Uncategorized

ನವೆಂಬರ್ ನಲ್ಲಿ ಸಿಎಂ ಬದಲಾವಣೆ ಸೇರಿದಂತೆ ಯಾವುದೇ ಕ್ರಾಂತಿ ನಡೆಯುವುದಿಲ್ಲ,ಅದು ಬರೇ ಭ್ರಾಂತಿ

ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಸೇರಿದಂತೆ ಯಾವುದೇ ಕ್ರಾಂತಿಯೂ ನಡೆಯುವುದಿಲ್ಲ, ಅದೆಲ್ಲವೂ ಭ್ರಾಂತಿ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಅವರು ಅ. 6ರಂದು ಕೊಪ್ಪಳದಲ್ಲಿ 2005 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನವೆಂಬರ್‌ನಲ್ಲಿ ಸಿಎಂ ಸಮಾಜ ನಿರ್ಮಾಣ ಮತ್ತು ಸರ್ವರ ಅಭಿವೃದ್ಧಿಗೆ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ಸಮೀಕ್ಷೆಯನ್ನು ವಿರೋಧಿಸುವವರು ಸಮಾಜ ವಿರೋಧಿಗಳು ಎಂದ ಅವರು, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮೇಲ್ಪಾತಿಗಳನ್ನು ತುಳಿಯಲು ಸಮೀಕ್ಷೆ […]

ನವೆಂಬರ್ ನಲ್ಲಿ ಸಿಎಂ ಬದಲಾವಣೆ ಸೇರಿದಂತೆ ಯಾವುದೇ ಕ್ರಾಂತಿ ನಡೆಯುವುದಿಲ್ಲ,ಅದು ಬರೇ ಭ್ರಾಂತಿ Read More »

ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ(HWC) ಸ್ಥಾಪನೆಗೆ 24.70 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ(HWC) ಸ್ಥಾಪನೆಗೆ ಒಟ್ಟು 24.70 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ PM-ABHIM ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ

ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ(HWC) ಸ್ಥಾಪನೆಗೆ 24.70 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ Read More »

ಯುವ ವಕೀಲೆ ಆತ್ಮ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ,ಒರ್ವ ಯುವಕನ ಬಂಧನ

ಕಾಸರಗೋಡಿನ ಡಿವೈಎಫ್‌ಐ ನಾಯಕಿ ಯುವ ವಕೀಲೆ ರಂಜಿತಾ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡಕೊಂಡಿದ್ದು ಓರ್ವನನ್ನು ಪೊಲೀಸರು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.ರಂಜಿತಾ ಅವರ ಆಪ್ತ ಸ್ನೇಹಿತ ಎನ್ನಲಾದ ತಿರುವಲ್ಲ ಮೂಲದ ಅನಿಲ್ ಕುಮಾ‌ರ್ ಬಂಧಿತ ವ್ಯಕ್ತಿ.ಅ. 6ರಂದು ಬೆಳಿಗ್ಗೆ ತಿರುವನಂತಪುರಂನಲ್ಲಿ ಕುಂಬಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಲಾಗಿದೆ.ಡಿವೈಎಫ್‌ಐ ಮುಖಂಡೆಯಾಗಿರುವ ವಕೀಲೆ ರಂಜಿತಾ ಸೆಪ್ಟೆಂಬ‌ರ್ 30 ರಂದು ಕುಂಬಳೆಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು, ರಂಜಿತ್ ಸಿಪಿಐ(ಎಂ) ಕುಂಬಳ

ಯುವ ವಕೀಲೆ ಆತ್ಮ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ,ಒರ್ವ ಯುವಕನ ಬಂಧನ Read More »

ಸದ್ಯದಲ್ಲಿಯೇ ತಾ.ಪಂ,ಜಿ.ಪಂ ಗೆ ಮೀಸಲಾತಿ ನಿಗದಿ,ಚುನಾವಣಾ ಆಯೋಗದಿಂದ ತಯಾರಿ

ರಾಜ್ಯದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದು 4 ವರ್ಷಗಳು ಕಳೆದು ಹೋಗಿದ್ದು ಈ ಹಿನ್ನಲೆಯಲ್ಲಿ ಚುನಾವಣೆಗೆ ಆಯೋಗ ಭರದಿಂದ ಸಿದ್ಧತೆ ಆರಂಭಿಸಿದೆ ಎಂದು ವರದಿಗಾಳಾಗಿವೆ.ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪೈಪೋಟಿಯ ಜತೆಗೆ ಜನಪ್ರತಿನಿಧಿಗಳಾಗಲು ತೀವ್ರ ಲಾಬಿ ಶುರುವಾಗಿದೆ. ಕೆಲವು ರಾಷ್ಟ್ರೀಯ ಪಕ್ಷಗಳಲ್ಲಿ ಜಿಪಂ ತಾಪಂನ ಒಂದೊಂದು ಕ್ಷೇತ್ರಕ್ಕೆ ತಲಾ ನಾಲ್ವರು ಸಂಭಾವ್ಯರನ್ನು ಆಯ್ಕೆಮಾಡಿ ಅದರಲ್ಲಿ ಒಬ್ಬರನ್ನು ಅಂತಿಮಗೊಳಿಸುವುದು ಸದ್ಯದ ಲೆಕ್ಕಾಚಾರವಾಗಿದೆ ಎನ್ನುತ್ತಾವೆ ರಾಜಕೀಯ ಮೂಲಗಳು. ಪಂ ಮತ್ತು ತಾಪಂ. ಚುನಾವಣೆಗೆ ಸರ್ಕಾರ ಮೀಸಲಾತಿ ನಿಗದಿಪಡಿಸಬೇಕಿದ್ದು ಇದಾದ

