ಪುಸ್ತಕಗಳನ್ನು ಕೊಂಡು ಓದಿ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಇಲ್ಲಿಯ ಸ್ವಾಮಿಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 191 ಕೃತಿ ಮಾಲೆ ಸತ್ಯಮೇವ ಜಯತೇ ಇದರ ಬಿಡುಗಡೆ ಕಾರ್ಯಕ್ರಮ ಆಶ್ರಮದಲ್ಲಿ ನಡೆಯಿತು.
ಇಂಜಿನಿಯರ್ ಭರತ್ .ಪಿ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಎಲ್ಲಾರು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು.ನಾನು ಪುಸ್ತಕ ಓದುತ್ತೇನೆ.ಪುಸ್ತಕ ಓದಿದ ತಕ್ಷಣ ಸತ್ಯ ಎಂದು ತಿಳಿದುಕೊಳ್ಳಬಾರದು ನಾವು ಅದನ್ನು ವಿಮರ್ಶೆ ಮಾಡಬೇಕೆಂದು ಹೇಳಿದರು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಡಾಕ್ಟರ್ ಸಾಯಿ ಗೀತಾ ಮಾತನಾಡಿ ನಾವು ಸಮಾಜದಲ್ಲಿಯ ಒಳ್ಳೆಯ ವಿಚಾರಗಳನ್ನು ಮಾತ್ರ ಸ್ವೀಕರಿಸಬೇಕು.ಕೆಟ್ಟ ವಿಚಾರಗಳಿಂದ ದೂರ ಇರಬೇಕೆಂದು ಹೇಳಿದರು.
ಸುಳ್ಯ ಕೆವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೊಪೆಸರ್ ಡಾ.ಹರ್ಷವರ್ಧನ,ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ‌ ಪ್ರೊಸೆರ್ ಅನಿಲ್ ಬಿ.ವಿ ಪ್ರೊ.ರೇಖಾ,ಆಶ್ರಮದ ಟ್ರಸ್ಟಿ ಪ್ರಣವಿ,ಆಶ್ರಮದ ಹಿರಿಯ ವಿದ್ಯಾರ್ಥಿ ತೀರ್ಥೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವಾಮಿಗಳು ಮಕ್ಕಳಿಗೆ ಮಂತ್ರೋಪದೇಶ ಬೋಧಿಸಿದರು.ಭಜನಾ ಸತ್ಸಂಗ ನಡೆಯಿತು

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top