Uncategorized

ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದು ಭಾರೀ ನಷ್ಟ

ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ರಾಧಾಕೃಷ್ಣರಿಗೆ ಸೇರಿದ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ರಬ್ಬರ್ ಸುಟ್ಟು ಹೋದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.ಸುಮಾರು ರೂ 1,00,000/- ಮೌಲ್ಯದ ಅಡಿಕೆ, ರಬ್ಬರ್ ಶೀಟುಗಳು ಸುಟ್ಟು ಹೋಗಿರುತ್ತದೆ ಎಂದು ಅಂದಾಜಿಸಲಾಗಿದೆ. ಸುಳ್ಯ ಅಗ್ನಿ ಶಾಮಕ ಸಹಾಯಕ ಠಾಣಾಧಿಕಾರಿ ಕಿರಣ್ ಕುಮಾರ್ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದರು.

ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದು ಭಾರೀ ನಷ್ಟ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಬಲಿವಾಡು ಕೂಟ,ಭಜನಾ ಸತ್ಸಂಗ ಕಾರ್ಯಕ್ರಮ

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಕೊನೆಯ ದಿನವಾದ ಸೆ. 13 ರಂದು ಬಲಿವಾಡು ಕೂಟ, ವಿಶೇಷ ಪೂಜೆ, ಭಜನಾ ಕಾರ್ಯಕ್ರಮನಡೆಯಿತು.ಬೆಳಿಗ್ಗೆಯಿಂದ ಮಧ್ಯಾಹ್ನ ಮಹಾಪೂಜೆ ತನಕ ಶ್ರೀ ಕ್ಷೇತ್ರದಲ್ಲಿ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.ಶ್ರೀ ಚನ್ನಕೇಶವ ಭಜನಾ ಸಂಘ, ಶ್ರೀ ಶಿವಶಂಕರಿ ಮಹಿಳಾ ಭಜನಾ ಮಂಡಳಿ ತೊಡಿಕಾನ, ಶ್ರೀ ಪಂಚಾಕ್ಷರಿ ಮಹಿಳಾ ಭಜನಾ ಮಂಡಳಿ ಸಂಪಾಜೆಯವರು ಭಜನಾ ಸೇವೆ ನಡೆಸಿಕೊಟ್ಟರು. ಮಹಾಪೂಜೆಯ ಬಳಿಕ ಅನ್ನಸಂತರ್ಪನೆ ನಡೆಯಿತು.ತಹಶೀಲ್ದಾ‌ರ್ ಮಂಜುಳಾ, ಕಂದಾಯ ನಿರೀಕ್ಷೆಕರಾದ ಅವಿನ್ ರಂಗತ್ತಮಲೆ, ವ್ಯವಸ್ಥಾಪನಾ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಬಲಿವಾಡು ಕೂಟ,ಭಜನಾ ಸತ್ಸಂಗ ಕಾರ್ಯಕ್ರಮ Read More »

ವಿಷ‌ ಸೇವಿಸಿ‌ ಆಸ್ಪತ್ರೆಗೆ ದಾಖಲಾದ ಲಾರಿ ಮಾಲಕನಿಗೆ ದೈರ್ಯ ತುಂಬಿದ ಅರುಣ್ ಕುಮಾರ್ ಪುತ್ತಿಲ

ಫೈನಾನ್ಸ್ ನವರ ನಿರಂತರ ಕಿರುಕುಳದಿಂದ ನೊಂದು ವಿಷ ಸೇವಿಸಿದ ಮಾವಿನಕಟ್ಟೆಯ ಭಾನುಪ್ರಕಾಶ್ ರವರನ್ನು ಪುತ್ತೂರಿನ ಅರುಣ್ ಕುಮಾ‌ರ್ ಪುತ್ತಿಲ ಭೇಟಿ ಮಾಡಿ ಸಾಂತ್ವನ ಹೇಳಿರುವ ಘಟನೆ ವರದಿಯಾಗಿದೆ‌.ಅವರು ಶುಕ್ರವಾರ ಸಂಜೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಭಾನುಪ್ರಕಾಶ್ ರವರಿಗೆ ಧೈರ್ಯ ಅವರಿಗೆ ದೈರ್ಯ ತುಂಬಿದ್ದಾರೆ.ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಲ್ಲು, ಹೊಯಿಗೆ ಗಳಿಗೆ ನಿರ್ಬಂಧ ಹೇರಿ ಅನೇಕ ಕುಟುಂಬಗಳು ಬೀದಿ ಪಾಲು ಆಗುವಂತೆ ಸರಕಾರ ಮಾಡಿದೆ. ಅನೇಕ ಕಾರ್ಮಿಕ ವರ್ಗಕ್ಕೆ ಕೆಲಸ ಇಲ್ಲದಂತಾಗಿದೆ. ಜೀವನ ನಿರ್ವಹಣೆಗಾಗಿ ಲಾರಿಯಲ್ಲಿ

ವಿಷ‌ ಸೇವಿಸಿ‌ ಆಸ್ಪತ್ರೆಗೆ ದಾಖಲಾದ ಲಾರಿ ಮಾಲಕನಿಗೆ ದೈರ್ಯ ತುಂಬಿದ ಅರುಣ್ ಕುಮಾರ್ ಪುತ್ತಿಲ Read More »

ನಾಳೆ(ಸೆ.13) ಪ್ರವಾದಿ ಮುಸ್ತಫಾರ 1500ನೇ ಜನ್ಮ ದಿನಾಚರಣೆ ಮಾಸಾಚರಣೆ ಪ್ರಯುಕ್ತ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ

ಸಕಲ ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯ ಬೆಳಕಾಗಿ ಬಂದ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮದಿನ ಮಾಸಾಚರಣೆ ಅಂಗವಾಗಿ ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ವತಿಯಿಂದ ವರ್ಷಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥ ಮತ್ತು ಅರಿಯಿರಿ ಮನುಕುಲದ ಪ್ರವಾದಿಯನ್ನ ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮ ನಾಳೆ ಸುಳ್ಯದಲ್ಲಿ ನಡೆಯಲಿದೆ ಎಂದು ಸಮಿತಿ ಸಂಚಾಲಕ ಉಮ್ಮರ್ ಹಾಗೂ ಕೋಶಧಿಕಾರಿ ಉನ್ನೈಸ್ ಪೆರಾಜೆ ತಿಳಿಸಿದ್ದಾರೆ.ಸುಳ್ಯ

ನಾಳೆ(ಸೆ.13) ಪ್ರವಾದಿ ಮುಸ್ತಫಾರ 1500ನೇ ಜನ್ಮ ದಿನಾಚರಣೆ ಮಾಸಾಚರಣೆ ಪ್ರಯುಕ್ತ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ Read More »

ಸಮೀಕ್ಷೆಯಲ್ಲಿ ಅರೆಭಾಷೆ ಎಂದು ನಮೂದಿಸಿ: ಸದಾನಂದ ಮಾವಜಿ

ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ವೇಳೆ ಅರೆಭಾಷೆ ಮಾತನಾಡುexವವರು ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂಬುದಾಗಿ ನಮೂದಿಸಬೇಕು, ಇದರಿಂದ ಅರೆಭಾಷೆ ಮಾತನಾಡುವವರ ಸಂಖ್ಯೆ ಹಾಗೂ ನಿಖರ ಮಾಹಿತಿ ಪಡೆಯಲು ಸಾಧ್ಯ ಎಂಬುದಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ತಿಳಿಸಿದರು. ಅವರು ಇತ್ತೀಚೆಗೆ ಅಕಾಡೆಮಿ ಹಮ್ಮಿಕೊಂಡ ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗರ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

ಸಮೀಕ್ಷೆಯಲ್ಲಿ ಅರೆಭಾಷೆ ಎಂದು ನಮೂದಿಸಿ: ಸದಾನಂದ ಮಾವಜಿ Read More »

ಮುಂದಿನ ಮಳೆಗಾಲಕ್ಕೆ ಮೊದಲು ಸುಳ್ಯಕ್ಕೆ ಅತೀ ಅಗತ್ಯವಾಗಿರುವ 110 ಕೆ.ವಿ ವಿದ್ಯುತ್ ಲೈನ್ ಹಾಗೂ ಸಬ್ ಸ್ಟೇಷನ್ ಚಾಲೂ ಆಗಲು ಪ್ರಯತ್ನ : ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಭರವಸೆ

ಸುಳ್ಯಕ್ಕೆ ಅತೀ ಅಗತ್ಯವಾಗಿರುವ ೧೧೦ಕೆವಿ ಸಬ್‌ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಶೀಘ್ರ ಮುಗಿಸಿ ಮುಂದಿನ ಮಳೆಗಾಲಕ್ಕೆ ಮುನ್ನ ಲೈನ್ ಚಾಲೂ ಆಗಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಹೇಳಿದರು.ಅವರು ಸೆ. 11ರಂದು ಸರಕಾರಿ ಕಚೇರಿಗಳಿಗೆ ಭೇಟಿನೀಡಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಅಧಿಕಾರಿಗಳಿಗೆ ತಿಳಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.ಸುಳ್ಯಕ್ಕೆ ಲೈನ್ ಹಾದು ಹೋಗುವ ಮಾರ್ಗದಲ್ಲಿ ಟವರ್ ನಿರ್ಮಾಣದ ಸ್ಥಳದ ಸರ್ವೆ ನಡೆಸಿ, ನಕ್ಷೆ ತಯಾರಿಸಿ ಪರಿಹಾರ ನೀಡಿ ಟವರ್ ನಿರ್ಮಾಣ ಕಾಮಗಾರಿ ವೇಗ

