ಪ್ರಚಲಿತ

ಗಾಂಜಾ ಸೇವೆನೆ ಮತ್ತು ಮಾರಾಟ ಪ್ರಕರಣ ನಾಲ್ವರ ಬಂಧನ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಯನಗರದಲ್ಲಿ ನಿಷೇಧಿತ ಅಮಲು ಪದಾರ್ಥ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಒರ್ವನನ್ನು ಗಾಂಜಾ ಸೇವೆನೆ ಮಾಡಿದ ಮೂವರನ್ನು ಕರೆತಂದಿದ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಗಾಂಜಾ ಸೇವೆನೆ ಮತ್ತು ಮಾರಾಟ ಪ್ರಕರಣ ನಾಲ್ವರ ಬಂಧನ Read More »

ಡಿ.7ಕ್ಕೆ ಸುಳ್ಯದಲ್ಲಿ ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಶುಭಾರಂಭ

ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಡಿ.7ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್‌. ಬಿಲ್ಡಿಂಗ್ ಇದರ 2 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.ಅಂಗಾರ ಅವರು ನೂತನ ಸಹಕಾರ ಸಂಘ ಆರಂಭದ ಕುರಿತು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದರು.ನೂತನ ಸಹಕಾರ ಸಂಘವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯರುಗಳಾದ ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್

ಡಿ.7ಕ್ಕೆ ಸುಳ್ಯದಲ್ಲಿ ಮಾಜಿ ಸಚಿವ ಎಸ್‌.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಶುಭಾರಂಭ Read More »

ಐವರ್ನಾಡು : 350ನೇ ಸ್ವಸಹಾಯ ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಬೆಳ್ಳಾರೆ ವಲಯದ 350 ನೇ ಸ್ವಸಹಾಯ ಸಂಘವನ್ನು ಐವರ್ನಾಡು ಕಾರ್ಯಕ್ಷೇತ್ರದಲ್ಲಿ ಹೊಸ ಸ್ವಸಹಾಯ ಸಂಘ “ನೇಸರ” ಸಂಘವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಚಂದ್ರಲಿಂಗಂ ಬೆಂಗಮಲೆ ಅವರು ಉದ್ಘಾಟನೆ ಮಾಡಿ ಮಾನ್ಯ ಯೋಜನಾಧಿಕಾರಿ ಅವರು ಸ್ವಸಹಾಯ ಸಂಘದ ನಿಯಮವಳಿಗಳ ಬಗ್ಗೆ ಸಂಕ್ಷಿಪ್ತ ವಾಗಿ ಮಾಹಿತಿ ನೀಡಿ ದಾಖಲಾತಿ ಹಸ್ತಾತಂತರ ಮಾಡಿದರು. ವಲಯ ಅಧ್ಯಕ್ಷ ವೇದಾ ಶೆಟ್ಟಿ ,ವಲಯದ ಮೇಲ್ವಿಚಾರಕರು ವಿಶಾಲ ಕೆ ಸೇವಾಪ್ರತಿನಿಧಿ ರಶ್ಮಿತಾ ಸ್ವಸಹಾಯ ಸಂಘದ

ಐವರ್ನಾಡು : 350ನೇ ಸ್ವಸಹಾಯ ಸಂಘ ಉದ್ಘಾಟನೆ Read More »

ನಾಳೆ ಸಾರ್ವಜನಿಕರ ಭೇಟಿಗೆ ಸಂಸದ ಬ್ರಿಜೇಶ್ ಚೌಟ ಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ ಅವರ ಮಂಗಳೂರು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದಾಗಿದೆ.

ನಾಳೆ ಸಾರ್ವಜನಿಕರ ಭೇಟಿಗೆ ಸಂಸದ ಬ್ರಿಜೇಶ್ ಚೌಟ ಲಭ್ಯ Read More »

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕಾಲಾವಧಿ ಪುದಿಯೊಡ್ಕಲ್ ಕಾರ್ಯಕ್ರಮ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕಾಲಾವಧಿ ಪುದಿಯೊಡ್ಕಲ್ ಕಾರ್ಯಕ್ರಮ ಗುರುವಾರ ನಡೆಯಿತು.ಸಂಜೆ ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಟ್ ಕುಲವನ್ ಸಪರಿವಾರ ದೈವಗಳಿಗೆ ಪುದಿಯೊಡ್ಕಲ್ ನೆರವೇರಿತು.ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ಅನಿಲ್ ಕುಂದ್ಲಾಜೆ ಮತ್ತು ಶ್ರೀ ವಯನಾಟ್ ಕುಲವನ್ ದೈವದ ಪಾತ್ರಿ ಶಿವರಾಮ ಆಡಿಂಜ (ಉದುಮ) ರವರ ನೇತೃತ್ವದಲ್ಲಿ ದರ್ಶನ ಸೇವೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತುಈ ಸಂದರ್ಭದಲ್ಲಿ ಕುಟುಂಬದ ಯಜಮಾನರು, ಕುತ್ತಿಕೋಲು ತಂಬುರಾಟ್ಟಿ ಶ್ರೀ ಭಗವತಿ ಕ್ಷೇತ್ರದ ಸ್ಥಾನಿಕರು ಮತ್ತು ಕುತ್ತಿಕೋಲು

