ಪ್ರಚಲಿತ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ನೇಮಕ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ‌ರ್ ಆದೇಶಿಸಿದ್ದಾರೆ. ಕಳೆದ ವರ್ಷವೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬೊಳ್ಳೂರು ಅವರ ಅಯ್ಕೆಯಾಗಿದ್ದರೂ ಪಕ್ಷದೊಳಗಿನ ಭಿನ್ನಮತದಿಂದ ನೇಮಕಕ್ಕೆ ತಡೆಯಾಗಿತ್ತು. ಫೆ.16 ರಂದು ಪದಗ್ರಹಣ ನಡೆಯಲಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾಕಿರಣ ಮೂಡಿದೆ.ರಾಧಾಕೃಷ್ಣ ಬೊಳ್ಳೂರು ಅವರು ಸುಳ್ಯ ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾಗಿ, ಕೆಡಿಪಿ ಮಾಜಿ ಸದಸ್ಯರಾಗಿ, ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ 4 ಬಾರಿ ಆಧ್ಯಕ್ಷರಾಗಿ, ಎಪಿಎಂಸಿ […]

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ನೇಮಕ Read More »

ಅರಂತೋಡು : ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ ಗಳ ಉದ್ಘಾಟನೆ

ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (Record Room)ಗಳ ಉದ್ಘಾಟನೆ ಕಾರ್ಯಕ್ರಮ ಫೆ.12ರಂದು ನಡೆಯಿತು.ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (Record Room)ಗಳ ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರುಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಒಟ್ಟಾಗಿ ಕೆಲಸ ಮಾಡುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ.ಗ್ರಾಮ ಪಂಚಾಯಿತಿಯಲ್ಲಿ ಕಲಿಕಾ ಕೇಂದ್ರ, ಗ್ರಂಥಾಲಯ ಮತ್ತು ಜಿಮ್‌ನಂತಹ ಸೌಲಭ್ಯಗಳನ್ನು

ಅರಂತೋಡು : ಜಲ್ ಅರ್ಪಣ್ ದಿವಸ್ ಆಚರಣೆ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ ಗಳ ಉದ್ಘಾಟನೆ Read More »

ಪೆರ್ನಾಜೆ : ಕಾಡಾನೆ ದಾಳಿಯಿಂದ ರೈತರ ಅಪಾರ ಬೆಳೆ ನಾಶ

ಪೆ.12 ರಂದು ಮತ್ತೆ ಕುಮಾರ್ ಪೆರ್ನಾಜೆ ಯವರ ಕೆರೆಯಲ್ಲಿ ಈಜಾಡಿದ ಗಜರಾಜ ಒಂದು ಅಡಿಕೆ ಮರ ಈಚಲ ಮರ ತಿಂದು ತೇಗಿ ತದನಂತರ ಸಮೀಪದ ರಾಘವೇಂದ್ರ ಭಟ್ರ ತೋಟಕ್ಕೆ ನುಗ್ಗಿ ಹತ್ತಕ್ಕೂ ಹೆಚ್ಚು ಬಾಳೆಯನ್ನು ದ್ವಂಸ ಮಾಡಿ ಬಂದ ದಾರಿಯಲ್ಲೇ ಹಿಂತಿರುಗಿ ಮುಗೇರು ಗುಡ್ಡಡ್ಕ ಆನೆಗುಂಡಿ ಕಡೆ ತೆರಳಿದೆ. ಅರಣ್ಯ ಇಲಾಖೆಯವರು ಸೈರನ್ ಮೊಳಗಿಸಿದರು ಆನೆಗಳು ದಾಂದಲೆ ಮಾಡಿ ಲಕ್ಷಾಂತರ ರೂ ಸರಕಾರ ಖರ್ಚು ಮಾಡಿ ಸೋಲಾರ್ ಬೇಲಿ ಅಳವಡಿಸಿದರೂ ಅದರ ನಿರ್ವಹಣ ಇಲ್ಲದೆ ಊಟಕ್ಕೆ ಇಲ್ಲದ

ಪೆರ್ನಾಜೆ : ಕಾಡಾನೆ ದಾಳಿಯಿಂದ ರೈತರ ಅಪಾರ ಬೆಳೆ ನಾಶ Read More »

ಮನೆಮದ್ದು

ತೆಂಗಿನ ತುರಿಯನ್ನು ಎಳನೀ-ರಿನೊಂದಿಗೆ ರುಬ್ಬಿ ಅದಕ್ಕೆ ಕಲ್ಲುಸಕ್ಕರೆ, ಏಲಕ್ಕಿ ಸೇರಿಸಿ ದಿನಕ್ಕೆ ಒಂದು ಬಾರಿ ಸೇವಿಸಿದರೆ ಎದೆನೋವು, ಹೊಟ್ಟೆ ಹುಣ್ಣು ಗುಣವಾಗುವುದು ಅಗಸೆ ಸೊಪ್ಪಿನ ಪಲ್ಯ ಮಾಡಿಕೊಂಡು ತಿಂದರೆ ಮೂಳೆಗಳ ಬೆಳವಣಿಗೆ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಕಣ್ಣುಗಳ ಆರೋಗ್ಯದಲ್ಲಿ ರಕ್ಷಣೆ ನೀಡುತ್ತದೆ. ಸಂಧಿವಾತದಿಂದ ಊದಿಕೊಂಡಿರುವ ಭಾಗಕ್ಕೆ ಉಪ್ಪಿನ ಕಾವು ಕೊಟ್ಟರೆ ನೋವು ಕಡಿಮೆಯಾಗಿ, ಊತ ಇಳಿಯುತ್ತದೆ. ಅಲೋವೆರಾ ರಸಕ್ಕೆ ಅರಿಶಿನ ಹುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ.

ಮನೆಮದ್ದು Read More »

ಸುಳ್ಯ : ಸಂಭ್ರಮ ಸಡಗರದಿಂದ ನಡೆದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವರ್ಷದ ವಾರ್ಷಿಕೋತ್ಸವ “ಉತ್ಕರ್ಷ್ 2026

ಸುಳ್ಯದಲ್ಲಿರುವ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026” ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಅವರು ಭಾಗವಹಿಸಿ ಶಾಲಾ ಪೋಷಕರಿಗೆ ಉತ್ತಮವಾದ ಸಂದೇಶವನ್ನು ನೀಡಿದರು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು ಗೌರವಾನ್ವಿತ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ, ವೆಂಕಟರಮಣ ಸಹಕಾರಿ ಸಂಘ ಸುಳ್ಯದ ಸಿಇಒ ಶ್ರೀ ಕೆ.ಟಿ. ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಶ್ರೀ ಶುಭಕರ

ಸುಳ್ಯ : ಸಂಭ್ರಮ ಸಡಗರದಿಂದ ನಡೆದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವರ್ಷದ ವಾರ್ಷಿಕೋತ್ಸವ “ಉತ್ಕರ್ಷ್ 2026 Read More »

ಕಾರ್ಮಿಕ ಸಂಹಿತೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದ ಖಂಡಿಸಿ ಕಾರ್ಮಿಕ, ರೈತ ಸಂಘಟನೆಗಳಿಂದ ನಾಳೆ ಭಾರತ್‌ ಬಂದ್‌ಗೆ ಕರೆ

ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳು ಭಾರತದಾದ್ಯಂತ ಫೆ.12ರಂದು ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಭಟಿಸಿ ಈ ಬಂದ್‌ ನಡೆಯುತ್ತಿದೆ. ಹೊಸ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಪ್ರತಿಭಟನಾ ಒಕ್ಕೂಟಗಳು ಹೇಳಿದೆ. ಪ್ರಮುಖ ಬ್ಯಾಂಕಿಂಗ್ ಒಕ್ಕೂಟಗಳು ಬಂದ್‌ಗೆ ಬೆಂಬಲ ನೀಡಿದ್ದು, ಸಾರ್ವಜನಿಕ ವಲಯದ ಬ್ಯಾಂಕ್ ಸೇವೆಗಳ ಮೇಲೆ ಬಂದ್‌ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಾರ್ಮಿಕ ಸಂಹಿತೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದ ಖಂಡಿಸಿ ಕಾರ್ಮಿಕ, ರೈತ ಸಂಘಟನೆಗಳಿಂದ ನಾಳೆ ಭಾರತ್‌ ಬಂದ್‌ಗೆ ಕರೆ Read More »

ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಸುಳ್ಯ ಇದರ ವತಿಯಿಂದ ಸುಳ್ಯ ಭಾಗದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯ ವ್ಯವಸ್ಥೆಗಳ ಮತ್ತು ಬೇಡಿಕೆಗಳ ಬಗ್ಗೆ ಗಮನಿಸಲಾಯಿತು.ಹಾಗೂ ಹೊಸ ಕಟ್ಟಡದ ಬೇಡಿಕೆಯನ್ನು ಮುಂದಿಟ್ಟಿರುವ ಕಾರಣ ಮಾನ್ಯ ಶಾಸಕರ ಜೊತೆ ಮತ್ತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವೆವು ಎಂಬ ಭರವಸೆ ನೀಡಲಾಯಿತು.ಈ ಸಂಧರ್ಭ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ, ಪ್ರಧಾನ ಕಾರ್ಯದರ್ಶಿ ಶಶಿಕಲಾ

ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ Read More »

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ, ಸವಲತ್ತುಗಳ ವಿತರಣೆ

ಗ್ರಾಮಗಳ ಅಭಿವೃದ್ಧಿ ಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿ ಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಹೇಳಿದರುಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ರವರ ವಿಶೇಷ ಮುತುವರ್ಜಿ ಯಿಂದ ಮುಖ್ಯ ಮಂತ್ರಿಯವರ ವಿಶೇಷ ಅನುದಾನ ದಲ್ಲಿ ನಿರ್ಮಿಸಿದ ಸರ್ವ ಋ ತು ಕಾಂಕ್ರೀಟ್ ರಸ್ತೆ

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ, ಸವಲತ್ತುಗಳ ವಿತರಣೆ Read More »

ಕರ್ನಾಟಕದಲ್ಲಿ ಮೂರು ಸಾವಿರದ ಆರುನೂರ ಹದಿನೇಳು ಸರಕಾರಿ ಶಾಲೆಗಳಿಗೆ ಬೀಗ

ಕರ್ನಾಟದಲ್ಲಿ 2021 ರಿಂದ 2026 ರ ವರೆಗೆ ನಾಲ್ಕು ವರ್ಷಗಳಲ್ಲಿ ಒಟ್ಟು 3,617 ಸರ್ಕಾರಿ ಶಾಲೆಗಳು ಮುಚ್ಚಿವೆ.ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯಸಭೆಯಲ್ಲಿ ಮಂಡಿಸಿದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 20-21 ರಿಂದ 24-25 ರ ಅವಧಿಯಲ್ಲಿ 947 ಮುಚ್ಚಿದ್ದವು. ಶಾಲಾ ಶಿಕ್ಷಣ ಇಲಾಖೆಯು ಅಕ್ಟೋಬರ್ 15-2025 ರ ಆದೇಶದ ಪ್ರಕಾರ 2025-26 ನೇ ಸಾಲಿನಲ್ಲಿ 2,670 ಶಾಲೆಗಳು ಮುಚ್ಚಿವೆ. ಎಲ್ಲವೂ ಸೇರಿ ಒಟ್ಟು 3.617 ಶಾಲೆಗಳಿಗೆ ಬೀಗ ಹಾಕಲಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ದಾಖಲೆಯು 47.1 ಲಕ್ಷ

ಕರ್ನಾಟಕದಲ್ಲಿ ಮೂರು ಸಾವಿರದ ಆರುನೂರ ಹದಿನೇಳು ಸರಕಾರಿ ಶಾಲೆಗಳಿಗೆ ಬೀಗ Read More »

ಪುತ್ತೂರು ಪೇಟೆಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷ !

ಪುತ್ತೂರು ಪೇಟೆಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಿಸಿದ ಘಟನೆ ನಡೆದಿದೆ. ಪುತ್ತೂರು ಬ್ಲಡ್ ಬ್ಯಾಂಕ್ ಬಳಿ ಮುಳ್ಳುಹಂದಿ ಕಾಣಿಸಿಕೊಂಡಿದ್ದು, ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿತ್ತು ಎನ್ನಲಾಗಿದೆ. ಸ್ಥಳಕ್ಕೆ ಸ್ನೇಕ್ ತೇಜಸ್‌ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಮುಳ್ಳುಹಂದಿಯ ರಕ್ಷಣೆ ಮಾಡಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ಅವರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು.

ಪುತ್ತೂರು ಪೇಟೆಯಲ್ಲಿ ಮುಳ್ಳುಹಂದಿ ಪ್ರತ್ಯಕ್ಷ ! Read More »

error: Content is protected !!
Scroll to Top