ಸುಳ್ಯ : ಚೆಂಬು ಗ್ರಾಮ ಪಂಚಾಯತ್ ನ ವಾಟರ್ ಮ್ಯಾನ್ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ನೀರಿನ ಟ್ಯಾಂಕಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ
ಯು.ಚೆಂಬು ಗ್ರಾಮದ ಮಾರ್ಪಡ್ಕ ನಿವಾಸಿ ಬೊಳುಗಲ್ಲು ಆನಂದ ರವರ ಪುತ್ರ ನಿತಿನ್ ( 26 ) ಮೃತಪಟ್ಟ ದುರ್ದೈವಿ . ಪಂಚಾಯತ್ ಟ್ಯಾಂಕ್ ನಿಂದ ನೀರು ಬಿಡಲು ತೆರಳಿದ ನಿತಿನ್ ಬಾರದೇ ಇದ್ದಾಗ ಹುಡುಕಿಕೊಂಡು ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ . ಮೃತರು ತಂದೆ , ತಾಯಿ , ಹಾಗೂ ಸಹೋದರಿಯನ್ನು ಅಗಲಿದ್ದಾರೆ . ಕೊಡಗು ಸಂಪಾಜೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ . ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮಡಿಕೇರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ .
ಕ