Uncategorized

ನಿವೃತ್ತ ಪ್ರಾಂಶುಪಾಲ ಕುಶಾಲಪ್ಪ ಡಿ.ಎಸ್ ನಿಧನ

ನಿವೃತ್ತ ಪ್ರಾಂಶುಪಾಲ, ಸುಳ್ಯದ ಗಾಂಧಿನಗರ ನಿವಾಸಿ, ದೇವರಗುಂಡದ ಮನೆಯ ಕುಶಾಲಪ್ಪ ಡಿ.ಎಸ್. ರವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30ರಂದು ನಿಧನರಾದರು.ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಲೀಲಾ ಕುಶಾಲಪ್ಪ, ಪುತ್ರರಾದ ಸಂದೀಪ್, ಪ್ರದೀಪ್, ಜಯದೀಪ್, ಸಹೋದರರು, ಸಹೋದರಿಯರು, ಬಂಧು ಮಿತ್ರರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಇವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅ.01 ರಂದು ಬೆಳಿಗ್ಗೆ 10.30 ರಿಂದ 12.00 ಗಂಟೆಯ ತನಕ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿವೃತ್ತ ಪ್ರಾಂಶುಪಾಲ ಕುಶಾಲಪ್ಪ ಡಿ.ಎಸ್ ನಿಧನ Read More »

ಹೃದಯಘಾತದಿಂದ ಆಟೋ ರಿಕ್ಷಾ ಚಾಲಕ ನಿಧನ

ಸುಳ್ಯದಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸೆ.30ರಂದು ಬೆಳಗ್ಗೆ ನಿಧನರಾಗಿದ್ದಾರೆ. ಹೃದಯಘಾತದಿಂದ ನಿಧನರಾದ ವ್ಯಕ್ತಿಯನ್ನು‌ ಅನಿಲ್ ಎಂದು ಗುರುತಿಸಲಾಗಿದೆ.ಅವರಿಗೆ 48 ವರ್ಷ ಪ್ರಾಯವಾಗಿತ್ತು.ಅವರು ಸುಳ್ಯದ ಜ್ಯೋತಿ ಸರ್ಕಲ್ ನಲ್ಲಿ ಪಾರ್ಕಿಂಗ್ ಮಾಡಿಕೊಂಡು ಆಟೋ ರಿಕ್ಷಾ ಓಡಿಸುತ್ತಿದ್ದರು.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಹೃದಯಘಾತದಿಂದ ಆಟೋ ರಿಕ್ಷಾ ಚಾಲಕ ನಿಧನ Read More »

ಸುಳ್ಯ ದಸರಾ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆಯಲಿ : ಡಾ.ಹರಪ್ರಸಾದ್ ತುದಿಯಡ್ಕ ಶುಭ ಹಾರೈಕೆ

ಸುಳ್ಯ ದಸರಾ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆಯಲಿ ಎಂದು ಸುಳ್ಯ ಚೆನ್ನಕೇಶವ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಶುಭ ಹಾರೈಸಿದರು.ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ 54ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರವನ್ನು‌ ಸುಳ್ಯದ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಅವರುಉದ್ಘಾಟಿಸಿ ಮಾತನಾಡಿದರು.

ಸುಳ್ಯ ದಸರಾ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆಯಲಿ : ಡಾ.ಹರಪ್ರಸಾದ್ ತುದಿಯಡ್ಕ ಶುಭ ಹಾರೈಕೆ Read More »

ರಾಷ್ಟ್ರೀಯ ಹಿಂದಿ ದಿವಸ ಆಚರಣೆ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಹಿಂದಿ ವಿಭಾಗದ ವತಿಯಿಂದ ರಾಷ್ಟ್ರೀಯ ಹಿಂದಿ ದಿವಸ್ ಕಾರ್ಯಕ್ರಮವನ್ನು ಸೆ. 25ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿಖಿತಾ ಕೆ, ಹಿಂದಿ ಅನುವಾದ ಅಧಿಕಾರಿ, ಆಡಳಿತಾತ್ಮಕ ಭಾಷಾ ವಿಭಾಗ, ಏನ್.ಐ.ಟಿ.ಕೆ. ಸುರತ್ಕಲ್ ಇವರು ಆಗಮಿಸಿ ಹಿಂದಿ ಭಾಷೆಯ ಮಹತ್ವದ ಕುರಿತು ಮಾತನಾಡಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ

ರಾಷ್ಟ್ರೀಯ ಹಿಂದಿ ದಿವಸ ಆಚರಣೆ ಕಾರ್ಯಕ್ರಮ Read More »

ಕೆ.ಎಸ್ .ಎಸ್ ಕಾಲೇಜಿನಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಹಾಗೂ ಐ ಕ್ಯೂ ಎ ಸಿ ಸಹಯೋಗದೊಂದಿಗೆ ಇತಿಹಾಸ ವಿಭಾಗದ ವತಿಯಿಂದ ದಿನಾಂಕ 27/09/2025ರಂದು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದಡಾ. ದಿನೇಶ್ ಪಿ. ಟಿ ಅವರು ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿವೇಕಾನಂದ ಕಾಲೇಜು ಪುತ್ತೂರಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ ಪ್ರಮೋದ್ ಎಂ ಜಿ ಅ ವರು ಸಂಸ್ಕೃತಿ ಆಚರಣೆ ನಂಬಿಕೆಗಳು ಪರಂಪರಾನುಗತವಾಗಿ ಬಂದವುಗಳು ಇವುಗಳನ್ನು ಉಳಿಸಿ ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಪಂಚಲಿಂಗೇಶ್ವರ ದೇವಸ್ಥಾನದ

ಕೆ.ಎಸ್ .ಎಸ್ ಕಾಲೇಜಿನಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾ ಕಚೇರಿಯಲ್ಲಿ ನವರಾತ್ರಿ ಪ್ರಯಕ್ತ ಆಯುಧ ಪೂಜಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾ ಕಚೇರಿಯಲ್ಲಿ ನವರಾತ್ರಿ ಪ್ರಯಕ್ತ ಗಣಪತಿ ಹವನ,ಲಕ್ಷ್ಮಿಪೂಜೆ,ಆಯುಧ ಪೂಜೆ ಸೆ‌.28ರಂದ ನಡೆಯಿತು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು ದೀಪ ಬೆಳಗಿಸಿ ಆಯುಧ ಪೂಜೆಯ ಔಚಿತ್ಯದ ಬಗ್ಗೆ ಮಾತನಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ, ಕೇಂದ್ರ ಕಚೇರಿಯ ಯೋಜನಾ ನಿರ್ದೇಶಕ ಪದ್ಮಯ್ಯ ಸಿ.ಎಚ್‌. ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್‌, ಸುಳ್ಯ ಯೋಜನಾ ಕಚೇರಿಯ ಯೋಜನಾಧಿಕಾರಿ ಮಾದವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾ ಕಚೇರಿಯಲ್ಲಿ ನವರಾತ್ರಿ ಪ್ರಯಕ್ತ ಆಯುಧ ಪೂಜಾ ಕಾರ್ಯಕ್ರಮ Read More »

ರಾಜ್ಯದ ರಸ್ತೆಗಳ ಗುಂಡಿ ಮುಚ್ಚಲು ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ : ಬಿಜೆಪಿ ಸುಳ್ಯ ಮಂಡಲ ವತಿಯಿಂದ ಪ್ರತಿಭಟನೆ

ಮಳೆಯಿಂದಾಗಿ ಕೆಟ್ಟು ಹೋಗಿರುವ ರಾಜ್ಯದ ರಸ್ತೆಗಳ ಗುಂಡಿ ಮುಚ್ಚಲು ಕೂಡ ಅನುದಾನ ನೀಡದ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಇಂದು ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕಾಣಿಯೂರಿನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಶಾಸಕಿ ಕುಮಾರಿ ಭಾಗಿರತಿ ಮುರುಳ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಕೇವಲ ಹಗರಣಗಳಲ್ಲಿ ಮುಳುಗಿರುವ

