Uncategorized

ಫೆ.22 ಮತ್ತು ಫೆ.23 ರಂದು ಐವರ್ನಾಡಿನಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಸುಳ್ಯ ತಾಲೂಕಿನ ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್‌, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತ‌ರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದೆ.ಕಬಡ್ಡಿ ಪಂದ್ಯಾಟವನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಉದ್ಘಾಟಿಸಲಿದ್ದಾರೆ ಎಂದು ಫೆ.19 […]

ಫೆ.22 ಮತ್ತು ಫೆ.23 ರಂದು ಐವರ್ನಾಡಿನಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ Read More »

ತೊಡಿಕಾನ ದೇವಳದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳದ ವ್ಯವಸ್ಥಾಪನಾ ಸಮಿತಿಗೆ 9ಜನ ನೂತನ ಸದಸ್ಯರನ್ನು ಸರಕಾರ ನೇಮಕ ಮಾಡಿದೆ.ಯು.ಕೆ.ತೀರ್ಥರಾಮ ಪರ್ನೋಜಿ, ಯು.ಕೆ.ಕೇಶವ ಕೊಳಲುಮೂಲೆ, ವಸಂತ ಪೆಡ್ಕ, ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ, ಸತ್ಯಪ್ರಸಾದ್‌ ಗಬ್ಬಲ್ಕಜೆ, ಚಂಚಲಾಕ್ಷಿ ಕಲ್ಟಾರು, ಮಾಲತಿ ಭೋಜಪ್ಪ ಹಾಸ್ಸಾರೆ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರನ್ನು ನೂತನ ವ್ಯವಸ್ಥಾಪನ ಸಮಿತಿ ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದೆ.

ತೊಡಿಕಾನ ದೇವಳದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ Read More »

ಕೊಳ್ತಿಗೆ : ತಂದೆಯಿಂದ ಮಗಳ ಮೇಲೆ ಅತ್ಯಾಚಾರ !

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ತಂದೆಯೇ ಅತ್ಯಾಚಾರ ನಡೆಸಿ ರಾಕ್ಷಸ ಸ್ವಭಾವ ಮೆರೆದ ಘಟನೆ ನಡೆದಿದೆ. ಬಗ್ಗೆ ಬಾಲಕಿಯ ತಾಯಿ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಫೆ.12 ರಂದು ದೂರು ನೀಡಿದ್ದು ಪೋಕೋ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.ನೀಚ ಕ್ರತ್ಯ ಎಸಗಿದ ತಂದೆಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೊಳ್ತಿಗೆ : ತಂದೆಯಿಂದ ಮಗಳ ಮೇಲೆ ಅತ್ಯಾಚಾರ ! Read More »

ಯುವ ನಿಧಿಗೆ ಇಂದೇ ಅರ್ಜಿ ಸಲ್ಲಿಸಿ,ಇಲ್ಲಿದೆ ಹೆಚ್ಚಿನ ಮಾಹಿತಿ

2023-24ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲಮೋ ಅರ್ಹತೆ ಹೊಂದಿದವರು ಯುವನಿಧಿ ಯೋಜನೆಯ ನಿರುದ್ಯೋಗಿ ಭತ್ಯೆ ಪಡೆಯಲು ಫೆ.15 ರೊಳಗೆ ಅರ್ಜಿ ಸಲ್ಲಿಸಬೇಕು. ಈ ವಿಶೇಷ ನೋಂದಣಿಗೆ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲೂ ನಿರಂತರವಾಗಿ ಯುವನಿಧಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ನಿರುದ್ಯೋಗಿ ಯುವಕ-ಯುವತಿಯರು ಈ ವಿಶೇಷ ಸೌಲಭ್ಯ ಪಡೆದುಕೊಳ್ಳಲು ಕೋರಲಾಗಿದೆ.