ಸದ್ಯದಲ್ಲಿಯೇ ತಾ.ಪಂ,ಜಿ.ಪಂ ಗೆ ಮೀಸಲಾತಿ ನಿಗದಿ,ಚುನಾವಣಾ ಆಯೋಗದಿಂದ ತಯಾರಿ Read More »

ಪಾಕಿಸ್ಥಾನವನ್ನು ಹೀನಾಯವಾಗಿ ಸೋಲಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

2025ರ ಮಹಿಳಾ ಏಕದಿನ ವಿಶ್ವಕಪ್‌ನ 6ನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 88 ರನ್‌ಗಳ ಅಂತರದಿಂದ ಸೋಲಿಸಿದೆ. ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 247 ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 43 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ತಂಡ ವಿಶ್ವಕಪ್‌ನಲ್ಲಿ ತನ್ನ ಎರಡನೇ ವಿಜಯವನ್ನು ದಾಖಲಿಸಿದೆ, ಆದರೆ ಪಾಕಿಸ್ತಾನ ತಂಡ ಆಡಿದ ಎರಡು ಪಂದ್ಯಗಳಲ್ಲೂ ಸೋಲು

ಪಾಕಿಸ್ಥಾನವನ್ನು ಹೀನಾಯವಾಗಿ ಸೋಲಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ Read More »

ಕೊಡಿಯಾಲ : ಜಾತಿ ಸಮೀಕ್ಷೆ ನಡೆಸಲು ಆಗಮಿಸಿದ ಶಿಕ್ಷಕಿಗೆ ಕಚ್ಚಿ ಬಟ್ಟೆ ಹರಿದು ಹಾಕಿದ ನಾಯಿ

ಜಾತಿ‌ ಸಮೀಕ್ಷೆ ನಡೆಸಲು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿನಡೆಸಿದ ಘಟನೆ ಬಾಳಿಲ‌ ಸಮೀಪದ ಕೊಡಿಯಾಲ ಎಂಬಲ್ಲಿಂದ ವರದಿಯಾಗಿದೆ.ಕೊಡಿಯಾಲದ ನಿಡ್ಮಾರು ಎಂಬಲ್ಲಿನ ಮನೆಗೆ ಮೂವಪ್ಪೆ ಶಾಲಾಶಿಕ್ಷಕಿಯೋರ್ವರು ಸಮೀಕ್ಷೆಗೆ ತೆರಳಿದ ವೇಳೆ ಮನೆಯ ನಾಯಿ ಕಚ್ಚಿದೆ.ಪರಿಣಾಮ ಶಿಕ್ಷಕಿಯ ಉಡುಪು ಹರಿದು ಹೋಗಿದೆ.

ಕೊಡಿಯಾಲ : ಜಾತಿ ಸಮೀಕ್ಷೆ ನಡೆಸಲು ಆಗಮಿಸಿದ ಶಿಕ್ಷಕಿಗೆ ಕಚ್ಚಿ ಬಟ್ಟೆ ಹರಿದು ಹಾಕಿದ ನಾಯಿ Read More »

ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿಯ ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಾನಿ

ಗಣತಿ ಮಾಡುತ್ತಿದ್ದ ಶಿಕ್ಷಕಿಯ ಕಾರಿಗೆ ಹಾನಿ ಮಾಡಿರುವ ಘಟನೆ ಅ.5ರಂದು ಬೆಳಿಗ್ಗೆ ಕಡಬ ತಾಲೂಕಿನ ಕೋಡಿಂಬಾಳದಿಂದ ವರದಿಯಾಗಿದೆ.ಕೊಣಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಮಣಿ ಬಿ ಎಂಬವರು ಶಂಕರ ಪಾಜೋವು ಎಂಬವರ ಮನೆಯಲ್ಲಿ ಗಣತಿ ಕಾರ್ಯ ಮಾಡುತ್ತಿದ್ದರು. ಈ ವೇಳೆ ಶಂಕರ ಪಾಜೋವು ಎಂಬವರು ರಸ್ತೆ ಬದಿಯಲ್ಲಿದ್ದ ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಾನಿಗೊಳಿಸಿ ಕಾರಿನ ಹಿಂಬದಿ ಗಾಜನ್ನು ಪುಡಿಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಮಣಿಯವರು ಕಡಬ ಠಾಣೆ ಹಾಗೂ ಕಡಬ ತಹಶೀಲ್ದಾ‌ರ್ ಅವರಿಗೆ ದೂರು

ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿಯ ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಾನಿ Read More »

ಜಾತಿ ಗಣತಿಗೆ ತೆರಳಿದ ಶಿಕ್ಷಕಿ ಹಾಗೂ ಅವರ ಪತಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು!

ಹಾಸನ ಜಿಲ್ಲೆಯಲ್ಲಿ ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮತ್ತು ಅವರ ಪತಿಯ ಮೇಲೆ ಬೀದಿ ನಾಯಿಗಳು ಓಡಿಸಿಕೊಂಡು ಬಂದು ಕಚ್ಚಿರುವ ಘಟನೆ ವರದಿಯಾಗಿದೆ.ಶಿಕ್ಷಕಿಗೆ ಮುಖ, ಕೈ-ಕಾಲು, ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯವಾಗಿವೆ.ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರದಲ್ಲಿ ಘಟನೆ ನಡೆದಿದೆ. ಶಿಕ್ಷಕಿಯನ್ನು ಬಚಾವ್ ಮಾಡಲು ಬಂದ ಇತರ ಏಳು ಮಂದಿ ಮೇಲೂ ನಾಯಿಗಳ ದಾಳಿ ಮಾಡಿವೆ. ಬೀದಿ ನಾಯಿಗಳ ದಾಳಿಗೆ ಒಳಗಾಗಿ ಶಿಕ್ಷಕಿ ಚಿಕ್ಕಮ್ಮ ತೀವ್ರ ಗಾಯಗೊಂಡಿದ್ದು ಇವರು ಪಟ್ಟಣದ ಜಿಎಚ್‌ಪಿಎಸ್‌ ಶಾಲೆಯ

ಜಾತಿ ಗಣತಿಗೆ ತೆರಳಿದ ಶಿಕ್ಷಕಿ ಹಾಗೂ ಅವರ ಪತಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು! Read More »

ನವೆಂಬರ್ 22ರೊಳಗೆ ಚುನಾವಣೆ

ನವೆಂಬರ್ 22ರೊಳಗೆ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ಇಂದು ಪಾಟ್ನಾದಲ್ಲಿ ತಿಳಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ, ಬೂತ್ ಮಟ್ಟದ ಅಧಿಕಾರಿಗಳ ಭತ್ಯೆ ಹೆಚ್ಚಳ, ಪ್ರತಿ ಬೂತ್‌ನಲ್ಲಿ 1,200 ಕ್ಕಿಂತ ಹೆಚ್ಚು ಮತದಾರರಿಲ್ಲದಂತೆ ನೋಡಿಕೊಳ್ಳುವುದು, 100% ವೆಬ್‌ ಕಾಸ್ಟಿಂಗ್ ಕುರಿತು ಅವರು ಮಾಹಿತಿ ನೀಡಿದರು. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಬಣಗಳಲ್ಲಿ ಭಾರೀ ಸ್ಪರ್ಧೆ ಇದ್ದು, ಬಿಹಾರ್ ಫಲಿತಾಂಶ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಹುದ್ದೆ ಮೇಲೆ ನೇರ ಪರಿಣಾಮ

ನವೆಂಬರ್ 22ರೊಳಗೆ ಚುನಾವಣೆ Read More »

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಸಿಕೊಂಡ ಹಾಸ್ಯ ನಟ ಚಿಕ್ಕಣ್ಣ

ಹಾಸ್ಯ ನಟ ಚಿಕ್ಕಣ್ಣ ಗುಟ್ಟಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾರೊಂದಿಗೆ ನಿಶ್ಚಿತಾರ್ಥ ಮಾಡಿಸಿಕೊಂಡಿದ್ದಾರೆ.ಇದು ಅರೇಂಜ್ ಮ್ಯಾರೇಜ್ ಎಂದು ತಿಳಿಸಿದ್ದಾರೆ. ‘ಜೋಡೆತ್ತು’ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ತಮ್ಮ ಮದುವೆಯೂ ಆಗಿರುತ್ತದೆ ಎಂದು ಚಿಕ್ಕಣ್ಣ ಹೇಳಿದ್ದಾರೆ. ಭೂಮಿ ಫಲ ಕೊಡಲು ಉಳುಮೆಗೆ ಜೋಡೆತ್ತು ಬೇಕು, ಬದುಕಿನ ಬಂಡಿ ಸಾಗಲೂ ಪತಿ-ಪತ್ನಿ ಜೋಡೆತ್ತಿನಂತೆ ಸಾಗಬೇಕು ಎಂಬ ಮಾತನ್ನು ಉಲ್ಲೇಖಿಸಿ, ವೃತ್ತಿಯಲ್ಲೂ ವೈಯಕ್ತಿಕವಾಗಿಯೂ ಜೋಡೆತ್ತಿನ ಜೊತೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಸಿಕೊಂಡ ಹಾಸ್ಯ ನಟ ಚಿಕ್ಕಣ್ಣ Read More »

error: Content is protected !!
Scroll to Top