ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಶ್ರೀ ಮಂಜುನಾಥೇಶ್ವತರ ದೇವಳದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ದೇವಳದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ , ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಸವಿತಾ ಚಾಕಟೆಡ್ಕ ಉಪಾಧ್ಯಕ್ಷೆ ತ್ರಿವೇಣಿ ವಿಶ್ವೇಶ್ವರ , ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ . ಕೂಸಪ್ಪ ಗೌಡ ಮುಗುಪ್ಪು ಭಾಗವಹಿಸಿದ್ದರು . 900 ಹಿರಿಯ ಯಕ್ಷಗಾನ ಕಲಾವಿದ ಮಲೆಯಾಳ ಗೋಪಾಲಕೃಷ್ಣ ಭಟ್ , ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ವಸಂತಿ ಎಸ್.ಭಟ್ , ಬೆಳ್ಳಾರೆಯ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಬೇಬಿ ಸಿ.ಸಿ , ಮೆಸ್ಕಾಂ ಸಿಬ್ಬಂದಿ ವಿಕ್ರಂ ಶಿರೂರು , ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಬಾಳಿಲ ಮುಪ್ಪೇರ್ಯ , ದೈವದ ಹಿರಿಯ ಸೇವಾಕರ್ತರಾದ ಸೂರಪ್ಪ ಗೌಡ ಕೊಳೆಂಜಿಕೋಡಿ , ನಿವೃತ್ತ ಹಿರಿಯ ಅಂಚೆಪಾಲಕರಾದ ರಾಧಾಕೃಷ್ಣ ಕಾಯಾರ , ಇವರಿಗೆ ಗೌರವಾರ್ಪಣೆ ನಡೆಯಿತು . ರಾಜೇಶ್ ಸುವರ್ಣ ಅಯ್ಯನಕಟ್ಟೆ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು . ಜಾತ್ರೋತ್ಸವ ಸಮಿತಿ ನಿಕಟಪೂರ್ವ ಅಧ್ಯಕ್ಷ ರವೀಂದ್ರ ರೈ ಟಪ್ಪಾಲುಕಟ್ಟೆ ವಂದಿಸಿದರು.