ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಫೆ .11 ರಿಂದ ಫೆ .14 ರ ವರೆಗೆ ಜರಗಲಿದ್ದು , ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಜ .27 ರಂದು ನಡೆಯಿತು . ದೇವಸ್ಥಾನದ ಆಡಳಿತ ಧರ್ಮದರ್ಶಿ ಹೆಗ್ಗಡೆ ಶ್ರೀ ಪರಮೇಶ್ವರಯ್ಯ ಕಾಂಚೋಡು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು , ಜಾತ್ರೋತ್ಸವ ಸಮಿತಿ ಸಂಚಾಲಕರು , ಪದಾಧಿಕಾರಿಗಳು , ಸದಸ್ಯರು , ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .