ಬೆಳ್ಳಾರೆ, ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ
ಕಾರ್ಯ ವಿಭಾಗದ ವತಿಯಿಂದ ಗ್ರಾಮೀಣ ಸಮುದಾಯ
ಶಿಬಿರವನ್ನು ಉತ್ತರ ಕನ್ನಡ
ಜಿಲ್ಲೆಯ ಕುಮಟಾ ತಾಲೂಕಿನ ಊರುಕೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಊರುಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶಾನುಭಾಗ್ ಇವರು ‘ವಿದ್ಯಾರ್ಥಿ ಜೀವನದಲ್ಲಿ ಗ್ರಾಮೀಣ ಅಧ್ಯಯನ ಶಿಬಿರವು ಒಂದು ಗ್ರಾಮದ ಸಂಪ್ರದಾಯ, ಆಚಾರ ವಿಚಾರಗಳನ್ನು ಸ್ವಾಂಗೀಕರಣ ಮಾಡಲು ಸಹಕಾರಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಎಲ್ಲಾ ಸೌಕರ್ಯಗಳಿಗೆ ಹೊಂದಿಕೊಂಡು ಬಾಳುವುದರ ಜೊತೆಗೆ ಸರ್ವತೋಮುಖ ಬೆಳವಣಿಗೆ ಉಂಟಾಗುತ್ತದೆ’ಎಂದರು. ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅರ್ಚನಾ, ವಿದ್ಯಾರ್ಥಿಗಳಿಗೆ ಶಿಬಿರದ ಉದ್ದೇಶ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗಂಗಾಧರ ಪಟಗಾರ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.