ಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ. ಕೇಶವ ಹೆಗ್ಡೆ ಕೊರ್ಸೆ ಅವರಿಂದ ಉಪನ್ಯಾಸ
ಬೆಂಗಳೂರು : ಜಲ ಸಂರಕ್ಷಣೆಯ ಬಗ್ಗೆ , ಕೆರೆಗಳ ಪುನರುಜ್ಜೀವನದ ಬಗ್ಗೆ ಸಂಬಂಧಪಟ್ಟ ತಜ್ಞ ಸಂಪನ್ಮೂಲ ವ್ಯಕಿಗಳ ಭಾಗವಹಿಸುವಿಕೆಯೊಂದಿಗೆ ಸತತ ಕಾಯಕ್ರಮವನ್ನು ಮಾಡುತ್ತಿರುವ ಐಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆ ಈ ಸಾರಿ ಮಳೆ ನೀರು ಕೊಯ್ಲು , ಸಂಗ್ರಹಣೆ ಮತ್ತು ನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಗಮನ ಹರಿಸಿದೆ .
ಸಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಪರಿಸರ ಪ್ರೇಮಿಸಸ್ಯ ಮತ್ತು ಜೈವಿಕ ವಿಜ್ಞಾನಿ ಡಾ. ಕೇಶವ ಹೆಗ್ಡೆ ಕೊರ್ಸೆ ಇವರು ನೀರಿನನಾರನ್ನು ಕೊಯ್ಲಿನ ಪ್ರಾಮುಖ್ಯತೆ , ಮನೆ ಮನೆಗಳಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಬಳಕೆ ಹಾಗೂ ಮಳೆಯ ನೀರನ್ನು ಅಂತರ್ಜಲವಾಗಿ ಭೂಮಿಗಿಳಿಸುವ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಡಲಿದ್ದಾರೆ . ಕಾರ್ಯಕ್ರಮವು ಜೂಲೈ ತಿಂಗಳ ಎರಡನೇ ತಾರೀಕು ಭಾನುವಾರ ಸಂಜೆ 7:30 ಗಂಟೆಗೆ zoom virtual ವೇದಿಕೆಯಲ್ಲಿ ಐಲೇಸಾದ ಶ್ರೀ ಅನಂತ್ ರಾವ್ ನಡೆಸಿಕೊಡಲಿದ್ದು ಎಲ್ಲಾ ಆಸಕ್ತ ನಾಗರೀಕರು , ಮಾಡಲಾಗಿದೆಥಿಗಳು Zoom Meeting Id:81978777104 ಮತ್ತು Passcode: ilesa ಬಳಸಿಕೊಂಡು ಈ ಅತ್ಯವಶ್ಯಕ ಮತ್ತು ಸಕಾಲಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮುಂದಿನ ಪೀಳಿಗೆಗೆ ನೀರು ಉಳಿಸುವಲ್ಲಿ ಮತ್ತು ನೀರಿನ ಬರಗಾಲ ತಪ್ಪಿಸುವಲ್ಲಿ ಸಹಕರಿಸಬೇಕೆಂದು ಐಲೇಸಾ ದ ರುವಾರಿಗಳಲ್ಲೋರ್ವರಾದ ಶಾಂತಾರಾಮ್ ಶೆಟ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅತಿಥಿಯ ಪರಿಚಯ:
ಡಾ. ಕೇಶವ ಹೆಗ್ಡೆ ಕೊರ್ಸ್
ಸಿರಸಿ ತಾಲೂಕು ಬಿಸಿಲ ಕೊಪ್ಪದ ಶಿವಳ್ಳಿಯ ಕೊರ್ಸೆಯಲ್ಲಿ ಮಹಾಬಲ ಹೆಗ್ಡೆ ಮತ್ತು ಗೌರಿ ಹೆಗ್ಡೆ ದಂಪತಿಗಳ ಸುಪುತ್ರನಾಗಿ ಜನಿಸಿದ ಕೇಶವ ಹೆಗ್ಡೆಯವರು ಬಾಲ್ಯ ಜೀವನದಲ್ಲಿ ಸದಾ ಹರಿದ್ವರ್ಣದ ಪಶ್ಚಿಮಘಟ್ಟ ಮತ್ತು ಸದಾ ಲವಲವಿಕೆಯ ಅಲೆಗಳ ಕಲೆಗಳ ನಾಡು ಕರಾವಳಿ ಪರಿಸರದಿಂದ ಪ್ರಭಾವಿತರಾದವರು
ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ Msc ಪಡೆದ ನಂತರ ಕೇಶವ ಹೆಗ್ಡೆಯವರು ಪಶ್ಚಿಮ ಘಟ್ಟದ ಮತ್ತು ಕರಾವಳಿ ಪ್ರದೇಶದ ಜೀವ ವೈವಿಧ್ಯ , ಜೈವಿಕ ಪರಿಸರ ಮತ್ತು ಔಷಧಿ ಗಿಡಮೂಲಿಕೆಗಳ ಕುರಿತು ಸಂಶೋಧನೆ ನಡೆಸಿ Phd ಪದವಿ ಗಳಿಸಿದವರು .
