ಸಂಪಾಜೆ: ಕಾಂಪೌಂಡ್ ಕುಸಿತಗೊಂಡು ಕೊಟ್ಟಿಗೆಗೆ ಹಾನಿ ಸಂಭವಿಸಿದ ಘಟನೆ ಸಂಪಾಜೆಯಿಂದ ವರದಿಯಾಗಿದೆ ಸಂಪಾಜೆ ಗ್ರಾಮದ ಅಶ್ರಫ್ ಟರ್ಲಿಯವರ ಕಾಂಪೌಂಡ್ ಮಳೆಗೆ ಕುಸಿತ. 2 ವರ್ಷದ ಹಿಂದೆ ಭೂ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಈ ಕಾಂಪೌಂಡ್ ಕೂಡ ಜರಿದು ಬಿದ್ದಿದ್ದು ಇದಕ್ಕೆ ಸರಕಾರದಿಂದ 4000 ರೂ ಪರಿಹಾರವೂ ದೊರಕಿತ್ತು. ಇದನ್ನು ಕೆಲ ತಿಂಗಳ ಹಿಂದೆ ಕಾಂಪೌಂಡ್ ನಿರ್ಮಾಣ ಮಾಡಲಾಯಿತು. ಆದರೆ ಇಂದು ಸುರಿದ ಮಳೆಗೆ ಕಾಂಪೌಂಡ್ ವಾಪಾಸ್ ಸಂಪೂರ್ಣ ಕುಸಿದಿದೆ.ಪರಿಣಾಮವಾಗಿ ಪಕ್ಕದ ಮನೆ ಹಾಗೂ ಕೊಟ್ಟಿಗೆ ಜಖಂಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ.