ಸುಳ್ಯ ತಾಲೂಕಿನಲ್ಲಿ ಭಾರೀ ಮಳೆ ಮಳೆಯಾಗುತ್ತಿರುವ ಹಿನ್ನಲೆಲ್ಲಿ ಅಲ್ಲಲ್ಲಿ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗುತ್ತಿವೆ.ತೊಡಿಕಾನ ಗ್ರಾಮದ ತೊಡಿಕಾನ. ಮಾವಿನಕಟ್ಟೆ ಬಾಳಕಜೆ ರಸ್ತೆಗೆ ಗುಡ್ಡ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ.ಸುಳ್ಯದ ಜಯನಗರ ಪರಿಸರದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಎರಡು ಮನೆಗಳ ಕಾಂಪೌಂಡ್ ಕುಸಿದು ಪಕ್ಕದ ಮನೆಯೊಂದರ ಶೀಟುಗಳುf ಹಾನಿಯಾದ ಘಟನೆ ವರದಿಯಾಗಿದೆ.ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿ ದಾಮೋದರ ಪಡಂಬೈಲು ಎಂಬುವವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ನೂತನವಾಗಿ ನಿರ್ಮಿಸಿದ್ದ ಮನೆಯ ಕಾಂಪೌಂಡ್ ಇದಾಗಿದ್ದು ಸುಮಾರು ನಷ್ಟ ಸಂಭವಿಸಿದೆ.ಅಲ್ಲೇ ಸಮೀಪದ ರುಖಿಯಾ ಎಂಬುವರ ಮನೆಯ ಕಾಂಪೌಂಡ್ ಜನಾರ್ದನ ಗೌಡ ಎಂಬುವವರ ಮನೆಯ ಹಿಂಬದಿಯ ಮೇಲ್ಚಾವಣಿಯ ಶೀಟಿನ ಮೇಲೆ ಬಿದ್ದು ಸುಮಾರು ಹತ್ತಕ್ಕೂ ಹೆಚ್ಚು ಶೀಟುಗಳು ಹಾನಿಯಾಗಿದೆ.