ಪರಿಸರದ ಬಗ್ಗೆ ಜನ ಜಾಗೃತಿ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿರುವ ಇವರು ಉಜಿರೆಯ SDM ಕಾಲೇಜಿನಲ್ಲಿ ಸಸ್ಯಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದ ಬಗ್ಗೆ ಹಲವಾರು ವಿದ್ಯಾರ್ಥಿಗಳಿಗೆ ಸುಮಾರು ಎರಡು ದಶಕಗಳ ಕಾಲ ಅಧ್ಯಾಪನ ವೃತ್ತಿಯ ಮೂಲಕ ತನ್ನ ಜ್ಞಾನವನ್ನು ಧಾರೆಯೆರೆದವರು .
ಸಂಶೋಧನಾ ಪ್ರವೃತ್ತಿಯ ಕೃಷಿಕರಾಗಿರುವ ಡಾ. ಕೇಶವ ಹೆಗ್ಡೆಯವರು ಪ್ರಸ್ತುತ ಸಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಇಲ್ಲಿ ನಿರ್ದೇಶಕರಾಗಿದ್ದು
ಸಂತುಲಿತ ಕೃಷಿ ಅಥವಾ Integrated farming ಮೂಲಕ ಸಸ್ಯ ಶಾಸ್ತ್ರದ ಸಂರಕ್ಷಣೆ ಹಾಗೆಯೆ Sujnana Academy for Educational Research & Training ಇಲ್ಲಿಯೂ ನಿರ್ದೇಶಕರಾಗಿದ್ದು ನವ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂಫಿಲ್ ಮತ್ತು phd ಬಗ್ಗೆ ಮಾರ್ಗದರ್ಶನ ನೀಡುತ್ತಾ ಸಮಾಜದ ಸುವ್ಯವಸ್ಥೆಯಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಸಮರ್ಪಿಸಿಕೊಡು ಬಂದವರು.
ಅಮೆರಿಕಾದ ಜಾರ್ಜಿಯಾ ಗವರ್ನರ್ ಅವರಿಂದ Honorary Citizenship of Georgia ಗೌರವ ಪಡೆದಿರುವ ಡಾ. ಹೆಗ್ಡೆಯವರು ಪಶಿಮಘಟ್ಟ ಪರಿಸರ ಉಳಿಸುವಿಕೆಯಲ್ಲಿ ತೊಡಗಿ ಕರ್ನಾಟಕ ಸರಕಾರ ಕೊಡಮಾಡುವ ”ಪರಿಸರ ಶ್ರೀ” ಪುರಸ್ಕಾರಕ್ಕೆ ಭಾಜನರಾದವರು . ಪಶಿಮಘಟ್ಟ ಟಾಸ್ಕ್ ಫೋರ್ಸ್ ಮತ್ತು ಔಷಧೀಯ ಸಸ್ಯಗಳ ಪ್ರಾಧಿಕಾರಕ್ಕೆ ಸಂಪನ್ಮೂಲ ಸಲಹೆಗಾರರಾಗಿ ಕರ್ನಾಟಕ ಸರಕಾರದಿಂದ ಆಯ್ಕೆಯಾಗಿದ್ದ ಇವರು 2008ರಲ್ಲಿ ”ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾದವರು. .ಪ್ರಸ್ತುತ ಸಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಜಲ ಮೂಲ ರಕ್ಷಣೆ , ಔಷಧೀಯ ಸಸ್ಯ ಸಂಕುಲ ರಕ್ಷಣೆಯಲ್ಲಿ ಸಂತುಲಿತ ಕೃಷಿಕನಾಗಿ ತೊಡಗಿಕೊಂಡು ಸಾವಿರಾರು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜುಲೈ 02 2023ನೇ ತಾರೀಕು ಸಂಜೆ 07:30ಕ್ಕೇ ಸರಿಯಾಗಿ ಕೆಳಗೆ ನಮೂದಿಸಿದ ಲಿಂಕ್ ಮೂಲಕ ಭಾಗವಹಿಸಿ, ಮಾಹಿತಿ ಪಡೆಯಲು ಮನವಿ:
https://us06web.zoom.us/j/81978777104?pwd=UmZISXc3RUR3Q2s5TEFCVWlEYXJmdz09
ಈ ಕಾರ್ಯಕ್ರಮವು “https://youtube.com/@iLesaTheMusicChannel” ಅಲ್ಲಿ ನೇರ ಪ್ರಸಾರದ ವ್ಯವಸ್ಥೆ ಕೂಡ ಮಾಡಲಾಗಿದೆ.