Uncategorized

ಭಾರೀ ಮಳೆ ಹಿನ್ನಲೆ ಶಾಲಾ ಕಾಲೇಜಿಗಳಿಗೆ ರಜೆ ಘೋಷಣೆ

ಬಾರೀ ಮಳೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗಳು ಆದೇಶ ಮಾಡಿದ್ದಾರೆ.ಜೂ.15ರಂದು ಸಂಜೆ ಹೊರಡಿಸಿದ ಆದೇಶದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕು ಹೊರತು ಪಡಿಸಿ ಜಿಲ್ಲೆಯ ಇತರ ತಾಲೂಕಿಗೆ ರಜೆ ಎಂದು ಆದೇಶ ಮಾಡಲಾಗಿತ್ತು.ಇಂದುಬೆಳಗ್ಗೆ ಪರಿಷ್ಕೃತ ಆದೇಶ ಮಾಡಿದ್ದು ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಿಸಿ ಆದೇಶ ಮಾಡಿದ್ದಾರೆ.

ಭಾರೀ ಮಳೆ ಹಿನ್ನಲೆ ಶಾಲಾ ಕಾಲೇಜಿಗಳಿಗೆ ರಜೆ ಘೋಷಣೆ Read More »

ಅರಂತೋಡು : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಸಂಪಾಜೆ ವಲಯದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಭೆಯನ್ನು. ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ತೀರ್ಥರಾಮ ಅಡ್ಕಬಳೆ ಇವರ ಅಧ್ಯಕ್ಷತೆಯಲ್ಲಿ. ಅರಂತೋಡು ಸಿರಿ ಸೌದ ಸಭಾಂಗಣದಲ್ಲಿ ನಡೆಲಾಯಿತು.ಈ ಸಭೆಯಲ್ಲಿ ಪ್ರಾರ್ಥನೆಯನ್ನು ಭಾರತಿ ಮರ್ಕಂಜ ಅವರು ಮಾಡಿದರು. ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಅರಂತೋಡಿನ ಅಧ್ಯಕ್ಷರಾದ K R ಪದ್ಮನಾಭ ರವರು ದೀಪ ಪ್ರಜ್ವಲಿಸುವ ಮುಖೇನ ಚಾಲನೆ ನೀಡಿದರು. ಈ ಸಭೆಯಲ್ಲಿ ಸುಳ್ಯ ತಾಲೂಕಿನ

ಅರಂತೋಡು : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆ Read More »

ಅರಂತೋಡು : ಕಾಡಾನೆಗಳು ತೋಟಕ್ಕೆ ನುಗ್ಗಿ ಕ್ರಷಿ ನಾಶ

ಅರಂತೋಡು ಗ್ರಾಮದ ಉಳುವಾರು ಎಲ್ಪುಕಜೆ ಪ್ರವೀಣ . ಯು.ಎಲ್. ಅವರ ತೋಟಕ್ಕೆ ಆನೆ ಬಂದು ಕೃಷಿ ಹಾನಿ ಮಾಡಿವೆ.ಬಾಳೆ,ಅಡಿಕೆ ಇತರ ಕ್ರಷಿ ಬೆಳೆಗಳನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿವೆ.

ಅರಂತೋಡು : ಕಾಡಾನೆಗಳು ತೋಟಕ್ಕೆ ನುಗ್ಗಿ ಕ್ರಷಿ ನಾಶ Read More »

ಹೃದಯಾಘಾತದಿಂದ ಪೊಲೀಸ್ ನಿಧನ

ಪುತ್ತೂರು ಸಂಚಾರ ಪೊಲೀಸ್ ಠಾಣೆ ಹೆಡ್‌ಕಾನ್ನೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಳ್ಯ ತಾಲೂಕಿನ ಗೂನಡ್ಕದ ಶಿವ ಪ್ರಸಾದ್(೫೧ )ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು.ಶಿವಪ್ರಸಾದ್ ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್‌ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಮೃತರು ಪತ್ನಿ ಸುಲೋಚನಾ, ಪುತ್ರಿಯರಾದ ರಮ್ಯಾ, ಅರ್ಚನಾ, ಪುತ್ರ ತೇಜಸ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಪೊಲೀಸ್ ನಿಧನ Read More »

ಬೆಳ್ಳಿ ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ. ಕೆ.ವಿ ರೇಣುಕಾಪ್ರಸಾದ್ ಮತ್ತು ಕುಟುಂಬದವರು ಬೆಳ್ಳಿ ರಥ ನೀಡಲಿರುವ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ ಜೂ. 14 ರಂದು ನಡೆಯಿತು.ಇಂದು ದೇವಾಲಯದಲ್ಲಿ ಶಾಸ್ತೋಕ್ತ ವಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರಿದ್ದು, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತಿತರರು ಅನುಮತಿ ಪತ್ರವನ್ನು ಹಸ್ತಾಂತರಿಸಿದರು. ನಂತರ ವೀಳ್ಯ ನೀಡಿಕೆ ನಡೆಯಿತು.ಭರತ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ಮೋಹನ್

ಬೆಳ್ಳಿ ರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ Read More »

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ಮಂಗಳೂರಿಗೆ ಆಗಮಿಸಿದ ಎನ್.ಐ.ಎ ತಂಡ

ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದ್ದು, ಇದೀಗ ಅಧಿಕಾರಿಗಳ ತಂಡ ಮಂಗಳೂರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ.ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಡಿಎಸ್ಪಿ ಪವನ್ ಕುಮಾರ್ ನೇತೃತ್ವದ ಎನ್‌ಐಎ ತಂಡ ನಡೆಸುತ್ತಿದ್ದು, ಅದರಂತೆ ಇಂದು ಬೆಂಗಳೂರಿನಿಂದ ಗಮಿಸಿದ ತಂಡ ಮಂಗಳೂರು ಸಿಸಿಬಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿವೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ಮಂಗಳೂರಿಗೆ ಆಗಮಿಸಿದ ಎನ್.ಐ.ಎ ತಂಡ Read More »

