ತಿರುಪತಿ ಸಮೀಪದ ಜಲಪಾತದಲ್ಲಿ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್ ಅಮೀನ್ (23) ಮೃತರು ಯುವಕ ಸುಮಂತ್ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ತಂದೆ ಸುರೇಶ್ ಅಮೀನ್ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭಬಂಡೆಕಲ್ಲಿನಿಂದ 10 ಅಡಿಕೆಳಭಾಗಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ. ಇದನ್ನು ನೋಡಿದ ಸ್ನೇಹಿತ ಕೂಡಲೇ ಧಾವಿಸಿ ಸುಮಂತ್‌ನನ್ನು ಮೇಲಕ್ಕೆತ್ತಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೂಡಲೇಮನೆಯಲ್ಲಿರುವವರಿಗೆ ವಿಚಾರ ತಿಳಿಸಲಾಗಿದ್ದು ಮೃತದೇಹವನ್ನು ಕುಳಾಯಿ ಹೊನ್ನೆಕಟ್ಟೆಯಲ್ಲಿರುವ ಮನೆಗೆ ಕೊಂಡ್ಯೋಯಲಾಗಿದೆ.