ಸುಳ್ಯ : ಅಜ್ಜಾವರಗಾಮನ ಮೇನಾಲ ನಿವಾಸಿ ಅಬ್ದುಲ್ಲ ( ಅಂದ ) ( 51.ವ ) ಎಂಬವರು ಜ .29 ರಂದು ಸಂಜೆ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ಕಾಣದೆ ಇದ್ದಾಗ ಮನೆಯವರು ಅವರನ್ನು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದರು. ಕೆರೆಯ ಸಮೀಪ ಅವರು ಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಮೃತ ದೇಹ ನೀರಿನಲ್ಲಿ ತೇಲುತ್ತಿತ್ತು.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.