Uncategorized

ರೈಲಿನ ಗಾಳಿಗೆ ಸಿಲುಕಿ 5 ವರ್ಷದ ಬಾಲಕಿ ದುರ್ಮರಣ!

ಕಾಸರಗೋಡುದಲ್ಲಿ ನೆನ್ನೆ ದುರ್ಘಟನೆಯೊಂದು ನಡೆದಿದೆ.ಮೊಗ್ರಾಲ್ ನಾಂಗಿಯಲ್ಲಿ ರೈಲು ಹಳಿಯ ಸಮೀಪ ನಡೆದುಹೋಗುತ್ತಿದ್ದ ವೇಳೆ ಮಂಗಳೂರಿನಿಂದ ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನ ಬಲವಾದ ಗಾಳಿಗೆ ಸಿಲುಕಿ 5 ವರ್ಷದ ಮರಿಯಂ ನವಾಲ್ ತಾಹೀರ್ ಹಾಗೂ ಅಜ್ಜಿ ನಫೀಸ ಬಿದ್ದು ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಅಜ್ಜಿ ನಫೀಸ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲಿನ ಗಾಳಿಗೆ ಸಿಲುಕಿ 5 ವರ್ಷದ ಬಾಲಕಿ ದುರ್ಮರಣ! Read More »

ಶೀಘ್ರವೇ ಮದ್ಯದ ದರ ಏರಿಕೆ !

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಐದನೇ ಬಾರಿಗೆ ಮದ್ಯದ ದರ ಏರಿಕೆಯಾಗುವ ಸಾಧ್ಯತೆಯಿದೆ. ಮೇ 1 ರಿಂದ ಜಾರಿಗೆ ಬರಲಿರುವ ಹೊಸ ಅಬಕಾರಿ ನೀತಿಯಂತೆ, ಮದ್ಯದಲ್ಲಿರುವ ಆಲೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ. 20ರಷ್ಟು ಏರಿಕೆಯಾಗಲಿದ್ದು, ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ. ವಿಸ್ಕಿ, ರಮ್, ಬ್ರಾಂಡಿ, ಜಿನ್ ಬೆಲೆಗಳು ಕ್ವಾರ್ಟ‌್ರಗೆ 15-25 ರೂ. ಹೆಚ್ಚಾಗುವ ಅಂದಾಜಿದೆ.

ಶೀಘ್ರವೇ ಮದ್ಯದ ದರ ಏರಿಕೆ ! Read More »

ನಾಳೆ ಸುಳ್ಯದ ಹಲವು ಭಾಗಗಳಲ್ಲಿ ಪವರ್ ಕಟ್

ಏ. 25ರಂದು ಮೆಸ್ಕಾಂ ಸುಳ್ಯ ಉಪವಿಭಾಗದ 33/11 ಕೆ.ವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೋಡಿಕಾನ, ಕೊಲ್ಟಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ತುರ್ತು ನಿರ್ವಹಣಾ ಕೆಲಸದ ಕಾರಣ ಬೆಳಿಗ್ಗೆ 10:00 ರಿಂದ ಸಂಜೆ 6:00ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

ನಾಳೆ ಸುಳ್ಯದ ಹಲವು ಭಾಗಗಳಲ್ಲಿ ಪವರ್ ಕಟ್ Read More »

ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ

ಬೆಳ್ಳಾರೆ ಕೆ.ಪಿ.ಎಸ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಎದುರಿಸಿರುವ 148 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದಾರೆ.ವಿವಿಧ ಶ್ರೇಣಿಯ ವಿವರ :-4 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ.ವಿಶಿಷ್ಠ ಶ್ರೇಣಿಯಲ್ಲಿ 33 ಮಂದಿ,ಪ್ರಥಮ ದರ್ಜೆಯಲ್ಲಿ 98 ಮಂದಿ’ದ್ವೀತಿಯ ದರ್ಜೆಯಲ್ಲಿ 13 ಮಂದಿ ಉತ್ತೀರ್ಣರಾಗಿದ್ದಾರೆ.

ಕೆ.ಪಿ.ಎಸ್ ಬೆಳ್ಳಾರೆಗೆ ಶೇ.100 ಫಲಿತಾಂಶ Read More »

ಸುಳ್ಯ ಗಾಂಧಿನಗರ ಕೆ. ಪಿ. ಎಸ್.ಗೆ ಶೇ 100 ಫಲಿತಾಂಶ

ಸುಳ್ಯ ಗಾಂಧಿನಗರ ಕೆ. ಪಿ. ಎಸ್. ಶೇ 100 ಫಲಿತಾಂಶ ವನ್ನು ದಾಖಲಿಸಿದೆ.ಪರೀಕ್ಷೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸುಳ್ಯ ಗಾಂಧಿನಗರ ಕೆ. ಪಿ. ಎಸ್.ಗೆ ಶೇ 100 ಫಲಿತಾಂಶ Read More »

ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ

ಸುಳ್ಯದ ಪೈಚಾರಿನಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ರಾವ್ ವಹಿಸಿದ್ದರು.ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಹಿರಿಯ ಸಹಕಾರಿ ಜಾಕೆ ಮಾಧವ ಗೌಡ, ಮಾದಿಗ ದಂಡೋರ ಅಖಿಲ ಭಾರತ ರಾಜ್ಯ ಸಂಸ್ಥಾಪಕಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾದಿಗ ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಇಂಜಿನಿಯರ್ ದೇವಿಪ್ರಸಾದ್‌ , ಪ್ರಧಾನ ಕಾರ್ಯದರ್ಶಿ ಯಶವಂತ್

ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ Read More »

ಕಲ್ಲುಗುಂಡಿ : ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ವಸಂತ ಗುಡ್ಡೆಮನೆ ನಿಧನ

ಸಂಪಾಜೆ ಗ್ರಾಮದ ಕಲ್ಲುಗುಂಡಿ ಚಟ್ಟೆಕಲ್ಲು ನಿವಾಸಿ ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ವಸಂತ ಗುಡ್ಡೆಮನೆ ರವರು ಏಪ್ರಿಲ್ 22ರಂದು ಸಂಜೆ ನಿಧನರಾದರು.ಮೃತರು ಪತ್ನಿ ನಿವೃತ್ತ ಶಿಕ್ಷಕಿ ರಾಮಕ್ಕ ಹಾಗೂ ಕುಟುಂಬದವರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಲ್ಲುಗುಂಡಿ : ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ವಸಂತ ಗುಡ್ಡೆಮನೆ ನಿಧನ Read More »

ಚೊಕ್ಕಾಡಿ : ಯಶಸ್ವಿಯಾಗಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ

ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ, ಗರುಡ ಯುವಕ ಮಂಡಲ (ರಿ.) ಚೊಕ್ಕಾಡಿ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಚೊಕ್ಕಾಡಿ ಇವರ ಆಶ್ರಯದಲ್ಲಿ ಐದು ದಿನಗಳ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜನಗದ್ದೆ ಇಲ್ಲಿ ಯಶಸ್ವಿಯಾಗಿ ನಡೆಯಿತು.ಶಿಬಿರವು ಏಪ್ರಿಲ್ ೧೧ರಂದು ಶ್ರೀ ಬಾಲಕೃಷ್ಣ ಬೊಳ್ಳೂರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪವಾಣಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು. ಶಿಬಿರದ ಅವಧಿಯಲ್ಲಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ವ್ಯಕ್ತಿತ್ವ ವಿಕಸನ, ಸಂವಹನ

ಚೊಕ್ಕಾಡಿ : ಯಶಸ್ವಿಯಾಗಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ Read More »

ಕುಲ್ಚಾರ್ ಹೊಳೆಗೆ ತಾಜ್ಯ ಎಸೆದವರಿಗೆಆರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ರೂ 5000 ದಂಡ.

ದಿನಾಂಕ 21.4.2026ನೇ ಮಂಗಳವಾರದಂದು ವಾಹನ ಸಂಖ್ಯೆ KA05 MS 6793ವಾಹನದಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಗಳು ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲ್ಚಾರ್ ಸೇತುವೆಯ ಮೇಲಿನಿಂದ ಬಲ್ನಾಡ್ ಹೊಳೆಗೆ ತ್ಯಾಜ್ಯ ಎಸೆಯುತ್ತಿದ್ದನ್ನು ಗಮಸಿದ ಕಲ್ಲುಗುಂಡಿ ರಿಕ್ಷಾ ಚಾಲಕರಾದ ಸದಾನಂದ ರೈ ಆರಂತೋಡಿನ ರಿಕ್ಷಾ ಚಾಲಕರಾದ ಹರಿಶ್ಚಂದ್ರ ನೆಕ್ಕಿಲ ಮತ್ತು ಆದರ್ಶ ದೇರಾಜೆಯವರು ತಡೆದು ನಿಲ್ಲಿಸಿ ಆರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್. ಎಂ. ಆರ್. ರವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರೂ 5000ದಂಡ ವಿಧಿಸಿದರು.ಮೊದಲು

ಕುಲ್ಚಾರ್ ಹೊಳೆಗೆ ತಾಜ್ಯ ಎಸೆದವರಿಗೆಆರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ರೂ 5000 ದಂಡ. Read More »

ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಶ್ರೀ ದೇವಿ ಭಗವತಿ ಮಂದಿರದ 28ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ

ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಶ್ರೀ ದೇವಿ ಭಗವತಿ ಮಂದಿರದ 28ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಏ.19ರಂದು ನಡೆಯಿತುಬೆಳಗ್ಗೆ ಗಂಟೆ 9.00ಕ್ಕೆ ಗಣಪತಿ ಪೂಜೆ ಬೆಳಗ್ಗೆ ಗಂಟೆ 10.00ಕ್ಕೆ : ಶ್ರೀ ಸತ್ಯನಾರಾಯಣ ಪೂಜೆಬೆಳಗ್ಗೆ ಗಂಟೆ 11.00ಕ್ಕೆ : ಭಜನಾ ಸತ್ಸಂಗ ನಡೆಯಿತು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿದ ಸದಸ್ಯರಾದ ತೇಜ ಕುಮಾರ್ ಬಡ್ಡಡ್ಕ ಅಧ್ಯಕ್ಷತೆ ವಹಿಸಿದ್ದರು.ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 235ನೇ ಕೃತಿ ಮನಸ್ಸಿನಲ್ಲಿದ್ದಾನೆ

ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಶ್ರೀ ದೇವಿ ಭಗವತಿ ಮಂದಿರದ 28ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ Read More »

error: Content is protected !!
Scroll to Top