ಸನಾತನ ಹಿಂದೂ ಪರಂಪರೆಯು ಅತ್ಯಂತ ಶ್ರೇಷ್ಠವಾದುದು. ಸಾಮಾಜಿಕ ಜವಬ್ದಾರಿಯ ಜೊತೆಗೆ ಧರ್ಮ ರಕ್ಷಣೆ ಸಮಾಜ ನಮ್ಮ ಆಧ್ಯತೆಯಾಗಬೇಕುಎಂದು ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಅವರು ಪುತ್ತಿಲ ಅಭಿಮಾನಿ ಬಳಗ ಸುಬ್ರಹ್ಮಣ್ಯ ಮತ್ತು ಪುತ್ತಿಲ ಪರಿವಾರ ಕುಕ್ಕೆ ಸುಬ್ರಹ್ಮಣ್ಯ ಆಶ್ರಯದಲ್ಲಿ ಸುಬ್ರಹ್ಮಣ್ಯದ ವನದುರ್ಗ ದೇವಿ ಸಭಾಭವನದಲ್ಲಿ ಜೂ.25 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಜಾಗೃತ ಸಮಾಜದ ನಿರ್ಮಾಣಕ್ಕೆ ಯುವ ಸಮಾಜ ಕಠಿಬದ್ಧವಾಗಬೇಕು. ಧರ್ಮವನ್ನು ಉಳಿಸುವ, ಹಿಂದುತ್ವವನ್ನು ಪ್ರತಿಪಾದಿಸುವ ಮತ್ತು ಹಿತ ಕಾರ್ಯವನ್ನು ನೆರವೇರಿಸುವ ಸಂಕಲ್ಪವನ್ನು ಯುವ ಜನಾಂಗ ಮಾಡಬೇಕು. ಧರ್ಮವು ಜೀವನಕ್ಕೆ ಸಂಸ್ಕಾರವನ್ನು ನೀಡಿದೆ.ಸಮಾಜಮುಖಿ ವ್ಯವಸ್ಥೆಯ ನಡುವೆ ಧರ್ಮ ಜಾಗೃತಿಯನ್ನು ನೆರವೇರಿಸುವ ಕಾರ್ಯವು ನಡೆಯುತ್ತಿದೆ.ಹಿಂದೂ ರಾಷ್ಟ್ರದ ಧ್ವನಿಯನ್ನು ಸಾಕಾರಗೊಳಿಸಬೇಕು. ಹಿಂದುತ್ವದ ಜೊತೆಗೆ ನಮ್ಮ ಸನಾತನ ಸಂಸ್ಕೃತಿ ಹಾಗೂ ವಿಚಾರಧಾರೆ ಸರ್ವರ ಹೃದಯದಲ್ಲಿ ಅನುಷ್ಠಾನವಾಗಬೇಕು ನಮ್ಮ ಸಂಸ್ಕೃತಿ ಸಂಸ್ಕಾರಗಳ ವಿಚಾರಧಾರೆಗಳು ನೂರಾರು ವರ್ಷಗಳ ಕಾಲ ಜಗತ್ತಿಗೆ ಮಾರ್ಗದರ್ಶನ ನೀಡುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು.ಧರ್ಮದ ಮೇಲೆ ಅಪಮಾನಗಳು, ಅವಮಾನಗಳು ಆದ ಸಂದರ್ಭದಲ್ಲಿ ಈ ಸಮಾಜಕ್ಕೆ ಶಕ್ತಿಯನ್ನು ಕೊಟ್ಟು ಮತ್ತೆ ಧರ್ಮವನ್ನು ಮೇಲಕ್ಕೆತ್ತುವುದರ ಮೂಲಕ ಹಿಂದುತ್ವದ ಪ್ರತಿಪಾದನೆ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಡೆಸುತ್ತಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಪುತ್ತಿಲ ಅಭಿಮಾನಿ ಬಳಗದ ಅಶೋಕ್ ಕುಮಾರ್ ಯೇನೆಕಲ್ಲು ವಹಿಸಿದ್ದರು. ಹಿರಿಯರಾದ ಹರೀಶ್ ಕಾಮತ್ ಸುಬ್ರಹ್ಮಣ್ಯ, ಪುತ್ತಿಲ ಪರಿವಾರದ ರಾಜೇಶ್ ಶೆಟ್ಟಿ, ಕಿರಣ್ ಕುಮಾರ್ ವೇದಿಕೆಯಲ್ಲಿದ್ದರು. ಪುತ್ತಿಲ ಅವರನ್ನು ಅಭಿಮಾನಿ ಬಳಗದಿಂದ ಗೌರವಿಸಲಾಯಿತು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.