Uncategorized

ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಮೆಸ್ಕಾಂ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸಲು ಆದೇಶ

ಕೆ.ಎಫ್.ಡಿ.ಸಿ ನಿಗಮದ ಸಿಬ್ಬಂದಿಗಳು ಹಾಗೂ ಕಾರ್ಮಿಕರು ವಾಸಿಸುತ್ತಿರುವ ವಸತಿ ಕಾಲೋನಿಗಳು ನಿಗಮದ ಆಸ್ತಿಯಾಗಿದ್ದು , ಮೆಸ್ಕಾಂ ಆದೇಶದನ್ವಯ ಎಲ್ಲಾ ವಿದ್ಯುತ್ ಸಂಪರ್ಕಗಳು ಭದ್ರತಾ ಠೇವಣಿಯನ್ನು ಪಾವತಿಸಬೇಕಿತ್ತು. ಅದೇ ರೀತಿಯಾಗಿ ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಭದ್ರತಾ ಠೇವಣಿಯನ್ನು ಮೆಸ್ಕಾಂ ಸಿಬ್ಬಂದಿಗಳು ಕಾರ್ಮಿಕರ ಬಳಿಯಿಂದಲೇ ವಸೂಲಿ ನಡೆಸುತ್ತಿದ್ದರು ಹಾಗೂ ಭದ್ರತಾ ಠೇವಣಿಯನ್ನು ಪಾವತಿಸಲಾಗದ ವಸತಿ ಗೃಹಗಳ ವಿದ್ಯುತ್ ಸಂಪರ್ಕಗಳನ್ನು ಖಡಿತಗೊಳಿಸುತ್ತಿದ್ದರು. ಈ ಕುರಿತು ಸಮಗ್ರ ಮಾಹಿತಿಯನ್ನು ಕೆ.ಎಫ್.ಡಿ.ಸಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ನಂದೀಶ್ ಅವರು ಸುಳ್ಯಕ್ಕೆ ಭೇಟಿ ನೀಡಿದ್ದ […]

ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಮೆಸ್ಕಾಂ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸಲು ಆದೇಶ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸಾಕ್ಷ್ಯ ಚಿತ್ರ ಬಿಡುಗಡೆ

ದೃಷ್ಟಿ ಮೀಡಿಯಾ ಸಂಸ್ಥೆಯ ನಿರ್ಮಾಣದಲ್ಲಿ ತಯಾರಿಸಿರುವ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕುರಿತಾದ ಶತಮಾನಗಳ ನಂಬಿಕೆ ಎಂಬ ಸಾಕ್ಷ್ಯಚಿತ್ರದ ಬಿಡುಗಡೆ ಸುಳ್ಯದಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್ ಭಾರದ್ವಾಜ್ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ, ತೊಡಿಕಾನ ದೇವಸ್ಥಾನದ ಕುರಿತಾದ ಸಾಕ್ಷ್ಯಚಿತ್ರ ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ತೋರಿಸುವ ಜತೆಗೆ ಕ್ಷೇತ್ರದ ಪರಿಚಯ, ವಿಶೇಷತೆಯನ್ನು ನಮಗೆ ತಿಳಿಸಿದೆ. ಇಂತಹ ಸಾಕ್ಷಚಿತ್ರಗಳು ಸುಳ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡುವಂತಾಗಲಿ ಎಂದರು.ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕಿರಿ ಮಾತನಾಡಿ,

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸಾಕ್ಷ್ಯ ಚಿತ್ರ ಬಿಡುಗಡೆ Read More »

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ಮೂವರು ವಿದ್ಯಾರ್ಥಿಗಳು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಇನ್‌ಸ್ಟೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಗಿರೀಶ್.ಕೆ,( 9ನೇ). ಈತ ಮಂಡೆಕೋಲು ಗ್ರಾಮದ ಕಾಯರ್ತೋಡಿ ಭಾಸ್ಕರ ಮತ್ತು ಸೌಮ್ಯ ದಂಪತಿಗಳ ಪುತ್ರ. ವಂಶಿತಾ, (8ನೇ) ಈಕೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ವಸಂತ ಮತ್ತು ಭವಾನಿ ದಂಪತಿಗಳ ಪುತ್ರಿ. ಜಸ್ಮಿತಾ ಕೆ.(1೦ನೇ) ಈಕೆ ಜಾಲ್ಸೂರು ಗ್ರಾಮದ ಕದಿಕಡ್ಕ ಬೇಬಿ.ಕೆ ಮತ್ತು ಭವಾನಿ ದಂಪತಿಗಳ ಪುತ್ರಿ.

