ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಸುಳ್ಯಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಡ್ಯಡ್ಕ ನಿವಾಸಿ ಅಣ್ಣ ದೊರೈ ಎಂದು ಗುರುತಿಸಲಾಗಿದೆ.
ದಿಲೀಪ್ ಜಿ.ಅರ್ ಪೊಲೀಸ್ ಉಪ ನಿರೀಕ್ಷಕರು ಸುಳ್ಯ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಅಣ್ಣದೊರೈ ಎಂಬವರ ಅಂಗಡಿಯ ಬಳಿ ತಲುಪಿದಾಗ ಅಂಗಡಿಯ ಎದುರು ಇಬ್ಬರು ಗಿರಾಕಿಗಳು ತಮ್ಮ ಕೈಗಳಲ್ಲಿ ಎರಡೆರಡು ಮದ್ಯದ ಪ್ಯಾಕೇಟ್ಗಳನ್ನು ಹಿಡಿದುಕೊಂಡಿದ್ದು, ಪೊಲೀಸರು ಜೀಪನ್ನು ಅಂಗಡಿಯ ಬಳಿ ನಿಲ್ಲಿಸಿ ಜೀಪಿನಿಂದ ಇಳಿದು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಗಿರಾಕಿಗಳು ಮದ್ಯದ ಪ್ಯಾಕೇಟ್ಗಳೊಂದಿಗೆ ಓಡಿ ಪರಾರಿಯಾದರು.
ಅವರುಗಳ ಬಗ್ಗೆ ಅಂಗಡಿಯಲ್ಲಿದ್ದ ಅಣ್ಣದೊರೈ ಬಳಿ ವಿಚಾರಿಸಿದ್ದಾಗ ಪರಿಚಯವಿಲ್ಲವೆಂದು ತಿಳಿಸಿದ್ದು, ಅಂಗಡಿಯ ಆಸುಪಾಸು ತಪಾಸಣೆ ನಡೆಸಿದ್ದಾಗ ಸ್ಥಳದಲ್ಲಿ Black Fort ಎಂದು ಬರೆದಿರುವ 500 ಎಂ ಎಲ್ನ ಬಿಯರ್ ಟಿನ್ ಬಾಟ್ಲಿಗಳು-20, (ಒಟ್ಟು ಮೌಲ್ಯ-2000/ರೂಪಾಯಿ) Royal Challengers ಎಂದು ಬರೆದಿರುವ 330 ಎಂ ಎಲ್ನ ಬಿಯರ್ ಬಾಟ್ಲಿಗಳು-21, (ಒಟ್ಟು ಮೌಲ್ಯ-1050/ರೂಪಾಯಿ) ಎರಡು ರಟ್ಟಿನ ಬಾಕ್ಸ್ಗಳಲ್ಲಿ Mysore Lancer ಎಂದು ಬರೆದಿರುವ 90 ಎಂ ಎಲ್ನ ವಿಸ್ಕಿ ಪ್ಯಾಕೇಟ್ಗಳು-144 (ಒಟ್ಟು ಮೌಲ್ಯ-5058/ರೂಪಾಯಿ) ಇರುವುದು ಪತ್ತೆಯಾಯಿತು. ಒಟ್ಟು ಮೌಲ್ಯ ರೂ 8498 ಮೌಲ್ಯದ ಅಕ್ರಮ ವಶಪಡಿಸಿಕೊಳ್ಳಾಯಿತು. ಆರೋಪಿಯನ್ನು ವಶಪಡಿಸಿಕೊಂಡು ಪಡೆದುಕೊಂಡು ಆರೋಪಿಯೊಂದಿಗೆ ಸುಳ್ಯ ಪೊಲೀಸ್ ಠಾಣೆ ಗೆ ಬಂದು ಅ.ಕ್ರ 19/2023 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.