ಅಸ್ತಮಾ ಕಾಯಿಲೆಗೆ ಆಡುಸೋಗೆ ರಾಮ ಬಾಣ

ಮನೆ ಮದ್ದು

ಆಡುಸೋಗೆಗೆ ಬಹು ಉಪಯೋಗಿ ಔಷಧೀಯ ಗುಣವಿದೆ.ಆಡುಸೋಗೆ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2 ಬಾರಿ ಸೇವಿಸಿದರೆ ಗಂಟಲು ಉರಿ, ಕೆಮ್ಮು ಕಡಿಮೆಯಾಗುತ್ತದೆ.ಆಡುಸೋಗೆ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2 ಬಾರಿ ಸೇವಿಸಿದರೆ ಗಂಟಲು ಉರಿ, ಕೆಮ್ಮು ಮತ್ತು ಹಳದಿ ಅಥವಾ ಹಸಿರು ಕಫ ಇದ್ದರೆ ಬೇಗ ಶಮನವಾಗುತ್ತದೆ.ಮೊಣಕಾಲು, ಮಂಡಿಗಳಲ್ಲಿ ಊತ, ನೋವು ಮತ್ತು ಕೆಂಪಾಗಿದ್ದರೆ ಆಡುಸೋಗೆ ಎಲೆಯನ್ನು ಎಳ್ಳೆಣ್ಣೆಯಲ್ಲಿ ಬೇಯಿಸಿ ಬಟ್ಟೆಯಲ್ಲಿಟ್ಟು ಕಟ್ಟಿದರೆ ಊತ, ನೋವು ಬೇಗ ಕಡಿಮೆಯಾಗುತ್ತದೆ.ಅಸ್ತಮಾ ಇದ್ದರೆ ಆಡುಸೋಗೆ ಎಲೆಯ ರಸಕ್ಕೆ ಶುಂಠಿ ರಸ ಮತ್ತು ಜೇನುತುಪ್ಪ ಸೇರಿಸಿ ದಿನಕ್ಕೆ 2 ರಿಂದ 4 ಬಾರಿ ಸೇವಿಸಿದರೆ ಆಸ್ತಮಾ ನಿವಾರಣೆಯಾಗುತ್ತದೆ.ಅಂಗೈ ಮತ್ತು ಅಂಗಾಲಿನಲ್ಲಿ ಉರಿ ಹೆಚ್ಚಿದ್ದರೆ ಆಡುಸೋಗೆ ಎಲೆಯ ಕಷಾಯ ಮಾಡಿ ಅದರಲ್ಲಿ ಅಂಗೈಮತ್ತು ಅಂಗಾಲನ್ನು 10 ರಿಂದ 15 ನಿಮಿಷ ಇಟ್ಟರೆ ಉರಿ ಬೇಗ ಶಮನವಾಗುತ್ತದೆ.ಹೊಟ್ಟೆಯಲ್ಲಿ ಹುಣ್ಣಾಗಿದ್ದು ಉರಿ, ನೋವಿದ್ದರೆ ಆಡುಸೋಗೆ ಎಲೆಯ ಪುಡಿಗೆ ಜೇಷ್ಠಮಧು ಪುಡಿ ಮತ್ತು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ಹೊಟ್ಟೆ ಹುಣ್ಣು ಗುಣವಾಗುತ್ತದೆ.ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಆಡುಸೋಗೆ ಎಲೆಗಳನ್ನು ಪೇಸ್ಟ್‌ ಮಾಡಿ ವಸಡುಗಳಿಗೆ ಲೇಪ ಮಾಡಿದರೆ ರಕ್ತ ನಿಲ್ಲುತ್ತದೆ. ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ಆಡುಸೋಗೆ ಬೇರಿನ ಕಷಾಯವನ್ನು ಸೇವಿಸಿದರೆ ಪ್ರಯೋಜನವಿದೆ.ಋುತುಸ್ರಾವ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುತ್ತಿದ್ದರೆ ಆಡುಸೋಗೆ ಎಲೆ ಪುಡಿಗೆ ಅದರದೇ ಕಷಾಯ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ. (ಸಂಗ್ರಹ ಬರಹ)

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top