಸುಳ್ಯ ತಾಲೂಕಿನ ಸಮೀಪದ ಕೊಡಗಿನ ಚೆಂಬು ಗ್ರಾಮದ ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವವು ಗುರುವಾರ ನಡೆಯಿತು.ಡಿ.2ರಂದು ಬೆಳಿಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಭಂಡಾರಕ್ಕೆ ಹೋಗಿ ಡಿ.3ರಂದು ಭಾಗಮಂಡಲದಿಂದ ಭಂಡಾರ ತಂದು ರಾತ್ರಿ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡಲಾಯಿತು.ಬಳಿಕ ಪ್ರಾತ:ಕಾಲ ನೇಮೋತ್ಸವ ಜರುಗಿತು.ಡಿ.4ರಂದು ಎಡೆಕಡಪು, ಡಿ.5ರಂದು ಪ್ರಾತ:ಕಾಲ ಕಿರಿಯರನೇಮೋತ್ಸವಕ್ಕೆ ಎಣ್ಣೆ ಕೊಟ್ಟು, ಬೆಳಿಗ್ಗೆ ಉಳ್ಳಾಕುಲು ಕುದುರೆಬಂಡಿ ಎಳೆಯಲಾಯಿತು. ಪೂರ್ವಾಹ್ನ ಉಳ್ಳಾಕುಲು ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಚೆಂಬು : ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ Read More »

ಕವಿನುಡಿ ಪ್ರೇರಣಾ ನುಡಿಗಳ ವಿಡಿಯೋ ವಾಚನ ಸ್ಪರ್ಧೆಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಪ್ರಥಮ

ರಾಜ್ಯ ಕರುನಾಡ ಹಣತೆ ಕವಿಬಳಗ ಮತ್ತು ಸಾಂಸ್ಕೃತಿಕ ಕಲಾತಂಡ ರಿ. ಚಿತ್ರದುರ್ಗ ಇವರು ಆಯೋಜಿಸಿದ್ದ ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಯೂಟ್ಯೂಬ್ ಚಾನೆಲ್ ಸ್ಪರ್ಧೆಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ಡಿಸೆಂಬರ್ 8ಕ್ಕೆ ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ 2024- 25ರ ಕಾರ್ಯಕ್ರಮದಲ್ಲಿ ಸನ್ಮಾನ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷರು ಶ್ರೀ ಕನಕ ಪ್ರೀತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿನುಡಿ ಪ್ರೇರಣಾ ನುಡಿಗಳ ವಿಡಿಯೋ ವಾಚನ ಸ್ಪರ್ಧೆಯಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಪ್ರಥಮ Read More »

ಮಂಜುನಾಥ ಭಂಡಾರಿ ನಾಳೆ ಸುಳ್ಯ ಭೇಟಿ

ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರು ಸುಳ್ಯಕ್ಕೆ ಭೇಟಿ ನೀಡಲಿದ್ದು ಅವರ ಉಪಸ್ಥಿತಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಡಿ.04 ರಂದು ನಡೆಯಲಿದೆ.ಅಂದು ಅಪರಾಹ್ನ 3:00 ಗಂಟೆಗೆ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಪಕ್ಷದ ಹಿರಿಯ ಕಿರಿಯ ನಾಯಕರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ಪರವಾಗಿ ಬ್ಲಾಕ್

ಮಂಜುನಾಥ ಭಂಡಾರಿ ನಾಳೆ ಸುಳ್ಯ ಭೇಟಿ Read More »

ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ

ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ (ರಿ) ಚಿತ್ರದುರ್ಗ ಇವರು ಆಯೋಜಿಸಿದ ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ದ್ವಿತೀಯ ಸ್ಥಾನ ಪಡಕೊಂಡಿದ್ದಾರೆ.ವಿಜೇತರಿಗೆ ಡಿಸೆಂಬರ್ 9ಕ್ಕೆ ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಪ್ರಶಸ್ತಿ ನೀಡಲಾಗುವುದು.

ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ Read More »

ಭಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಡಿ.3 ರಂದು ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಪೆ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

error: Content is protected !!
Scroll to Top