ಪಂಜ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪಂಜ ಸಮೀಪದ ಕರಿಕ್ಕಳದಿಂದ ವರದಿಯಾಗಿದೆ. ಕಳೆದ ಜೂ.25 ರಾತ್ರಿ ಘಟನೆ ಸಂಭವಿಸಿದ್ದು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ,ಪಂಜದ ಶಿವಕೃಪಾ ಮೋಟಾರ್ಸ್ ನಮೆಕಾನಿಕ್ ಭಾಸ್ಕರ ಗೌಡ ಮೃತಪಟ್ಟ ದುರ್ದೈವಿ. ಅವರು ಜೂ.25 ರಾತ್ರಿ10 ಗಂಟೆಗೆ ವೇಳೆಗೆ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.