ಯುವ ನಿಧಿಗೆ ಇಂದೇ ಅರ್ಜಿ ಸಲ್ಲಿಸಿ,ಇಲ್ಲಿದೆ ಹೆಚ್ಚಿನ ಮಾಹಿತಿ Read More »

ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂಕಂಪನ

ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿದೆ.ಇಂದು ಬೆಳಗಿನ ಜಾವ 1.35-1.40 ಮಧ್ಯೆಯ ಸಮಯದಲ್ಲಿ ಭಾರೀ ಶಬ್ದದೊಂದಿಗೆ ಭೂಕಂಪನ ಸಂಭವಿಸಿದೆ. ಕೋಡೋಂ ಬೇಳೂ‌ರ್, ವೆಸ್ಟ್ ಎಳೇರಿ, ಕಿನಾನೂರ್ ಕರಿಂದಳಂ, ಬಳಾಲ್ ಪಂಚಾಯತ್‌ಗಳ ಪರಪ್ಪ, ಒಡೆಯಂಚಲ್‌, ಬಳಾಲ್, ಕೊಟ್ಟೋಡಿ, ಚುಳ್ಳಿಕ್ಕರ, ಮತ್ತು ಪೂಡಂಕಲ್ಲು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಶಬ್ದ ಕೇಳಿ ಬಂದು ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಭಾರೀ ಶಬ್ದದಿಂದ ಜನರು ಆತಂಕಗೊಂಡಿದ್ದಾರೆ. ಯಾವುದೆ ಅನಾಹುತಗಳು ಸಂಭವಿಸಿಳ ಎಂದು ಸಂಬಂಧಿಸಿದ

ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂಕಂಪನ Read More »

ಸಾಕು ನಾಯಿಯನ್ನು ಕೊಂದು ತಿಂದ ಚಿರತೆ

ಅಜ್ಜಾವರ ಗ್ರಾಮದ ಪಡ್ಡಂಬೈಲು ನಲ್ಲಿ ಮನೆಯ ಅಂಗಳಕ್ಕೆ ಬುಧವಾರ ರಾತ್ರಿ ಚಿರತೆಯೊಂದು ಬಂದು ಸಾಕು ನಾಯಿ ಕೊಂದು ತಿಂದಿದೆ. ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ಶಂಕರ ಪಾಟಾಳಿಯವರ ಅಂಗಳದಲ್ಲಿ ಫೆ.4ರಂದು ರಾತ್ರಿ ಸುಮಾರು 1 ಗಂಟೆ 40 ನಿಮಿಷದಿಂದ 1 ಗಂಟೆ 42 ನಿಮಿಷದ ಒಳಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ ವೇಳೆ ಮನೆಯ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ ನಂತರ

ಸಾಕು ನಾಯಿಯನ್ನು ಕೊಂದು ತಿಂದ ಚಿರತೆ Read More »

ಅರಂತೋಡು : ಭೀಕರ ಬೈಕ್ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಂಭೀರ

ಸುಳ್ಯ ತಾಲೂಕಿನ ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಲೆಟ್ ಬೈಕ್ ಸ್ಕಿಡ್ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಫೆ.5ರಂದು ಮುಂಜಾನೆ ನಡೆದಿದೆ. ಗಾಯಾಳು ಮೈಸೂರು ಮೂಲದ ಪೊಲೀಸ್ ಸಿಬ್ಬಂದಿ ಎಂದು ಹೇಳಲಾಗುತ್ತಿದೆ.ಗಾಯಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡು : ಭೀಕರ ಬೈಕ್ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಂಭೀರ Read More »

ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಾಟ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರ ಮೇಲೆ ಫೆ. 4ರ ಮಂಗಳವಾರ ಅನಂತಾಡಿಯಲ್ಲಿ ಗುಂಡು ಹಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಫೈರಿಂಗ್ ನಡೆಯಲು ಕಾರಣ ಏನೆಂದು ತಿಳಿದು ಬಂದಿಲ್ಲ ಚಿತ್ತರಂಜನ್ ಶೆಟ್ಟಿ ಅನಂತಾಡಿಗೆ ಯಾಕೆ ಹೋಗಿದ್ದರು ಎಂಬ ವಿಚಾರವೂ ತಿಳಿದು ಬಂದಿಲ್ಲ.ಮಿಸ್ ಫೈಯರ್ ಎಂಬ ಮಾಹಿತಿ ಇದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ಅವರೇ ಹೋಗಿ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಾಟ Read More »