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ Read More »

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಸವಲತ್ತು  ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ತನಗೆ ಪರಿಶಿಷ್ಟ ಜಾತಿಯ (SC) ಮೀಸಲಾತಿ ಮತ್ತು ರಕ್ಷಣೆಗಳು ಸಿಗಬೇಕು ಎಂದು ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಾತಿ ಎನ್ನುವುದು ಧರ್ಮದೊಂದಿಗೆ ಬೆಸೆದುಕೊಂಡಿದ್ದು, ಮತಾಂತರವಾದ ತಕ್ಷಣ ಹಳೆಯ ಜಾತಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಆಂಧ್ರಪ್ರದೇಶದ ಚಿಂತಾಡ ಆನಂದ್ ಪಾಲ್ ಎಂಬುವವರು ದಶಕಗಳಿಂದ ಕ್ರೈಸ್ತ ಧರ್ಮದ ಪಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ತಮ್ಮ ಬಳಿ ಇದ್ದ ‘ಹಿಂದೂ–ಮಾದಿಗ’ ಎಂಬ ಜಾತಿ ಪ್ರಮಾಣಪತ್ರವನ್ನು ಬಳಸಿಕೊಂಡು,

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಸವಲತ್ತು  ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು Read More »

ಕೇನ್ಯ : ಕೆ.ಪಿ.ಎಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಫ್ರೆಂಡ್ಸ್ ಕ್ಲಬ್ ಕೇನ್ಯ ಇದರ ಆಶ್ರಯದಲ್ಲಿ 6 ತಂಡಗಳ 12 ಜನರ ಲೀಗ್ ಮಾದರಿಯ ಕ್ರಿಕೆಟ್‌ ಪಂದ್ಯಾಟ ಕೆ.ಪಿ.ಎಲ್ ಟ್ರೋಫಿ 2026 ಮಾ. 22 ರಂದು ಕೇನ್ಯ ವಿಷ್ಣು ನಗರದ ಮೈದಾನದಲ್ಲಿ ನಡೆಯಿತು.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕೇನ್ಯ ಉದ್ಘಾಟಿಸಿದರು.ಪಂಜ ಶ್ರೀ ಪರಿವಾರ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕ್ಲಬ್ ನ ಹಿರಿಯ

ಕೇನ್ಯ : ಕೆ.ಪಿ.ಎಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ Read More »

ಮಂಡೆಕೋಲು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವವು ಏ.13ರಿಂದ ಏ. 20ರ ತನ‌ನಡೆಯಲಿದ್ದು, ಆ ಪ್ರಯುಕ್ತ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿತು.ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.ಹಸಿರುವಾಣಿ ಸಂಗ್ರಹ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ಆರ್ಥಿಕ ಸಮಿತಿ ಸಂಚಾಲಕ ಕಿಶೋರ್ ಯು.ಎಂ,ಸ್ಥಳೀಯರಾದ ಶಿವಪ್ರಸಾದ್ ಉಗ್ರಾಣಿ ಮನೆ ,ಕೇಶವ ಮೂರ್ತಿ ಹೆಬ್ಬಾರ್, ಅನಂತಕೃಷ್ಣ ಚಾಕೋಟೆಡಿಸಿ

ಮಂಡೆಕೋಲು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ದೊಡ್ಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನ ೪೫ನೇ ವರ್ಷದ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ ಮಾ.21ರಂದು ಮತ್ತು ಮಾ.22ರಂದು ನಡೆಯಿತು.ಮಾ.೨೧ರಂದು ಬೆಳಗ್ಗೆ ಸ್ಥಳ ಶುದ್ದೀಕರಣ ೭ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ, ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ ೧೨ಕ್ಕೆ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿದು, ಬಟ್ಟಲು ಕಾಣಿಕೆ ಹೂವಿನ ಹಾರ

ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ Read More »

