ಆಟೋ ರಿಕ್ಷಾ ಪಲ್ಟಿ ಚಾಲಕ ಸಾವು
ವಿಟ್ಲ: ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪ ನಡೆದಿದೆ. ಮೃತ ಆಟೋ ಚಾಲಕನು ಪಂಜ ನಿವಾಸಿ ಸುದರ್ಶನ್ (35) ಎಂದು ತಿಳಿದು ಬಂದಿದೆ. ಸುದರ್ಶನ್ ಹಾಗೂ ಇನ್ನೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡು ರಿಕ್ಷಾ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಆಟೋ ರಿಕ್ಷಾದಲ್ಲಿದ್ದ ಇನ್ನೋರ್ವ ವ್ಯಕ್ತಿಗೆ ಪ್ರಾಣಾಪಯದಿಂದ ಪಾರಾಗಿದ್ದಾನೆ. ಎಂದು ತಿಳಿದುಬಂದಿದೆ.ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ
ಆಟೋ ರಿಕ್ಷಾ ಪಲ್ಟಿ ಚಾಲಕ ಸಾವು Read More »