ಟ್ಯಾಂಕರ್ ಅಪಘಾತ: ಓರ್ವ ಸಾವು
ಸುಳ್ಯ ಸಮೀಪದ ಕಲ್ಲಪಳ್ಳಿ ಪಾಣತ್ತೂರು ರಸ್ತೆ ಮಧ್ಯೆ ಪೆರಿಯಾರಂ ನಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಟ್ಯಾಂಕರ್ ಅಫಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಗಂಭೀರ ಗಾಯಗೊಂಡಿದ್ದು ಚಾಲಕ ಮೃತಪಟ್ಟ ಘಟನೆ ವರದಿಯಾಗಿದೆ.ಅವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡ ಲಾರಿ ಚಾಲಕ ಹಾಸನ ಮೂಲದ ಪ್ರವೀಣ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ಧಾರೆ ಎಂದು ತಿಳಿದು ಬಂದಿದೆ. ಟ್ಯಾಂಕರ್ ನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದು ಆ ವ್ಯಕ್ತಿಯ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಟ್ಯಾಂಕರ್ ಅಪಘಾತ: ಓರ್ವ ಸಾವು Read More »