Uncategorized

ನಾಳೆ (ಆ.3) ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ

ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ ಈ ಬಾರಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವು ನಾಳೆ (ಆ.3ರಂದು) ಸುಳ್ಯದ ಕೋಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಮಕ್ಕಳು ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲಾ ವಯೋ ಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಆ ಮೂಲಕ ಈ ಬಾರಿಯ ಆಟಿ […]

ನಾಳೆ (ಆ.3) ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ Read More »

ಕಾರು ಬೈಕ್ ಅಪಘಾತದಲ್ಲಿ ಪೆರುವಾಜೆಯ ವ್ಯಕ್ತಿ ಸಾವು

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್‌ ಸವಾರ ಸುಳ್ಯ ತಾಲೂಕಿನ ವ್ಯಕ್ತಿ ಮೃತಪಟ್ಟ ಘಟನೆ ಕೊಡಗಿನ ಆನೆಕಾಡು ಬಳಿ ಇಂದು ಸಂಭವಿಸಿದೆ. ಬೈಕ್‌ ಸವಾರ ಪೆರುವಾಜೆಯ ಕಾರ್ತಿಕ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯಿತು.ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಡಿಕ್ಕಿ ಹೊಡೆದ ಬಳಿಕ ಚರಂಡಿಯೊಳಕ್ಕಾಗಿ ಕಾಡಿನೊಳಗೆ ಕಾರು ಸಾಗಿತ್ತು ಎಂದು ತಿಳಿದುಬಂದಿದೆ.

ಕಾರು ಬೈಕ್ ಅಪಘಾತದಲ್ಲಿ ಪೆರುವಾಜೆಯ ವ್ಯಕ್ತಿ ಸಾವು Read More »

ಆ.10 : ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮ ಆ. 10ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆ.2 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಬೆಳಿಗ್ಗೆ 10 ಗಂಟೆಗೆ ಪ್ರಗತಿಪರ ಕೃಷಿಕ ಎ.ಆರ್.ಗಂಗಾಧರ ಗೌಡ ಅಡ್ಕಾರುರವರು

ಆ.10 : ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ Read More »

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ

ಕಾಡುಕೋಣ ತಿವಿದು ರೈತರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಜಾಲ್ಸೂರಿನಿಂದ ವರದಿಯಾಗಿದೆ.ಜಾಲ್ಸೂರು ಗ್ರಾನದ ರವಿಶಂಕರ ಭಟ್‌ ಅವರು ಕಾಡುಕೋಣ ತಿವಿದು ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.ಜಾಲ್ಲೂರು ಗ್ರಾಮದ ನಂಗಾರು ಎಂಬಲ್ಲಿ ಇದೀಗ ಸಂಭವಿಸಿದೆ.ಜಾಲ್ಲೂರಿನ ನಂಗಾರು ರವಿಶಂಕರ ಭಟ್‌ರವರು ತನ್ನ ಮನೆಯ ತೋಟದಲ್ಲಿರುವಾಗ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗುತ್ತಿದೆಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ Read More »

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು

ಸುಳ್ಯ ತಾಲೂಕಿನ ಅರಂತೋಡು ಗ್ತಾಮದ ಉಳುವಾರು ರಮೇಶ ಅವರ ಪತ್ನಿ ನಳೀನಿ(51)ಶಂಕಿತ ಇಲಿ ಜ್ವರದಿಂದ ಜು.31ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಪತಿ ರಮೇಶ್ ಸೇರಿದಂತೆ ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು Read More »

ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಮಹಿಳೆಯ ಬಂಧನ

ಬೆಂಗಳೂರಿನಲ್ಲಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ 30 ವರ್ಷದ ಮಹಿಳೆಯನ್ನು ಎ.ಟಿ.ಎಸ್ ಪೊಲೀಸರು ಬಂಧಿಸಿದ್ದಾರೆ.ಶಂಕಿತ ಆರೋಪಿ ಶಮಾ ಪರ್ವೀನ್ ಬಂಧಿತ ಆರೋಪಿ.ಈಕೆ ಜಾರ್ಖಂಡ್ ಮೂಲದವಳಾಗಿದ್ದು, ಬೆಂಗಳೂರಿನ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.ಭಯೋತ್ಪಾದನೆಯ ಕಡೆಗೆ ಯುವಕರನ್ನು ಸೆಳೆಯುವುದಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡಲಾಗುತ್ತಿದ್ದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪ ಶಮಾ ಪರ್ವೀನ್ ಮೇಲಿದೆ.

ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಮಹಿಳೆಯ ಬಂಧನ Read More »

ನಾಪತ್ತೆಯಾದ ಯುವಕನ ದ್ವಿಚಕ್ರ ವಾಹನ,ಮೊಬೈಲ್ ಪೋನ್ ಪತ್ತೆ

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಡೇಶಿವಾಲಯ ಗ್ರಾಮದ ಕೊರತಿಗುರಿಯ ಯುವಕನೊರ್ವ ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆಯ ಜಕ್ರಿಬೆಟ್ಟು ಡ್ಯಾಂ ಬಳಿ ಅನಾಥವಾಗಿ ಪತ್ತೆಯಾಗಿದೆ.ಕಡೇಶಿವಾಲಯ ಗ್ರಾಮದ ಜಗದೀಶ್ ಆಚಾರ್ಯ ಅವರ ಪುತ್ರ ಹೇಮಂತ್ ಆಚಾರ್ಯ (28) ಜುಲೈ 28 ರಂದು ಫರಂಗಿಪೇಟೆಗೆ ಕೆಲಸಕ್ಕೆಂದು ತೆರಳಿದ ನಂತರ ನಾಪತ್ತೆಯಾಗಿದ್ದರು. ಆತನಿಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು ಜುಲೈ 29 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಪತ್ತೆಯಾದ ಯುವಕನ ದ್ವಿಚಕ್ರ ವಾಹನ,ಮೊಬೈಲ್ ಪೋನ್ ಪತ್ತೆ Read More »

ಅರಂತೋಡು : ಮನೆಗೆ ಮರ ಬಿದ್ದು ಹಾನಿ

ಅರಂತೋಡು ಕಲ್ಲಗದ್ದೆ ಸುಧಾಕರ ರವರ ಮನೆಗೆ ರಾತ್ರಿ ಬೀಸಿದ ಬಾರಿ ಗಾಳಿಯಿಂದ ಹಿಂಬದಿ ಇರುವ ಮರ ಮನೆ ಮೇಲೆ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಪಿಡಿಒ ಜಯ ಪ್ರಕಾಶ್,ಗ್ರಾಮ ಲೆಕ್ಕಾಧಿಕಾರಿ ಶರತ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಂತೋಡು : ಮನೆಗೆ ಮರ ಬಿದ್ದು ಹಾನಿ Read More »

ಅರಂತೋಡು ಶಾದಿ ಮಹಲ್ ಬಳಿ ಭಾರಿ ಗಾತ್ರದ ಮರಬಿದ್ದು ರಸ್ತೆ ತಡೆ

ಅರಂತೋಡು ಉದಯನಗರ ಎಂಬಲ್ಲಿ ಹಾಸ್ಟೆಲ್ ಬಳಿರುವ ಬ್ರಹತ್ ಮರವೊಂದು ರಾತ್ರಿ ಬೀಸಿದ ಬಾರಿ ಗಾಳಿಗೆ ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡ ಸಮೀಪ ಬಿದ್ದು ರಸ್ತೆಗೆ ತಡೆ ಉಂಟಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಯಾಗಿದೆ. ತಕ್ಷಣವೇ ಶಾದಿ ಮಹಲ್ ಪಕ್ಕದ ಮನೆಯವರು ಮಜೀದ್ ಸಿಟಿ ಮೆಡಿಕಲ್ಸ್ ರವರಿಗೆ ತಿಳಿಸಿದರು.ತೆರವು ಗೊಳಿಸುವ ಕಾರ್ಯದಲ್ಲಿ ಖಾದರ್ ಮೊಟ್ಟoಗಾರ್, ನವಾಝ್,ಖಾದರ್, ಯು. ಎಸ್ ಜಿ ಶಾಮಿಯಾನ ಮನೀಶ್ ಉಳುವಾರು,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್, ಸುಕುಮಾರ ಉಳುವಾರು,

ಅರಂತೋಡು ಶಾದಿ ಮಹಲ್ ಬಳಿ ಭಾರಿ ಗಾತ್ರದ ಮರಬಿದ್ದು ರಸ್ತೆ ತಡೆ Read More »

ಧರ್ಮಸ್ಥಳದಲ್ಲಿ ಅನಾಮಧೇಯ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಕಾರ್ಯಾಚರಣೆ ಅಂತ್ಯ

ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ವರು ಗುರುತಿಸಿದ ಮೊದಲ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಅಧಿಕಾರಿಗಳು ಅಂತ್ಯಗೊಳಿಸಿದ್ದಾರೆ. ಆ ವ್ಯಕ್ತಿನ ತೋರಿಸಿದ 13 ಸ್ಥಳಗಳ ಪೈಕಿ ಒಂದನೇ ಸ್ಥಳವನ್ನು ಮೊದಲು ಜನರ ಸಹಾಯದಿಂದ 4 ಅಡಿ ಅಗೆಸಲಾಗಿದ್ದು, ಏನೂ ಸಿಗದಿದ್ದಾಗ ಆತನ ಮನವಿ ಮೇರೆಗೆ ಹಿಟಾಚಿ ಮೂಲಕ 15 ಅಡಿ ಅಗಲ, 8 ಅಡಿ ಆಳ ಅಗೆಸಲಾಯಿತು. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಶ್ವಾನದಳ ಸ್ಥಳ ಪರಿಶೀಲಿಸಿದರೂ ಯಾವುದೇ ಕುರುಹು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಧರ್ಮಸ್ಥಳದಲ್ಲಿ ಅನಾಮಧೇಯ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಕಾರ್ಯಾಚರಣೆ ಅಂತ್ಯ Read More »

error: Content is protected !!
Scroll to Top