ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಬೆಳ್ಳಂಪಾಡಿ ಗುಡ್ಡದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಯುವಕನೋರ್ವ ಆತ್ಮ ಹತ್ಯೆ ಮಾಡಿಕೊಂಡಿದ್ದು ಆತನನ್ನು ಅರಂತೋಡು ಗ್ರಾಮದ ಉರುಂಡೆ ದಿ.ಕೆಂಚಪ್ಪ ಗೌಡರ ಮಗ ರವಿನಾಥ( 34) ಎಂದು ಗುರುತಿಸಲಾಗಿದೆ.ಅವರು ಉಬರಡ್ಕದ ಮನೆಯೊಂದರಲ್ಲಿ ಕುಟುಂಬ ಸಮೇತರಾಗಿ ಕೆಲಸಕ್ಕಿದ್ದರು.
ಆತ್ಮ ಹತ್ಯೆ ಮಾಡಿಕೊಳ್ಳುವ ಮೊದಲು ಪೋನ್ ಮಾಡಿ ಸ್ಥಳೀಯ ಮಹಿಳೆಯೊಬ್ಬವರಿಗೆ ತಾನು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ರವಿ ತಿಳಿಸಿದ್ದರು ಎನ್ನಲಾಗಿದೆ. ಮಹಿಳೆ ಸಂಬಂಧ ಪಟ್ಟ ಸ್ಥಳೀಯ ಇತರ ವ್ಯಕ್ತಿಗಳಿಗೂ ಮಾಹಿತಿ ರವಾನಿಸಿದ್ದರು.ಸ್ವಲ್ಪ ಹೊತ್ತಲ್ಲಿ ಗುಂಡಿನ ಶಬ್ದ ಕಾಡಿನ ಅಂಚಿನಿಂದ ಕೇಳಿ ಬಂತು.ಕಾಡಿಗೆ ಹೋಗಿ ನೋಡಿದ್ದಾಗ ಗುಂಡೇಟು ತಾಗಿ ರವಿ ರಕ್ತದ ಮಡುವಿಲ್ಲಿ ಬಿದ್ದಿದ್ದರು.
ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮಹಜರು ನಡೆಸಿದರರು. ಮೃತ ದೇಹವನ್ನು ಸುಳ್ಯದ ಮೆಡಿಕಲ್ ಕಾಲೇಜಿನಲ್ಲಿ ಇರಿಸಲಾಗಿದೆ.
ರವಿ ತಾಯಿ ಯಶೋಧ,ಹೆಂಡತಿ ಮನಸ್ವಿ ಸಹೋದರ ಮಂಜುನಾಥ,ಇಬ್ಬರು ಗಂಡು ಮಕ್ಕಳನ್ನು ಕುಟುಂಬಸ್ಥರನ್ನು ಬಂಧು ಬಳಗವನ್ನು ಅಗಲಿದ್ದಾರೆ.