ಕಾಂತಮಂಗಲ : ಶ್ರದ್ಧಾ ಭಕ್ತಿಯಿಂದ ನಡೆದ ಗುತ್ಯಮ್ಮ ದೇವಿಯ ವಾರ್ಷಿಕೋತ್ಸವ,ಮತ್ತೆ ಒಂದಾದ ಡಾ.ಕೆ.ವಿ ಚಿದಾನಂದ ಮತ್ತು ಡಾ.ಕೆ.ವಿ ರೇಣುಕಾಪ್ರಸಾದ್ ಸಹೋದರರು!

ಡಾ.ಕೆ.ವಿ ರೇಣುಕಾಪ್ರಸಾದ್ ಧರ್ಮದರ್ಶಿಯಾಗಿರುವ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ ಶ್ರದ್ದಾ ಭಕ್ತಿಯಿಂದ ವೈಭಯುತವಾಗಿ ಜ. 31ರಂದು ನಡೆಯಿತು.ಬೆಳಿಗ್ಗೆ ನವಗ್ರಹ ಹೋಮ, ಚಂಡಿಕಾ ಹೋಮ ನಡೆದು ಪೂರ್ಣಾಹುತಿ ನಂತರ ಮಹಾಮಂಗಳಾರತಿ,ಪ್ರಸಾದ ವಿತರಣೆಯಾಗಿ ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಗಂಟೆ 5.00ರಿಂದ ರಂಗ ಪೂಜೆ, ಪ್ರಸನ್ನ ಪೂಜೆ, ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಿತು.ಸಾವಿರಾರು ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಿದರು.ಈ ಬಾರಿ ಗುತ್ಯಮ್ಮ ದೇವಿ ಕ್ಷೇತ್ರಕ್ಕೆ ಡಾ.ಕೆ.ವಿ.ಚಿದಾನಂದ ಹಾಗೂ

ಕಾಂತಮಂಗಲ : ಶ್ರದ್ಧಾ ಭಕ್ತಿಯಿಂದ ನಡೆದ ಗುತ್ಯಮ್ಮ ದೇವಿಯ ವಾರ್ಷಿಕೋತ್ಸವ,ಮತ್ತೆ ಒಂದಾದ ಡಾ.ಕೆ.ವಿ ಚಿದಾನಂದ ಮತ್ತು ಡಾ.ಕೆ.ವಿ ರೇಣುಕಾಪ್ರಸಾದ್ ಸಹೋದರರು! Read More »

ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ !

ಪ್ರೇತ ಕಾಟ ಅಧಿಕವಾಗಿದೆ ಎಂದು ಅವುಗಳ ಉಚ್ಛಾಟನೆಗಾಗಿ ಮಂಗಳೂರು ನಗರದ ಕೊಟ್ಟಾರ ಸಮೀಪ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ನಿಷೇಧ ಮಾಡಲಾಗಿತ್ತು!ಇಲ್ಲಿನ ಅಬ್ಬಕ್ಕನಗರ ಭಾಗದಲ್ಲಿ ಪ್ರೇತಕಾಟ ಅಧಿಕವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಇದರಂತೆ ತಾಂಬೂಲ ಪ್ರಶ್ನೆ ಇಟ್ಟು ಪರಿಶೀಲಿಸಿದಾಗ ಉಚ್ಛಾಟನೆ ಕ್ರಮ ಮಾಡಬೇಕು ಎಂದು ತಿಳಿಸಲಾಗಿತ್ತು. ಇದರಂತೆ ಉಚ್ಚಾಟನೆ ಕ್ರಮವನ್ನು ಬುಧವಾರ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮ ನೆರವೇರಿದೆ. ಈ ಸಂದರ್ಭ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿರ್ಬಂಧಿಸಿದ್ದರು.

ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ ! Read More »

error: Content is protected !!
Scroll to Top