ರಾಜ್ಯದ ರಸ್ತೆಗಳ ಗುಂಡಿ ಮುಚ್ಚಲು ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ : ಬಿಜೆಪಿ ಸುಳ್ಯ ಮಂಡಲ ವತಿಯಿಂದ ಪ್ರತಿಭಟನೆ Read More »

ಸಂಪಾಜೆ : ಭಾ.ಕೃ ಸಂ. ಪ. ಗೇರು ಸಂಶೋಧನಾ ನಿರ್ದೇಶನಾಲಯದಿಂದ ಕೃಷಿಕರಿಗೆ ಆರ್ ಕೆ ವಿ ವೈ ಮಾದರಿ ಗ್ರಾಮ ಯೋಜನೆಯಡಿ ಗೇರು ಕೃಷಿ ಮಾಹಿತಿ

ಸಂಪಾಜೆ ಗ್ರಾಮ ಪಂಚಾಯತ್, ಭಾ.ಕೃ.ಸಂ.ಪ ಗೇರು ಸಂಶೋದನಾ ನಿರ್ದೇಶನಾಲಯ ಪುತ್ತೂರು , ಕೃಷಿ ಇಲಾಖೆ ಸುಳ್ಯ , ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ(ನಿ.) ವಿಟ್ಲ, ಮಂಗಳೂರು, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ ಸುಳ್ಯಎನ್ ಆರ್ ಎಲ್ ಎಂ ಸುಳ್ಯ, ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.)ಸಂಪಾಜೆ* ಜಂಟಿ ಆಶ್ರಯದಲ್ಲಿ ಮಣ್ಣು ಪರೀಕ್ಷೆ ತರಬೇತಿ ಹಾಗೂ ಗೇರು ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ವಹಿಸಿ,

ಸಂಪಾಜೆ : ಭಾ.ಕೃ ಸಂ. ಪ. ಗೇರು ಸಂಶೋಧನಾ ನಿರ್ದೇಶನಾಲಯದಿಂದ ಕೃಷಿಕರಿಗೆ ಆರ್ ಕೆ ವಿ ವೈ ಮಾದರಿ ಗ್ರಾಮ ಯೋಜನೆಯಡಿ ಗೇರು ಕೃಷಿ ಮಾಹಿತಿ Read More »

ಟೀಂ ಇಂಡಿಯಾಗೆ ಮತ್ತೊಂದು ಜಯ; ಬಾಂಗ್ಲಾವನ್ನು ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಸೆ.24ರಂದು ನಡೆದ ಏಷ್ಯಾ ಕಪ್ 2025ರ ಸೂಪರ್ ಪೋರ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ಎದುರು 41 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ನೇರವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಬಾಂಗ್ಲಾ 124 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಭಿಷೇಕ್ ಶರ್ಮಾ(75), ಗಿಲ್ (29), ಹಾರ್ದಿಕ್(38) ರನ್ ಗಳಿಸಿದರು. ಕುಲೀಪ್ 3, ಬುಮ್ರಾ

ಟೀಂ ಇಂಡಿಯಾಗೆ ಮತ್ತೊಂದು ಜಯ; ಬಾಂಗ್ಲಾವನ್ನು ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ Read More »

ಪೂರ್ಣಿಮಾ ಪೆರ್ಲಂಪಾಡಿಮಡಿಕೇರಿ ದಸರಾ ಕವಿಗೋಷ್ಠಿ ಗೆ ಆಯ್ಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಕೊಳ್ತಿಗೆ ವಲಯದ ಪೆರ್ಲಂಪಾಡಿ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲಂಪಾಡಿ ಇವರು 2025 ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ. ಸೆಪ್ಟೆಂಬರ್ 25ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದು ಇವರು ಅನೇಕ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ವಲಯ 15ರ ಬೆಳ್ಳಾರೆ ಜೇಸಿಸ್ ನ 2026ರ ನಿಯೋಜಿತ ಅಧ್ಯಕ್ಷರು

ಪೂರ್ಣಿಮಾ ಪೆರ್ಲಂಪಾಡಿಮಡಿಕೇರಿ ದಸರಾ ಕವಿಗೋಷ್ಠಿ ಗೆ ಆಯ್ಕೆ Read More »

error: Content is protected !!
Scroll to Top