ವ್ಯಕ್ತಿಯನ್ನು ಮಚ್ಚಿಯಿಂದ ಕೊಚ್ಚಿ ಕೊಲೆ!
ವ್ಯಕ್ತಿಯೋರ್ವನನ್ನು ಮಚ್ಚಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೊಪ್ಪಳದ ತಾವರಗೇರಾ ಹಳೆ ಬಸ್ ನಿಲ್ದಾಣದ ಬೇಕರಿ ಮುಂದೆ ಮೇ 31ರ ಶನಿವಾರ ರಾತ್ರಿ ನಡೆದಿದೆ.ಚೆನ್ನಪ್ಪ ಹರಿಜನ್ (30) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.ಈ ಘಟನೆ ಹಿನ್ನಲೆಯಲ್ಲಿ ಜನರಲ್ಲಿ ಆತಂಕ ಮೂಡುವಂತಾಗಿದೆ.ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ. ಎಲ್.ಆರ್. ಅರಸಿದ್ದಿ, ಗಂಗಾವತಿ ಡಿಎಸ್ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ್ ಬಿಸನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿಯನ್ನು ಮಚ್ಚಿಯಿಂದ ಕೊಚ್ಚಿ ಕೊಲೆ! Read More »










