ಸುಳ್ಯ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸುಳ್ಯ ದ. ಕ.ಇದರ ವತಿಯಿಂದಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜೂ. 4 ರಂದು ಪೂರ್ವಾಹ್ನ ಗಂಟೆ 7-30ರಿಂದ ಆರಂಭವಾಗಲಿದೆ ಎಂದು ತಾಲೂಕು ಪೂಜಾ ಸಮಿತಿ ಮುಖಂಡ ಗೋಪಾಲಕೃಷ್ಣ ಬೋರ್ಕರ್ ತಿಳಿಸಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ‘ಕಾರ್ತಿಕೇಯ ಸಭಾಭವನ’ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ . ಧಾರ್ಮಿಕ ಉಪನ್ಯಾಸವನ್ನು ಹಿಂದು ಫಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ನಡೆಸಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಬೋರ್ಕರ್ ಭಗವಾನ್ ಕನ್ಕ್ಷನ್ ಸುಳ್ಯ ಮುಖ್ಯ ಅತಿಥಿಳಾಗಿ ಶ್ರೀ ಎನ್. ಎ. ರಾಮಚಂದ್ರ ಮಾಜಿ ಅಧ್ಯಕ್ಷರು, ನಗರ ಪಂಚಾಯತ್ ಸುಳ್ಯ ಶ್ರೀ ಜಯರಾಮ ರೈ ಜಾಲ್ಲೂರು ಅಧ್ಯಕ್ಷರು, ವ್ಯವಸ್ಥಾಪನಾ ಸೇವಾ ಸಮಿತಿ,ಅಡ್ಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಶ್ರೀ ಕೇಶವಮೂರ್ತಿ ಹೆಬ್ಬಾರ್ ಅಧ್ಯಕ್ಷರು, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮಂಡೆಕೋಲು
ಶ್ರೀ ಹರೀಶ್ ರಾವ್ ಗಬ್ಬಲಡ್ಕ ಉಪಸ್ಥಿತರಿರುವವರು. ಈ ಸಂದರ್ಭದಲ್ಲಿ ಸುಧಾಕರ , ಸೂರ್ಯ ಮೊಗೇರ್ , ಶ್ಯಾಮ್ ಕುಮಾರ್ ಹೆಬ್ಬಾರ್ , ರಕ್ಷಿತ್ ಅಡ್ಕಾರ್ , ಪುಸ್ಪರಾಜ್ ಕೆ ಜಿ ಅರಂಬೂರ್ , ಶರತ್ ಉಬರಡ್ಕ ,ಕಿಶನ್ ಮತ್ತಿತರರು ಉಪಸ್ಥಿತರಿದ್ದರು.