ಸೀನಿಯರ್ ಪ್ರೋಜೆಕ್ಟ್ ಆಫೀಸರ್ ಆಗಿ ಮೋಹಿನಿ ವಿಶ್ವನಾಥ್ (ನಿಶಾ) ನೇಮಕ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಇದರ ದಕ್ಷಿಣ ಕನ್ನಡ, ಉಡುಪಿ, ಕೊಡಗು ಈ ಮೂರು ಜಿಲ್ಲೆಗಳಿಗೆ ಸಂಸ್ಥೆಯು ನಡೆಸಿದ ಲಿಖಿತ ಮತ್ತು ಮೌಖಕ ಪರೀಕ್ಷೆಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಕೃಷಿ ಸಖಿ ಎಂದು ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದ ಮೋಹಿನಿ ವಿಶ್ವನಾಥ್ (ನಿಶಾ) ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಸೀನಿಯರ್ ಪ್ರೋಜೆಕ್ಟ್ ಆಫೀಸರ್ ಆಗಿ‌ ನೇಮಕ‌ಗೊಳಿಸಿದೆ.

ಸೀನಿಯರ್ ಪ್ರೋಜೆಕ್ಟ್ ಆಫೀಸರ್ ಆಗಿ ಮೋಹಿನಿ ವಿಶ್ವನಾಥ್ (ನಿಶಾ) ನೇಮಕ Read More »

ದೈವ ನರ್ತಕನ ಹೊಡೆದು ಕೊಲೆ

ಕಾಸರಗೋಡು ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ನರ್ತಕ. ಸತೀಶನ್ ಯಾನೆ ಬಿಜು (46) ಅವರ ಸಾವು ಕೊಲೆಯೆಂದು ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಯಾದ ಸ್ನೇಹಿತ ಚಿದಾನಂದನನ್ನು (32) ಪೊಲೀಸರು ಬಂಧಿಸಿದ್ದಾರೆ.ಚೋಮಣ್ಣ ಎಂಬವರ ಮನೆಯಲ್ಲಿ ಜೂ.9 ರಂದು ಚಿದಾನಂದ ಹಾಗೂ ಸತೀಶನ್‍ ಇಬ್ಬರು ಮದ್ಯ ಸೇವಿಸುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಸಂದರ್ಭ ಚಿದಾನಂದ ಸತೀಶನ್ ಅವರನ್ನು ಕೆಳಗೆ ತಳ್ಳಿದ್ದಾನೆ. ಸತೀಶನ್‍ ತಲೆಗೆ ಗಾಯವಾಗಿದೆ. ಸತೀಶನ್‍ ಮನೆಗೆ ಬಾರದ್ದನ್ನು ಕಂಡು

ದೈವ ನರ್ತಕನ ಹೊಡೆದು ಕೊಲೆ Read More »

ಸುಳ್ಯ : ಬಸ್ಸು ಟಿಪ್ಪರ್ ಅಪಘಾತ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 272ರಲ್ಲಿ ಸುಳ್ಯದ ಓಡಾಬೈ ನಲ್ಲಿ ಜೂ.14 ರಂದು ಮುಂಜಾನೆ ಕೆ ಎಸ್ ಆರ್ ಟಿ ಸಿ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ.ಸುಳ್ಯ ಕಡೆಗೆ ಬರುತ್ತಿದ್ದ ಬಸ್ ಹಾಗೂ ಸುಳ್ಯ ದಿಂದ ಪೈಚಾರ್ ಕಡೆಗೆ ಹೋಗುತ್ತಿದ್ದ ಟಿಪ್ಪರ್ ನಡುವೆ ಈ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸುಳ್ಯ : ಬಸ್ಸು ಟಿಪ್ಪರ್ ಅಪಘಾತ Read More »

ಒಂದು‌ ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು!

ಕಡಬ ತಾಲೂಕಿನ ರಾಮಕುಂಜ ಗ್ರಾಮದ ದೇರೆಜಾಲು ಮನೆಯ ಪ್ರವೀಣ ಎಂಬವರ ತೋಟದಲ್ಲಿ ಒಂದು ದೊಡ್ಡ ಗಾತ್ರದ ತೆಂಗಿನ ಕಾಯಿ ದೊರೆತ್ತಿದೆ. ಇದರ 1.620 ಗ್ರಾಮ್ ಇದೆ. ಒಂದು ಕೆ.ಜೆ ತೆಂಗಿನ ಕಾಯಿಗೆ ಅಂದಾಜು 70 ರೂಪಾಯಿ ಇದ್ದು, 1620 ಗ್ರಾಂ ತೆಂಗಿನ ಕಾಯಿಗೆ ಅಂದಾಜು 113 ರೂ. ಆಗುತ್ತದೆ.ಕೇವಲ ಒಂದು ತೆಂಗಿನ ಕಾಯಿ ಅಲ್ಲ… ಅವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಬೆಳೆಯುವ ಪ್ರತಿ ತೆಂಗಿನ ಕಾಯಿಗಳ ತೂಕವು ಸರಾಸರಿ ಅಂದಾಜು 1.5 ಕೆ.ಜಿ ಗಿಂತ ಅಧಿಕವಿರುತ್ತದೆ.ಕಳೆದ

ಒಂದು‌ ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು! Read More »

error: Content is protected !!
Scroll to Top