ಇಚ್ಲಂಪಾಡಿ: ಮಾರಕಾಯುಧದೊಂದಿಗೆ ಜಮೀನಿಗೆ ಒಳಗೆ ಅಕ್ರಮ ಪ್ರವೇಶ ಮಾಡಿ ಬೇಲಿ ತೆಗೆದು ಎಸೆದು ಹಾಕಿ ನಾಶಗೊಳಿಸಿದ್ದಾರೆ ಎಂದು ಆರೋಪಿಸಿ ಇಚ್ಲಂಪಾಡಿ ಗ್ರಾಮದ ಅಲಂಗ ಮೇಪರತ್ ನಿವಾಸಿ ಎಂ.ಎಂ.ತೋಮಸ್ ಎಂಬವರು ನೀಡಿದ ದೂರಿನಂತೆ ಅಲೆಕ್ಸ್ ವರ್ಗೀಸ್, ಪಿ.ಜೆ.ಜೋಸೆಫ್ ಹಾಗೂ ರೋಸಮ್ಮ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಸರ್ವೆ ನಂಬ್ರ: 128-2ರಲ್ಲಿ 0.85ಎಕ್ರೆ ಜಮೀನು ಹೊಂದಿದ್ದು, ಈ ಜಮೀನಿಗೆ ಜು.3ರಂದು ಬೆಳಿಗ್ಗೆ ಅಲೆಕ್ಸ್ ವರ್ಗೀಸ್, ಪಿ.ಜೆ. ಜೋಸೆಪ್, ರೋಸಮ್ಮ ಎಂಬವರು ಕೈಯಲ್ಲಿ ಮಾರಕಾಯುಧದೊಂದಿಗೆ ಅಕ್ರಮ ಪ್ರವೇಶ ಮಾಡಿ ಬೇಲಿ ಕಿತ್ತು ಹಾಕಿ ನಾಶ ಮಾಡಿರುತ್ತಾರೆ ಎಂದು ಎಂ.ಎಂ.ತೋಮಸ್‌ರವರು ದೂರು ನೀಡಿದ್ದಾರೆ. ಈ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 447, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.