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕಾಲಾವಧಿ ಪುದಿಯೊಡ್ಕಲ್ ಕಾರ್ಯಕ್ರಮ Read More »

ನಾಳೆ ಸುಳ್ಯಕ್ಕೆ ಸಯ್ಯುದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಲ್ ಆಗಮನ

29 ನವೆಂಬರ್ 2024 ಶುಕ್ರವಾರದಂದು ಲೋಕಾರ್ಪಣೆಗೊಳ್ಳಲಿರುವ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಲ್ ಆಗಮಿಸಲಿದ್ದಾರೆ. ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಸಮಾರೋಪ ಸಮ್ಮೇಳನ ಸಂಜೆ 6:00 ಗಂಟೆಗೆ ಪ್ರಾರಂಭಗೊಳ್ಳಲಿದ್ದು ಪ್ರಸ್ತುತ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಜಿಫ್ರಿ ತಂಙಲ್ ಉದ್ಘಾಟನೆಗೈಯಲಿದ್ದಾರೆ.ಅಲ್ಲದೇ ಹಲವಾರು ಉಲಮಾ ಉಮಾರಾ ನಾಯಕರು, ಧಾರ್ಮಿಕ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ.

ನಾಳೆ ಸುಳ್ಯಕ್ಕೆ ಸಯ್ಯುದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಲ್ ಆಗಮನ Read More »

ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ತಿಂದರೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಗೊತ್ತಾ?

ನೆಲ್ಲಿಕಾಯಿಯಲ್ಲಿ ಸಾಕಾಷ್ಟು ಪ್ರಮಾಣದ ವಿಟಮಿನ್ ಇದೆ.ನೆಲ್ಲಿಕಾಯಿ ವಿಟಮಿನ್ ಸಿ ಪ್ರಮಾಣ ಹೊಂದಿದೆ.ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜೊತೆಗೆ ಸ್ವಲ್ಪ ಬೆಲ್ಲ ಸೇವನೆ ಮಾಡುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಾರಿನ ಅಂಶ ಹೆಚ್ಚಾಗಿರುವ ನೆಲ್ಲಿಕಾಯಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಪ್ರತಿದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವಿಸುವುದರಿಂದ ಚರ್ಮದ ಆರೋಗ್ಯ ವೃದ್ಧಿಸುತ್ತದೆ.

ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ತಿಂದರೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಗಳಿವೆ ಗೊತ್ತಾ? Read More »

ಪಿ.ಯು.ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ೦ದ ವರದಿಯಾಗಿದೆ.ಕೋಡಿ ನಿವಾಸಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.ಮೃತಪಟ್ಟ ವಿದ್ಯಾರ್ಥಿನಿ ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಯಾವುದೋ ಕಾರಣಕ್ಕೆ ವಿಷ ಸೇವಿಸಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪಿ.ಯು.ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ Read More »

ಸಂಪಾಜೆ : ಸಂವಿಧಾನ ದಿನ ಆಚರಣೆ

ಸಂಪಾಜೆ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು‌. ಸಂವಿದಾನವನ್ನು ಅಂಗೀಕರಿಸಿದ 75 ನೇ ವರ್ಷವನ್ನು ಸಂವಿಧಾನದ ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಉಪಾಧ್ಯಕ್ಷರಾದ ಎಸ್. ಕೆ ಹನೀಫ್ ಪಂಚಾಯತ ಅಬಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಅಬೂಬಕ್ಕರ್.ಎಂ. ಸಿ. ಗ್ರಂಥಾಲಯ ಮೇಲ್ವಿಚಾರಕಿ ನಸೀಮಾ ಸವೇರಪುರ ಪ್ರೌಡ ಶಾಲೆ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು. ನಸೀಮಾ

ಸಂಪಾಜೆ : ಸಂವಿಧಾನ ದಿನ ಆಚರಣೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವಕ್ಕೆ ಚಾಲನೆ

ದ.ಕ ಜಿಲ್ಲೆಯ ಪ್ರಸಿದ್ದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು (ನ.27) ಕೊಪ್ಪರಿಗೆ ಏರುವುದರೊಂದಿಗೆ ಷಷ್ಠಿ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ.ಇಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವನಡೆಯಲಿದೆ. ನ.30- ಲಕ್ಷದೀಪೋತ್ಸವ,ಡಿ.01- ಶೇಷವಾಹನೋತ್ಸವ,ಡಿ.02- ಅಶ್ವವಾಹನೋತ್ಸವ, ಡಿ.03- ಮಯೂರ ವಾಹನೋತ್ಸವ, ಡಿ.04- ಶೇಷವಾಹನೋತ್ಸವ,, ಡಿ.05- ಹೂವಿನ ತೇರಿನ ಉತ್ಸವ, ಡಿ.06- ಪಂಚಮಿ ರಥೋತ್ಸವ,, ಡಿ.07- ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ,ಡಿ.08- ರಂದು ಅವಭ್ರತೋತ್ಸವ, ನೌಕಾವಿಹಾರ, ನಡೆದು ಡಿ.12- ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವಕ್ಕೆ ಚಾಲನೆ Read More »

error: Content is protected !!
Scroll to Top