ಮಗನ ಮದುವೆಯ ಮುನ್ನಾ ದಿನವಾದ ಜು.1ರಿಂದ ನಾಪತ್ತೆಯಾಗಿದ್ದ ಕುಂಬ್ರ ನಿವಾಸಿ ಉಮರ್ ಎಂಬವರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಗನ ಜೊತೆ ಪುತ್ತೂರಿಗೆ ಬಂದಿದ್ದ ಅವರು ದಿಢೀರನೆ ನಾಪತ್ತೆಯಾಗಿದ್ದರು. ಜು.3ರಂದು ಅವರ ಪುತ್ರ ಆಸಿಫ್ ವಿವಾಹ ಕಾರ್ಯ ನಡೆಯುವುದಿತ್ತು. ಮದುವೆಯ ಮದರಂಗಿ ಶಾಸ್ತ್ರದ ಮುನ್ನಾ ದಿನ ನಾಪತ್ತೆಯಾಗಿದ್ದ ಕಾರಣ ಮದರಂಗಿ ಮದುವೆ ರದ್ದಾಗಿತ್ತು. ಮದುವೆಯ ಬ್ಯುಸಿಯಲ್ಲಿದ್ದ ಮಗ ಅಪ್ಪನ ಹುಡುಕಾಟದಲ್ಲಿದ್ದರು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರ ಜೊತೆ ಕುಟುಂಬಸ್ಥರು ಅವರನ್ನು ಹುಡುಕಾಡಿದಾಗ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಮನೆಗೆ ಕರೆದುಕೊಂಡು ಬಂದಿದ್ದಾರೆ. ಇಂದು ಆಸಿಫ್ ವಿವಾಹ ನಡೆಯಲಿದೆ.