ಮುಂದಿನ ಮಳೆಗಾಲಕ್ಕೆ ಮೊದಲು ಸುಳ್ಯಕ್ಕೆ ಅತೀ ಅಗತ್ಯವಾಗಿರುವ 110 ಕೆ.ವಿ ವಿದ್ಯುತ್ ಲೈನ್ ಹಾಗೂ ಸಬ್ ಸ್ಟೇಷನ್ ಚಾಲೂ ಆಗಲು ಪ್ರಯತ್ನ : ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ಭರವಸೆ Read More »

ಸುಳ್ಯ ದಸರಾ ಉತ್ಸವ-ಶಾರದಾಂಬ ಸಮೂಹ ಸಮಿತಿಗಳ ಪೂರ್ವ ಭಾವಿ ಸಭೆ

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ದಸರಾ ಉತ್ಸವ ಸಮಿತಿ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತುಶಾರದಾಂಬಾ ಸಮೂಹ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರ ಸಭೆ ಸೆ. 10ರಂದು ಸಂಜೆ ನಡೆಯಿತು. ವಿಶ್ವ ವಿಖ್ಯಾತ ಮೈಸೂರು ದಸರಾ, ಮಡಿಕೇರಿ ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಸುಳ್ಯ ದಸರಾ ನಡೆಯುವಂತಾಗಬೇಕು ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಸುಳ್ಯ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷರಾದ

ಸುಳ್ಯ ದಸರಾ ಉತ್ಸವ-ಶಾರದಾಂಬ ಸಮೂಹ ಸಮಿತಿಗಳ ಪೂರ್ವ ಭಾವಿ ಸಭೆ Read More »

ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ವಾರ್ಷಿಕ ಮಹಾಸಭೆ

ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ಮಾಧುರಿ ಸೌಧ ಸಭಾಂಗಣ ಪುತ್ತೂರುನಲ್ಲಿ ಸಂಘದ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಟಾರ್ ಇವರ ಅಧ್ಯಕ್ಷತೆಯಲ್ಲಿ ಸೆ. 11 ರಂದು ನಡೆಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಪಿ ವರದಿ ವಾಚಿಸಿದರು. ದಕ್ಷಿತಾ ಬಿ. ಕೆ ಯವರು ಪ್ರಾರ್ಥಿಸಿದರು.2024-25ನೇ ಸಾಲಿನ ಆರ್ಥಿಕ ವರ್ಷದ ವ್ಯವಹಾರ 3.5ಕೋಟಿ ಹೊಂದಿದ್ದು, ಅಲ್ಲದೆ 1.16 ಲಕ್ಷ ಕೆ.ಜಿ ಜೇನು ಮಾರಾಟ ಮಾಡಲಾಗಿದೆ. ಸಂಸ್ಥೆಯು ರೂ 97.22 ಲಕ್ಷ ವ್ಯವಹಾರ ಲಾಭಗಳಿಸಿದೆ. ರೂ

ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ವಾರ್ಷಿಕ ಮಹಾಸಭೆ Read More »

ಐವರ್ನಾಡು : ಯುವಕ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ ತಾಲೂಕಿಮ ಐವರ್ನಾಡು ಗ್ರಾಮದ ದೇವರಕಾನದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11ರಂದು ಸಂಜೆ ನಡೆದಿದೆ.ತೀರ್ಥಪ್ರಸಾದ್ ಕುಳ್ಳಂಪಾಡಿ (30)ಎಂಬವರು ಮನೆಯ ಹಿಂಬದಿಯಲ್ಲಿ ಸೀರೆಯ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇವರು ಕೆಲ ಸಮಯದ ಹಿಂದೆ ಬೆಳ್ಳಾರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.

ಐವರ್ನಾಡು : ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಅರಂತೋಡು ಬಳಿ ಕಾರು ತಡೆಬೆಲಿಗೆ ಡಿಕ್ಕಿ ಹೊಡೆದು ಅಪಾಯದಿಂದ ಪ್ರಯಾಣಿಕರು ಪಾರು

ಮಡಿಕೇರಿಯಿಂದ ಕಾಸರಗೋಡು ತೆರಳುತ್ತಿದ್ದ ಕಿಗರ್ ಕಾರು ಅರಂತೋಡು ಬಳಿ ಕೊಡೆಂಕೇರಿ ಸಮೀಪ ರಸ್ತೆಯ ತಡೆ ಬೇಲಿಗೆ ಕಾರು ಗುದ್ದಿ ಪ್ರಯಾಣಿಕರು ಪಾರಾಗಿದ್ದ ಘಟನೆ ನಡೆದಿದೆ.ಕಾರಿನ ಮುಂಭಾಗ ಜಖಂ ಆಗಿದೆ ಎಂದುಬ್ತಿಲಿದು ಬಂದಿದೆ.

ಅರಂತೋಡು ಬಳಿ ಕಾರು ತಡೆಬೆಲಿಗೆ ಡಿಕ್ಕಿ ಹೊಡೆದು ಅಪಾಯದಿಂದ ಪ್ರಯಾಣಿಕರು ಪಾರು Read More »

error: Content is protected !!
Scroll to Top