ಬಸ್ಸಿನಡಿ ಮಲಗಿ ಫ್ರೀ ಬಸ್ಸು ರದ್ದುಗೊಳಿಸಲು ಒತ್ತಾಯಿಸಿ ಆತ್ಮ ಹತ್ಯೆಗೆ ಯತ್ನಿಸಿದ ಪತಿ
ಫ್ರೀ ಬಸ್ ನಲ್ಲಿ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ನಾನು ಸಾಯ್ತಿನಿ ಅಂತಾ ಬಸ್ ನಡಿ ಬಿದ್ದು ಪತಿಯೊಬ್ಬ ಆತ್ಮ ಹತ್ಯೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.
ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ಧ ಗಂಟೆಗೂ ಹೆಚ್ಚು ಕಾಲ ಕಿರಿಕ್ ಮಾಡಿದ್ದಾನೆ. ಈತನ ಅವಾಂತರದಿಂದ ಬಸ್‌ನಲ್ಲಿ ಕುಳಿತ ಪ್ರಯಾಣಿಕರ ಪರದಾಡುವಂತಾಯಿತು.
ಸಿದ್ದರಾಮಯ್ಯ ಸರಿಯಿಲ್ಲ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕು ಎಂದು ಅಂತ ಪತಿರಾಯ ಆಕ್ರೋಶ ಹೊರ ಹಾಕಿದ್ದಾನೆ. ಕೊನೆಗೆ ಸ್ಥಳೀಯರು ಈತನನ್ನು ಬಸ್ ಕೆಳಗಡೆಯಿಂದ ಹೊರಗೆ ಎಳೆದುವ ತಂದಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಅವಾಂತರವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.ಈ ದೃಶ್ಯ ಬಾರಿ ವೈರಲಾಗಿದೆ.