ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರ ಪರವಾಗಿ ಚುನಾವಣಾ ಪ್ರಚಾರ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಅರಂತೋಡಿನಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ್,ಕೆಪಿಸಿಸಿ ವಕ್ತಾರ ಟಿ.ಎಮ್.ಶಹೀದ್ ತೆಕ್ಕಿಲ್, ಮೊದಲಾದವರು ಮಾತನಾಡಿ ಅರಂತೋಡಿನಲ್ಲಿ ಹೆಚ್ಚು ಮತ ಬಂದಲ್ಲಿ ಅರಂತೋಡು ಗ್ರಾಮಕ್ಕೆ 10 ಕೋಟಿ ಅನುದಾನ ತರಿಸುವ ಭರವಸೆ ನೀಡಿದರು ಸುಳ್ಯ ವಿಧಾನಸಭಾ ಚುನಾವಣಾ ಉಸ್ತುವಾರಿ ವೆಂಕಪ್ಪ ಗೌಡ,ಸುಳ್ಯ ವಿಧಾನ ಸಭಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ಕೆ.ಎಮ್.ಮುಸ್ತಫಾ ,ಕೆಪೆಕ್ ಮಾಜಿ ನಿರ್ದೇಶಕ ಪಿ.ಎ.ಮಹಮ್ಮದ್ ,ಪುತ್ತೂರು ಬ್ಲಾಕ್ ಸಮಾಜಿಕ ಜಾಲತಾಣ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ , ತಾಜುದ್ದೀನ್ ಅರಂತೋಡು,ಸದಾನಂದ ಅಡ್ತಲೆ,ಜುಬೈರ್,ರಾಧಾಕೃಷ್ಣ ಮಾಡದಕಾನ,ಬಾಲಕೃಷ್ಣ ರೈ,ತಿಮ್ಮಯ್ಯ ಮೆತ್ತಡ್ಕ,ಶಂಕರ ನಾರಾಯಣ ಮುಂತಾದವರು ಇದ್ದರು.ಅರಂತೋಡು ಪೇಟೆಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.