ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು
ಉಳ್ಳಾಲ: ಕೊಲ್ಯ ಕನೀರುತೋಟ ಸಮೀಪ ಶೇಂದಿ ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ತೆಂಗಿನ ಮರದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆಕೊಲ್ಯ ಕನೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ್ (46) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಯಶೋಧರ್ ಅವರು ಶುಕ್ರವಾರ ಬೆಳಗ್ಗೆ ತನ್ನ ಮನೆ ಬಳಿಯ ತೋಟವೊಂದರ ಬಳಿ ಮೂರ್ತೆದಾರಿಕೆ ನಡೆಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ನಡೆಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.ಯಶೋಧರ್ ಅವರು […]
ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು Read More »










