Uncategorized

ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ.

ಸುಳ್ಯ ಶಿವ ಕೃಪಾ ಸಭಾಭವನದಲ್ಲಿ ಅ. 13ರಂದು ಪ್ರಜಾಧ್ವನಿ ಕರ್ನಾಟಕ ಕೇಂದ್ರೀಯ ಸಮಿತಿ ಸುಳ್ಯ ಇದರ ವಿಶೇಷ ಸಭೆಯು ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.ಸಭೆಯಲ್ಲಿ ಮುಂದಿನ ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ನಿರ್ಣಯಿಸಲಾಯಿತು.ಸಮಿತಿಯ ವಾರ್ಷಿಕೋತ್ಸವವನ್ನು ಅದೇ ದಿನ ಆಚರಣೆ ಮತ್ತು ಪ್ರಜಾಧ್ವನಿ ಕರ್ನಾಟಕ ಹೆಸರಿನಲ್ಲಿ ನೂತನವಾಗಿ ಯೂಟ್ಯೂಬ್ ಒಂದನ್ನು ಉದ್ಘಾಟನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅಲ್ಲದೇ ಭಾರತದ ಸಂವಿಧಾನದ ವಿಚಾರವಾಗಿ ದೇಶದ ಸರ್ವ ಪ್ರಜೆಗಳು ದೇಶದ ಸಂವಿಧಾನವನ್ನು ರಾಷ್ಟ್ರೀಯ […]

ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ. Read More »

ಕೊಯನಾಡು : ಕಾಡಾನೆ ತೋಟಕ್ಕೆ ದಾಳಿ

ಕೊಯನಾಡು ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಸ್ಥಳೀಯರ ತೋಟಗಳಿಗೆ ನುಗ್ಗಿಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ.ಮಂಗಳವಾರ ರಾತ್ರಿ ಹಿಂಡಾನೆಗಳು ಇಲ್ಲಿಯ ಕೇನಾಜೆ ಉಲ್ಲಾಸ ಮತ್ತು ಇತರ ತೋಟಕ್ಕೆ ನುಗ್ಗಿ ಕೃಷಿಯನ್ನು‌ ಧ್ವಂಸ ಗೊಳಿಸಿದೆ. ಈ ಭಾಗದಲ್ಲಿ ನಿರಂತರ ಆನೆದಾಳಿಯಿಂದ ಕೃಷಿಕರು ಕಂಗೆಟ್ಟಿದ್ದಾರೆ.

ಕೊಯನಾಡು : ಕಾಡಾನೆ ತೋಟಕ್ಕೆ ದಾಳಿ Read More »

ಶಿರೋಮಣಿ ಅಕಾಲಿ ದಳದ ಮಾಜಿ ನಾಯಕ ಜಗದೀಪ್ ಸಿಂಗ್ ಚೀಮಾ ಬಿಜೆಪಿ ಸೇರ್ಪಡೆ

ಚಂಡಿಗಡ್‌ನ ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಮಾಜಿ ನಾಯಕ ಜಗದೀಪ್ ಸಿಂಗ್ ಚೀಮಾ ಅವರು ಮಂಗಳವಾರ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಚೀಮಾ ಪಂಜಾಬ್‌ನ ಮಾಜಿ ಸಚಿವ ರಣಧೀರ್ ಸಿಂಗ್ ಚೀಮಾ ಅವರ ಪುತ್ರ. ಅವರು 2012 ರಲ್ಲಿ ಅಮೋಹ್ ಮತ್ತು 2022 ರಲ್ಲಿ ಫತೇಘರ್ ಸಾಹಿಬ್‌ನಿಂದ ಎಸ್‌ಎಡಿ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಶಿರೋಮಣಿ ಅಕಾಲಿ ದಳದ ಮಾಜಿ ನಾಯಕ ಜಗದೀಪ್ ಸಿಂಗ್ ಚೀಮಾ ಬಿಜೆಪಿ ಸೇರ್ಪಡೆ Read More »

ಮುಂದಿನ ಆರು ತಿಂಗಳ ಒಳಗಾಗಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಧ್ಯತೆ

ಕರ್ನಾಟಕದಲ್ಲಿ ತಾಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ‌ ತಿಂಗಳ ಒಳಗಾಗಿ ನಡೆಯುಲಿದೆ ಎಂದು ಮಾಹಿತಿ ಲಭ್ಯವಾಗಿದೆ.ನಾಲೈದು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೇ ಸೊರಗಿದ್ದ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಬೃಹತ್ ಬೆಂಗಳೂರು ಪಾಲಿಕೆಯ ಐದು ಉಪಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ಮುಂದಿನ ಚುನಾವಣೆಗೆ ಸಜ್ಜಾಗಲು ಸೂಚನೆ ನೀಡಿದ್ದು, ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಸೂಚನೆ ನೀಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದಿನ ಐದರಿಂದ ಆರು ತಿಂಗಳೊಳಗೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ

