ಸಹಕಾರಿ ಬ್ಯಾಂಕ್ ಚುನಾವಣೆ: ಬಿಜೆಪಿ ಬೆಂಬಲಿತರಿಗೆ ಗೆಲುವು

ಪೆರಾಜೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆದಿದ್ದು ಎಲ್ಲ ಸ್ಥಾನಗಳನ್ನೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ.ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು ಅದರಲ್ಲಿ751 ಮತಗಳು ಚಲಾವಣೆಯಾಗಿವೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು 376 ಮತಗಳಿದ್ದು, 313 ಮತಗಳು ಚಲಾವಣೆಯಾಗಿದೆ.ಚುನಾವಣಾ ಫಲಿತಾಂಶ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಒಟ್ಟು 6 ಮಂದಿ ನಿರ್ದೇಶಕರುಗಳ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ 534 ಮತಗಳನ್ನು ಜಯರಾಮ ನಿಡ್ಯಮಲೆ 402 ಮತಗಳನ್ನು, ಧನಂಜಯ ಕೋಡಿ 346 ಮತಗಳನ್ನು, ಹೊನ್ನಪ್ಪ ಅಮೆಚೂರು 453 ಮತಗಳನ್ನು, ಸೀತಾರಾಮ ಕದಿಕಡ್ಕ 388 ಮತಗಳನ್ನು, ಅಶೋಕ ಪೆರುಮುಂಡ 478 ಮತಗಳನ್ನು ಪಡೆದುಕೊಂಡಿದ್ದಾರೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಪೆರುಮುಂಡ 308 ಮತಗಳನ್ನು, ದಯಾನಂದ ಪೆರುಮುಂಡ 310 ಮತಗಳನ್ನು, ಗೌತಮ್ ಎಂ.ಎಸ್. 170 ಮತಗಳನ್ನು, ಚಿದಾನಂದ ಪೀಚೆ 284 ಮತಗಳನ್ನು, ಜನಾರ್ದನ ನಾಯ್ಕ ನಿಡ್ಯಮಲೆ 168 ಮತಗಳನ್ನು, ಉಮೇಶ್ ಕುಂಬಳಚೇರಿ 210 ಮತಗಳನ್ನು, ಮತಗಳನ್ನು ಪಡೆದುಕೊಂಡಿದ್ದಾರೆ.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top