ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ದೊಡ್ಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನ ೪೫ನೇ ವರ್ಷದ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ ಮಾ.21ರಂದು ಮತ್ತು ಮಾ.22ರಂದು ನಡೆಯಿತು.
ಮಾ.೨೧ರಂದು ಬೆಳಗ್ಗೆ ಸ್ಥಳ ಶುದ್ದೀಕರಣ ೭ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ, ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ ೧೨ಕ್ಕೆ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿದು, ಬಟ್ಟಲು ಕಾಣಿಕೆ ಹೂವಿನ ಹಾರ ಅರ್ಪಿಸಿ, ಮೊಗೇರ ಪೂಜಾರಿಗಳ ದರ್ಶನ ಸವಾರಿ ನಡೆದು, ಹರಿಕೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಮಾ.22ರಂದು ಬೆಳಗ್ಗೆ ಶ್ರೀ ಸ್ವಾಮಿ ಕೊರಗಜ್ಜನ ನೇಮೋತ್ಸವ ಬಳಿಕ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಸ್ವೀಕರಿಸಿದರು.





















































































Leave a Comment

Your email address will not be published. Required fields are marked *

error: Content is protected !!
Scroll to Top