ಮುಂದಿನ ಆರು ತಿಂಗಳ ಒಳಗಾಗಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಧ್ಯತೆ Read More »

ಅ .15_25 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್

ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅ 15 ರಿಂದ ಅ.25 ರವರೆಗೆ ಪ್ರತೀ ಆಭರಣಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.ಸ್ವರ್ಣಂ ಜ್ಯುವೆಲ್ಸ್ ನ ಪ್ರತೀ ಆಯೋಜನೆಗೂ ಗ್ರಾಹಕರ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ, ಪ್ರತೀ ಚಿನ್ನದ ಆಭರಣಗಳಿಗೆ ಒಂದು ಪವನ್ ಗೆ ರೂ 3000 ರಿಯಾಯಿತಿ ನೀಡಲಾಗುತ್ತಿದೆ. ಹಾಗೂ ಗ್ರಾಹಕರು ಆಯ್ಕೆಯ, ಮನಕ್ಕೊಪ್ಪುವ ಡೈಮೆಂಡ್ ಆಭರಣಗಳು ಕೂಡಾ

ಅ .15_25 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್ Read More »

ಆಡಿಂಜದಿಂದ ಆಲೆಟ್ಟಿವರೆಗಿನ ಹದೆಗೆಟ್ಟ ಲೋಕೋಪಯೋಗಿ ರಸ್ತೆಯನ್ನು ಶ್ರಮದಾನ ಮೂಲಕ ದುರಸ್ಥಿಪಡಿಸಿದ ನಾಗರಿಕರು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಆಡಿಂಜಾದಿಂದ ಆಲೆಟ್ಟಿ ವರೆಗಿನ ಲೋಕೋಪಯೋಗಿ ರಸ್ತೆಯು ತೀವ್ರ ಹದೆಗೆಟ್ಟಿದ್ದು, ಇಲಾಖೆಯಾಗಲಿ, ಜನಪ್ರತಿನಿದಿಗಳಾಗಲಿ ಎಷ್ಟೇ ಮನವಿಮಾಡಿದರೂ ಸ್ಪಂದಿಸದೇ ಇರದಿರುವುದರಿಂದ ಈ ಭಾಗದ ಸಾರ್ವಜನಿಕರು ಮತ್ತು ಸ್ಥಳೀಯ ಯುವಕ ಮಂಡಲಗಳ ಸದಸ್ಯರು ಸೇರಿಕೊಂಡು ಅ. 12ರಂದು ಬೆಳಗ್ಗಿನಿಂದ ಸಂಜೆಯವರೆಗೆ ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಪಡಿಸಿದರು.ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ತುಂಬಿರುವ ರಸ್ತೆಗೆ ರೆಡಿ ವೆಟ್ ಮಿಕ್ಸ್ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದರು.ಈ ರಸ್ತೆಯಲ್ಲಿ ಸಂಚರಿಸುವ ಎಸ್ ವಿ ಕನ್ ಸ್ಟ್ರಕ್ಷನ್ ನ ಪುನೀತ್

ಆಡಿಂಜದಿಂದ ಆಲೆಟ್ಟಿವರೆಗಿನ ಹದೆಗೆಟ್ಟ ಲೋಕೋಪಯೋಗಿ ರಸ್ತೆಯನ್ನು ಶ್ರಮದಾನ ಮೂಲಕ ದುರಸ್ಥಿಪಡಿಸಿದ ನಾಗರಿಕರು Read More »

ತೆಕ್ಕಿಲ್ ಹೆಚ್ ಪಿ ಗ್ಯಾಸ್ ಸಿಬ್ಬಂಧಿ ವರ್ಗದವರಿಂದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಮ್ ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ

ಅರಂತೋಡು ತೆಕ್ಕಿಲ್ ಗ್ಯಾಸ್ ಏಜೆನ್ಸಿಯ ಸಿಬ್ಬಂಧಿ ವರ್ಗದವರಿಂದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಸ್ಥೆಯ ಮಾಲಕರಾದ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಒ. 11 ರಂದು ಸನ್ಮಾನಿಸಲಾಯಿತು. ಸನ್ಮಾನವನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ನೆರವೇರಿಸಿದರು. ತೆಕ್ಕಿಲ್ ಹೆಚ್.ಪಿ.ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಧನುರಾಜ್ ಊರುಪಂಜ, ಬಬಿತ ಅಡ್ಯಡ್ಕ, ಬಿಂದ್ಯಾ ಕಿರ್ಲಾಯ, ರಹೀಮ್ ನಾರ್ಕೋಡು, ಉಮ್ಮರ್ ಬೆಳ್ಳಾರೆ, ಹನೀಫ್ ಮೊಟ್ಟೆಂಗಾರ್ , ಮೊಕ್ಷಿತ್ ನಾಗನ, ಚಂದ್ರಶೇಖರ ಕೊಯನಾಡು, ಖಾದರ್ ಕಡೆಪಾಲ

ತೆಕ್ಕಿಲ್ ಹೆಚ್ ಪಿ ಗ್ಯಾಸ್ ಸಿಬ್ಬಂಧಿ ವರ್ಗದವರಿಂದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಮ್ ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ Read More »

ಮಾರಿಷಸ್ ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಯುವಕ ಜಲಪಾತದ ನೀರಲ್ಲಿ ಮುಳುಗಿ‌ ಸಾವು

ಮಾರಿಷಸ್ ನಲ್ಲಿ ವಿದ್ಯಾರ್ಜನೆ ನಡೆಸುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಲ್ಲುಜಿ, ಕಲ್ಲಾಜೆ ನಿವಾಸಿ ನಂದನ್ ಭಟ್ ಎಂಬ ಯುವಕ ಅಲ್ಲಿ ಜಲಪಾತ ವೀಕ್ಷಣೆಯ ವೇಳೆ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ.ಮೃತದೇಹ ವನ್ನು ಊರಿಗೆ ತರುವ ನಿಟ್ಟಿನಲ್ಲಿ ಸಂಸದರು ಮಧ್ಯ ಪ್ರವೇಶಿಸಿ ಪ್ರಯತ್ನ ನಡೆಸುತ್ತಿದ್ದಾರೆ.ಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬವರ ಪುತ್ರರಾಗಿರುವ ನಂದನ್ ಎಸ್. ಭಟ್ ಅವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಅಧ್ಯಯನ ನಡೆಸುತ್ತಿದ್ದರು. ಭಾನುವಾರ ಜಲಪಾತ ವೀಕ್ಷಣೆಗೆಂದು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು

ಮಾರಿಷಸ್ ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಯುವಕ ಜಲಪಾತದ ನೀರಲ್ಲಿ ಮುಳುಗಿ‌ ಸಾವು Read More »

ಅರಂತೋಡು : ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಂಕೇರಿಯಲ್ಲಿ ಅ.17ಕ್ಕೆ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 17-10-2025 ರ ತುಲಾ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ 7022077809

ಅರಂತೋಡು : ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಂಕೇರಿಯಲ್ಲಿ ಅ.17ಕ್ಕೆ ಅಗೇಲು ಸೇವೆ Read More »

ಸಂಪಾಜೆ : ಮಳೆ ಹಾನಿ ಯೋಜನೆಯಡಿ‌ ಅನುದಾನ ನೀಡಲು ಜಿಲ್ಲಾಧಿಕಾರಿಗೆ ಮನವಿ

ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷ ರಾದ ಟಿ ಎಂ ಶಾಹಿದ್ ತೆಕ್ಕಿಲ್ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹಾಗೂ ಅಪಾರ ಜಿಲ್ಲಾಧಿಕಾರಿ ರಾಜು ತವರನ್ನು ಬೇಟಿಯಾಗಿ ಸಂಪಾಜೆ ಗ್ರಾಮದ ಅಭಿವೃದ್ಧಿಗೆ ಮಳೆ ಹಾನಿ ಯೋಜನೆಯಡಿ ಅನುದಾನ ನೀಡಬೇಕೆಂದು ಮನವಿ ಮಾಡಲಾಯಿತು.ಸಂಪಾಜೆ ಗ್ರಾಮದಲ್ಲಿ ಮರಳಿನ ಕೊರತೆಯಿಂದಾಗಿ ಗ್ರಾಮದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಹಲವು ಕಾಮಗಾರಿಗಳಿಗೆ ತೊಂದರೆಯಾಗುತ್ತಿದೆ

ಸಂಪಾಜೆ : ಮಳೆ ಹಾನಿ ಯೋಜನೆಯಡಿ‌ ಅನುದಾನ ನೀಡಲು ಜಿಲ್ಲಾಧಿಕಾರಿಗೆ ಮನವಿ Read More »

error: Content is protected !!
Scroll to Top