ಏ.13ರಿಂದ ಏ.21ರ ತನಕ ಮಕ್ಕಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಬಣ್ಣ 2026

ಸುಳ್ಯ : ರಂಗಮಯೂರಿ ಕಲಾಶಾಲೆಯ ಬಹು ನಿರೀಕ್ಷಿತ ಮಕ್ಕಳ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ-2026’ ಏಪ್ರಿಲ್ 13ನಿಂದ 21 ವರೆಗೆ ಸುಳ್ಯದ ಕಾಯರ್ತೋಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ರಂಗ ಮಯೂರಿ ಕಲಾ ಶಾಲೆಯ ನಿರ್ದೇಶಕರಾದ ಭವಾನಿಶಂಕರ ಅಡ್ತಲೆ ಹಾಗೂ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಕ್ಕಳ ಕನಸು ನನಸಾಗಿಸುವ ವೇದಿಕೆ ಈ ಶಿಬಿರವಾಗಿದ್ದು ಮಕ್ಕಳ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಬಣ್ಣ ಬಣ್ಣದ ರೆಕ್ಕೆಯನ್ನು ಕಟ್ಟಿ ಉತ್ತುಂಗಕ್ಕೆ

ಏ.13ರಿಂದ ಏ.21ರ ತನಕ ಮಕ್ಕಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಬಣ್ಣ 2026 Read More »

ಜೆಸಿಐ ಸುಳ್ಯ ಪಯಸ್ವಿನಿ : ಮಹಿಳಾ ದಿನಾಚರಣೆ

ಜೆಸಿಐ ಸುಳ್ಯ ಪಯಸ್ವಿನಿ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಸಮಾರಂಭ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಮಾ.17ರಂದು ನಡೆಯಿತು.ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ ‌ಕಾರ್ಯಕ್ರಮ ನಡೆಯಿತು.ಸ್ವಾಗತ್ ಐಸ್ ಕ್ರೀಂ ಸಂಸ್ಥೆಯ ಮಾಲಕಿ ಶ್ರೀಮತಿ ಶಶಿಕಲಾ ಪ್ರಭಾಕರನ್ ನಾಯರ್ ರಿಗೆ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್’ ನೀಡಿ ಗೌರವಿಸಲಾಯಿತುಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ಪ್ರಶಸ್ತಿ ಪ್ರದಾನಗೈದರು.

ಜೆಸಿಐ ಸುಳ್ಯ ಪಯಸ್ವಿನಿ : ಮಹಿಳಾ ದಿನಾಚರಣೆ Read More »

ಮಾ. 19 ರಿಂದ  ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸ್ವರ್ಣಂ ಯುಗಾದಿ ಚಿನ್ನಾಭರಣಗಳ  ಸಂಭ್ರಮ!

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ.19 ರಿಂದ ಮಾ.25 ರ ವರೆಗೆ ಸ್ವರ್ಣಂ ಯುಗಾದಿ ಚಿನ್ನಾ ಭರಣಗಳ ಸಂಭ್ರಮ ನಡೆಯಲಿದೆ.ಹಾಗೂ ವಿಶೇಷವಾಗಿ ಯುಗಾದಿ ಹಬ್ಬದ ಪ್ರಯುಕ್ತ ಉಚಿತ ಶಾಸ್ತ್ರೋತ್ರವಾಗಿ ಕಿವಿ ಮೂಗು ಚುಚ್ಚುವ ವ್ಯವಸ್ಥೆ ಇದೆ. ಹಾಗೂ 916 ನ ವಿವಿಧ ವಿನ್ಯಾಸಗಳ ಚಿನ್ನಾ ಭರಣಗಳ ಸಂಗ್ರಹ ಹಾಗೂ ಕಿವಿಯೋಲೆ ಮಕ್ಕಳ ಚಿನ್ನಾಭರಣಗಳ ಅಪೂರ್ವ ಸಂಗ್ರಹವಿದ್ದು ಪವನಿಗೆ 3000 ಕಡಿತವಾಗಲಿದೆ.

ಮಾ. 19 ರಿಂದ  ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸ್ವರ್ಣಂ ಯುಗಾದಿ ಚಿನ್ನಾಭರಣಗಳ  ಸಂಭ್ರಮ! Read More »

error: Content is protected !!
Scroll to Top